ಹುಲ್ಲು ತುಂಬಿದ್ದ ಲಾರಿ ವಿರಾಜಪೇಟೆ ಕಡೆಯಿಂದ ಗೋಣಿಕೊಪ್ಪ ಕಡೆಗೆ ಸಂಚರಿಸುವಾಗ ಬೆಳಗ್ಗೆ 9 ಗಂಟೆಯಲ್ಲಿ ಹಠಾತ್ ಲಾರಿ ಆಕ್ಸಲ್ ಮುರಿದು ರಸ್ತೆಯಲ್ಲಿ ನಿಂತಿತು. ಈ ವೇಳೆ ವಿರಾಜಪೇಟೆ ಕಡೆಯಿಂದ ಸರಕು ತುಂಬಿದ ಮತ್ತೊಂದು ಲಾರಿ, ಕೆಟ್ಟು ನಿಂತಿದ್ದ ಲಾರಿ ಪಕ್ಕದಲ್ಲಿ ಮುಂದೆ ಸಾಗಲು ಯತ್ನಿಸಿ ರಸ್ತೆ ಬದಿಯ ಕೆಸರಿನಲ್ಲಿ ಸಿಲುಕಿಕೊಂಡಿತು. ಇದರಿಂದ ಎರಡೂ ಲಾರಿಗಳು ಸುಮಾರು ಒಂದು ಗಂಟೆವರೆಗೆ ಹೆದ್ದಾರಿಯಲ್ಲಿ ನಿಂತ ಪರಿಣಾಮ ವಾಹನ ಸಂಚಾರ ಅಸ್ತವ್ಯಸ್ತವಾಗಿ ವಾಹನ ದಟ್ಟಣೆ ಉಂಟಾಗಿದೆ. ಬಳಿಕ ಕ್ರೇನ್‌ನಿಂದ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಯಿತು.