ಮೇ 29ರಿಂದ ಎರಡು ದಿನ ಜಿಲ್ಲಾ ಸಾಹಿತ್ಯ ಸಮ್ಮೇಳನ

 ಕೊಡಗು ಜಿಲ್ಲಾ ಸಾಹಿತ್ಯ ಸಮ್ಮೇಳನ
ಕೊಡಗು ಜಿಲ್ಲಾ ಸಾಹಿತ್ಯ ಸಮ್ಮೇಳನ
Published on
ಸುಂಟಿಕೊಪ್ಪ: ಹದಿನೇಳನೇ ಕೊಡಗು ಜಿಲ್ಲಾ ಸಾಹಿತ್ಯ ಸಮ್ಮೇಳನ ಮೇ 29 ಮತ್ತು 30ರಂದು ಸುಂಟಿಕೊಪ್ಪದಲ್ಲಿ ನಡೆಯಲಿದೆ.
ಸಮ್ಮೇಳನದ ಹಿನ್ನಲೆಯಲ್ಲಿ ಸ್ಮರಣ ಸಂಚಿಕೆಯೊಂದನ್ನು ಹೊರತರಲಾಗುತ್ತಿದ್ದು ಈ ಸ್ಮರಣ ಸಂಚಿಕೆಗೆ ಲೇಖನ, ಕವನ, ಪ್ರಬಂಧ, ಚುಟುಕು ಸೇರಿದಂತೆ ಸಾಹಿತ್ಯಿಕ ರಚನೆಗಳನ್ನು ಆಹ್ವಾನಿಸಲಾಗಿದೆ.
ಲೇಖನಗಳನ್ನು ಡಿಟಿಪಿ ಮಾಡಿ 800 ಶಬ್ದಗಳಿಗೆ ಅಥವಾ 4 ಪುಟಗಳಿಗೆ ಮೀರದಂತೆ ಹಾಗೂ ಸಾಹಿತ್ಯಿಕ ರಚನೆಗಳನ್ನು ಬಿಳಿ ಹಾಳೆಯ ಒಂದೇ ಬದಿಯಲ್ಲಿ ಕೈ ಬರಹ/ಡಿಟಿಪಿ ಮಾಡಿದ್ದನ್ನು ಮೇ 15 ರೊಳಗಾಗಿ ಸಂಪಾದಕರು, ಸ್ಮರಣ ಸಂಚಿಕೆ ಸಮಿತಿ, ಚಿತ್ರ ಸ್ಟುಡಿಯೋ, ಕನ್ನಡ ವೃತ್ತ, ಸುಂಟಿಕೊಪ್ಪ ಅಂಚೆ-571 237, ಕೊಡಗು ಜಿಲ್ಲೆ, ಈ ವಿಳಾಸಕ್ಕೆ ಕಳುಹಿಸುವಾಗ ಲೇಖಕರು ತಮ್ಮ ಭಾವಚಿತ್ರದೊಂದಿಗೆ ತಮ್ಮ ಸ್ವ ವಿವರ, ಮೊಬೈಲ್ ಸಂಖ್ಯೆಯನ್ನು ಸ್ಪಷ್ಟವಾಗಿ ಬರೆದು ಕಳುಹಿಸಬೇಕು.
ಲೇಖನಗಳ ಆಯ್ಕೆಯ ತೀರ್ಮಾನ ಸಂಪಾದಕೀಯ ಮಂಡಳಿ ಹಾಗೂ ಜಿಲ್ಲಾ ಸಮಿತಿಯದ್ದಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net