ಧರ್ಮಸ್ಥಳ ಯೋಜನೆಯಿಂದ ತರಬೇತಿ ಕಾರ್ಯಾಗಾರ

 ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಆಯೋಜಿಸಿದ್ದ ತರಬೇತಿ ಕಾರ್ಯಾಗಾರವನ್ನು ಅಂಬೇಡ್ಕರ್ ಭವನ ನಿರ್ವಹಣಾ ಸಮಿತಿಯ ಅಧ್ಯಕ್ಷ ಕೆಂಚೇಶ್ವರ ಉದ್ಘಾಟಿಸಿದರು. ಹನುಮಂತಪ್ಪ ಅಂಗಡಿ, ಸುಧೀರ್, ಪವಿತ್ರಾಕ್ಷಿ, ರೂಪಾ, ಸ್ವಾಮಿ, ಶಾಲಿನಿ, ರಾಣಿ, ಸುಧಾ ಇದ್ದರು.

Published on

ಶನಿವಾರಸಂತೆ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೋಮವಾರಪೇಟೆ ತಾಲೂಕು ಸಮಿತಿಯಿಂದ ಕೊಡ್ಲಿಪೇಟೆ ವಲಯದ ಒಕ್ಕೂಟದ ಪದಾಧಿಕಾರಿಗಳಿಗೆ ಕೊಡ್ಲಿಪೇಟೆ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿತ್ತು.

ಸಂಘದ ತಾಲೂಕು ಯೋಜನಾಧಿಕಾರಿ ಹನುಮಂತಪ್ಪ ಅಂಗಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉದ್ದೇಶ, ಪದಾಧಿಕಾರಿಗಳ ನಾಯಕತ್ವ ಗುಣ, ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಕುಶಾಲನಗರದ ವಲಯದ ಮೇಲ್ವಿಚಾರಕ ಸುಧೀರ್, ಮೇಲ್ವಿಚಾರಕಿ ಪವಿತ್ರಾಕ್ಷಿ ಮಾತನಾಡಿದರು. ಆಂತರಿಕ ಲೆಕ್ಕಪರಿಶೋಧಕಿ ರೂಪಾ ಸಂಘಗಳ ನಿರ್ಣಯ ಪುಸ್ತಕ ನಿರ್ವಹಣೆ ಬಗ್ಗೆ ತಿಳಿಸಿದರು.
ಅಂಬೇಡ್ಕರ್ ಭವನ ನಿರ್ವಹಣಾ ಸಮಿತಿಯ ಅಧ್ಯಕ್ಷ ಕೆಂಚೇಶ್ವರ, ಸಂಘದ ಕೃಷಿ ಅಧಿಕಾರಿ ಸ್ವಾಮಿ, ಕೊಡ್ಲಿಪೇಟೆ ವಲಯ ಮೇಲ್ವಿಚಾರಕಿ ಶಾಲಿನಿ, ಸೇವಾ ಪ್ರತಿನಿಧಿಗಳಾದ ರಾಣಿ, ಸುಧಾ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net