ಅತ್ತೂರು ಜ್ಞಾನಗಂಗಾ ವಸತಿ ಶಾಲೆಯಲ್ಲಿ ಯುಕೆಜಿ ಮಕ್ಕಳ ಗ್ರಾಜುಯೇಷನ್ ಸಮಾರಂಭ ಸಂಭ್ರಮದಿAದ ನಡೆಯಿತು. ಪ್ರದೀಪ್ ಕುಮಾರ್, ಟಿ.ಕೆ. ಸುಧೀರ್, ಬಿ.ಎಸ್. ನಿಂಗಪ್ಪ, ಅನಂತಪದ್ಮನಾಭ, ಶೋಭಾ ಪದ್ಮನಾಭ, ಸತ್ಯಸುಲೋಚನಾ, ಕೆ.ಎಸ್. ಮೂರ್ತಿ ಮತ್ತಿತರರು ಇದ್ದರು.
ಸಮಾಜದಲ್ಲಿ ಇಂದು ವಿದ್ಯಾವಂತರಿAದಲೇ ಹೆಚ್ಚಿನ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿರುವುದರಿಂದ ಇಂದಿನ ಎಳೆಯ ಮಕ್ಕಳಿಗೆ ಸಂಸ್ಕಾರ ತುಂಬಿದ ಶಿಕ್ಷಣ ಅತಿ ಅಗತ್ಯವಿದೆ ಎಂದು ಕುಶಾಲನಗರ ವೃತ್ತ ನಿರೀಕ್ಷಕ ಪ್ರದೀಪ್ ಕುಮಾರ್ ಹೇಳಿದರು. ಅತ್ತೂರು ಜ್ಞಾನಗಂಗಾ ವಸತಿ ಶಾಲೆಯಲ್ಲಿ ಶನಿವಾರ ನಡೆದ ಯುಕೆಜಿ ಮಕ್ಕಳ ಗ್ರಾಜುಯೇಷನ್ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣದೊಂದಿಗೆ ಇಂದು ಉತ್ತಮ ಸಂಸ್ಕಾರ ನೀಡಿದರೆ ವೃದ್ದಾಪ್ಯದಲ್ಲಿ ಪ್ರಯೋಜನಕ್ಕೆ ಬರುತ್ತದೆ. ಏಕೆಂದರೆ ಸಮಾಜದಲ್ಲಿ ಇಂದು ನಡೆಯುತ್ತಿರುವ ಎಲ್ಲಾ ದುಷ್ಕೃತ್ಯಗಳು, ಅಕ್ರಮ, ಅನ್ಯಾಯ ಮೊದಲಾದ ಸಮಾಜ ಬಾಹಿರ ಕೃತ್ಯಗಳು ವಿದ್ಯಾವಂತರಿAದಲೇ ನಡೆಯುತ್ತಿರುವುದರಿಂದ ಪೋಷಕರು ಇಂದಿನಿAದಲೇ ಎಚ್ಚೆತ್ತುಕೊಳ್ಳುವ ಮೂಲಕ ಭವಿಷ್ಯದ ಉತ್ತಮ ಸಮಾಜ ನಿರ್ಮಾಣದ ಕುಡಿಗಳನ್ನು ಇಂದಿನಿAದಲೇ ತಯಾರಿಗೊಳಿಸಬೇಕು. ಅದು ಮನೆಯಂಗಳದಿAದ ಹಾಗೂ ಶಾಲಾ ತರಗತಿಗಳಿಂದಲೇ ಆರಂಭವಾಗಬೇಕಿದೆ. ಹಿಂದೆಲ್ಲಾ ಕನ್ನಡ ಶಾಲೆಗಳಲ್ಲಿ ಕಲಿಯುತ್ತಿದ್ದ ಮಕ್ಕಳು ಮರ ಏರುತ್ತಿದ್ದರು, ಕೆರೆ ತೋಡುಗಳಲ್ಲಿ ಈಜುತ್ತಿದ್ದರು, ಮರ ಹತ್ತಿ ಇಳಿಯುತ್ತಾ ಜೀವನ ಪಾಠವನ್ನು ಕಲಿಯುತ್ತಿದ್ದರು. ಶಾಲೆಗಳಲ್ಲಿ ಅಂದು ಉತ್ತಮವಾದ ನೀತಿಪಾಠಗಳೂ ಇದ್ದವು. ಆದರೆ ಇಂದಿನ ವ್ಯತರ‍್ಯಕ್ತ ಕಾಲಘಟ್ಟದಲ್ಲಿ ಇರುವ ನಾವು ನಮ್ಮ ಪರಿಸರದ ಮೇಲಿನ ಎಲ್ಲಾ ಏರಿಳಿತಗಳನ್ನು ನೋಡುತ್ತಿರುವ ಕಾರಣ ಒಳಿತಿನತ್ತಾ ಮಕ್ಕಳನ್ನು ಒಯ್ಯುವ ಬಗ್ಗೆ ಚಿಂತಿಸಬೇಕಾಗಿದೆ ಎಂದರು.
ಜ್ಞಾನ ಗಂಗಾ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಅಧ್ಯಕ್ಷ ಟಿ.ಕೆ. ಸುಧೀರ್ ಮಾತನಾಡಿ, ಎಳೆಯ ಮಕ್ಕಳ ಸರ್ವತೋಮುಖ ಪ್ರಗತಿಯೇ ಜ್ಞಾನಗಂಗಾ ಶಾಲೆಯ ಮಹದುದ್ದೇಶವಾಗಿದೆ ಎಂದು ಹೇಳಿದರು.
ಸಂಸ್ಥೆಯ ಕಾರ್ಯದರ್ಶಿ ಬಿ.ಎಸ್. ನಿಂಗಪ್ಪ, ಟ್ರಸ್ಟಿಗಳಾದ ಅನಂತಪದ್ಮನಾಭ, ಶೋಭಾ ಪದ್ಮನಾಭ, ಪ್ರಾಂಶುಪಾಲೆ ಸತ್ಯಸುಲೋಚನಾ, ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್. ಮೂರ್ತಿ, ಶಾಲೆಯ ನರ್ಸರಿ ವಿಭಾಗದ ಶಿಕ್ಷಕರಾದ ಮರಿಯಾ, ಸಂಧ್ಯಾ, ಶಾನಿಲಾ, ಪುನೀತ್, ಹರೀಶ್ ಇದ್ದರು.
ಇದೇ ಸಂದರ್ಭ ಮಕ್ಕಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.