ಬುಡಕಟ್ಟು ನಾಗರಹೊಳೆ ಆದಿವಾಸಿ ಜಮ್ಮಪಾಳೆ ಹಕ್ಕು ಸ್ಥಾಪನಾ ಸಮಿತಿ ಗ್ರಾಮಸಭೆ ಒಕ್ಕೂಟ, ಬಾಳೆಕೊವುಹಾಡಿ, ತುಂಡುಮುAಡಗೆ ಕೊಲ್ಲಿ, ಗದ್ದೆಹಾಡಿ, ಬೇಗೂರುಪಾರೆ, ನಾಣಚ್ಚಿ ಗದ್ದೆ ಹಾಡಿ ಗ್ರಾಮಸಭೆ ಸದಸ್ಯರುಗಳ ವತಿಯಿಂದ ನಡೆದ ಪ್ರತಿಭಟನೆ ವೇಳೆ ನಮಗೆ ಕ್ರಿಕೆಟ್ ಆಡುವ ಹಕ್ಕು ಇಲ್ಲವೇ ? ಎಂದು ಪ್ರಶ್ನಿಸಿದರು. ನಾಗರಹೊಳೆ ಗೇಟ್‌ನಲ್ಲಿ ಕ್ರಿಕೆಟ್ ಆಡಲು ದೊಡ್ಡ ಪ್ರಮಾಣದ ಮರಗಳ ಹಾನನ ನಡೆದಿದೆ ಎಂದು ಡೋಂಗಿ ಪರಿಸರವಾದಿಗಳು ದೂರು ನೀಡಿದ್ದಾರೆ. ಇದನ್ನೇ ನಂಬಿಕೊAಡ ಸಚಿವರು ಬುಡಕಟ್ಟು ಸಮುದಾಯದವರ ಹಕ್ಕಿನ ಮೇಲೆ ಚ್ಯುತ್ತಿ ಬರುವಂತೆ ವರ್ತಿಸಿರುವುದು ವೇದನೆಯ ವಿಚಾರವಾಗಿದೆ. ತಲೆತಲಾಂತರಗಳಿAದ ಕಾಡಿನಲ್ಲಿ ವಾಸಿಸುತ್ತ ಈ ನೆಲದ ಜೈವಿಕ ವಿವಿಧತೆಯನ್ನು ಕಾಪಾಡಿಕೊಳ್ಳುತ್ತಿರುವ ಮತ್ತು ವನ್ಯ ಪ್ರಾಣಿಗಳ ಬಗ್ಗೆ ವಿಶೇಷ ಕಾಳಜಿಯನ್ನು ಹೊಂದಿರುವ, ಪರಿಸರವನ್ನೇ ದೇವರುಗಳು ಎಂದು ಪೂಜಿಸುವ ಬುಡಕಟ್ಟು ಜನರ ನಡೆಯ ಬಗ್ಗೆ ಪ್ರಶ್ನೆ ಮಾಡಿರುವುದು ಕಾಳಜಿ ಸರ್ಕಾರದ ಲಕ್ಷಣವಲ್ಲ. ನಾಗರಹೊಳೆ ಪ್ರದೇಶದಲ್ಲಿ ಖಾಸಗಿ ರೆಸಾರ್ಟ್ ನಡೆಸಲು ಮುಂದಾದಾಗ ಅದನ್ನು ವಿರೋಧಿಸಿ ಹೋರಾಟ ನಡೆಸಿದವರು ಬಡಕಟ್ಟು ಸಮುದಾಯದವರು. ನಾವುಗಳು ಪವಿತ್ರವೆಂದು ಪರಿಗಣಿಸುವ ಹುಲಿ, ಆನೆ, ಕರಡಿ, ನವಿಲು, ಕಾಡುನಾಯಿ ಹಾಗೂ ಇನ್ನಿತರ ಅನೇಕ ವನ್ಯಪ್ರಾಣಿಗಳು ಪ್ರವಾಸೋದ್ಯಮದ ಪ್ರದರ್ಶನವಾಗಬಾರದು ಎಂಬ ಉದ್ದೇಶದೊಂದಿಗೆ ಸರ್ಕಾರ ನಾಗರಹೊಳೆಯನ್ನ ಪ್ರವಸೋದ್ಯಮದಕ್ಕೆ ಉತ್ತೇಜಿಸುವ ವಿರುದ್ಧ ಧ್ವನಿ ಎತ್ತಿದವರು ನಾವು. ಹೀಗೆ ಕಾಡಿನಲ್ಲಿ ಬದುಕು ಕಂಡುಕೊAಡ ಜನಾಂಗದ ಮೇಲೆ ಹಕ್ಕಿನ ವಿಚಾರವಾಗಿ ದೌರ್ಜನ್ಯ ಮಾಡುತ್ತಿರುವುದು ಬಹಳ ನೋವಿನ ವಿಚಾರವಾಗಿದೆ ನಮ್ಮನ್ನ ಈ ಕಾಡಿನಿಂದ ಸ್ಥಳಾಂತರಿಸಲು ಈ ರೀತಿಯ ಹುನ್ನಾರಗಳು ಸದಾ ನಮ್ಮ ಬೆನ್ನ ಹಿಂದೆ ನಡೆಯುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.