ಕ್ರೀಡಾ ಜಿಲ್ಲೆಯಾದ ಕೊಡಗಿನಿಂದ 14 ಹಾಕಿ ಒಲಿಂಪಿಯನ್ನರು, ಇಬ್ಬರು ಅಥ್ಲೆಟಿಕ್ ಒಲಿಂಪಿಯನ್ನರು ದೇಶಕ್ಕೆ ಕೀರ್ತಿ ತಂದಿದ್ದಾರೆ. ಅದರಲ್ಲೂ ಒಲಿಂಪಿಯನ್ ಅರ್ಜುನ್ ಹಾಲಪ್ಪ ಒ.ಎಲ್.ವಿ.ಶಾಲೆಯ ಹಳೆಯ ವಿದ್ಯಾರ್ಥಿ ಎಂಬುದೇ ಶಾಲೆಗೆ ಹೆಮ್ಮೆ ಎಂದು ಹೇಳಿದರು. ಮುಖ್ಯ ಶಿಕ್ಷಕಿ ಸಿಸ್ಟರ್ ನಿರ್ಮಲಾ, ಆಡೆಲೇಡ್ ಡಿಸೋಜ, ಆಸೆಸ್ಟ್ ಡಿಸೋಜ, ದೈಹಿಕ ಶಿಕ್ಷಣ ಶಿಕ್ಷಕರಾದ ಮೋಹನ್, ಯುವರಂಜನ್, ಶಿಕ್ಷಕಿಯರಾದ ರೀಟಾ ಲೋಬೊ, ಮೇರಿಟಾ ಜಾನ್ ಪಿಂಟೊ ಇದ್ದರು.