ಸಿದ್ದಾಪುರ : ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎಸ್.ರಾಚಯ್ಯ ಅವರನ್ನು ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಶನಿವಾರ ಗೌರವಿಸಿದರು.
ಕಾರ್ಯಕ್ರಮ ನಿಮಿತ್ತ ವಿರಾಜಪೇಟೆಗೆ ಆಗಮಿಸಿದ್ದ ನ್ಯಾಯಮೂರ್ತಿಗಳನ್ನು ವಿರಾಜಪೇಟೆ ನ್ಯಾಯಾಲಯದ ಆವರಣದಲ್ಲಿ ಆತ್ಮೀಯವಾಗಿ ಸ್ವಾಗತಿಸಿದ ಶಾಸಕರು, ನ್ಯಾಯಾಲಯಕ್ಕೆ ಸಂಬಂಧಿಸಿದ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಇತರ ಅಗತ್ಯ ವಿಷಯಗಳ ಕುರಿತು ಚರ್ಚಿಸಿದರು.
ಈ ಸಂದರ್ಭದಲ್ಲಿ ನ್ಯಾಯಾಧೀಶರು ಹೊಸಮನಿ ಪುಂಡಲೀಕ್, ನಟರಾಜ್, ಮಂಜುನಾಥ್, ಅಡ್ವೋಕೇಟ್ ಅಸೋಸಿಯೇಷನ್ ಅಧ್ಯಕ್ಷ ಸಿ.ಕೆ.ಪೂವಣ್ಣ, ಕಾರ್ಯದರ್ಶಿ ಪ್ರಶಾಂತ್, ಹಿರಿಯ ವಕೀಲರಾದ ಪ್ರಮೋದ್, ಬೊಳ್ಳಚಂಡ ಸೋಮಣ್ಣ ಸೇರಿದಂತೆ ಇತರರು ಇದ್ದರು.