ಏ.7ರಿಂದ ಸುಗ್ಗಿ ಉತ್ಸವ ಪ್ರಾರಂಭವಾಗಿದ್ದು, ಪುಷ್ಪಗಿರಿ ಬೆಟ್ಟಕ್ಕೆ ತೆರಳಿ ಮಳೆ ಕರೆಯುವ ಅಚರಣೆಯೊಂದಿಗೆ ಪ್ರಸಕ್ತ ಸಾಲಿನ ಸುಗ್ಗಿಗೆ ಚಾಲನೆ ನೀಡಲಾಗಿದೆ. ನಂತರ ಬೀರೇದೇವರ ಪೂಜೆ, ಗುಮ್ಮನ ಮಾರಿ ಪೂಜೆ, ಅಂಗಳ ಶುಚಿತ್ವ ಹಾಗೂ ಬಾವಿಗದ್ದೆ ಊಟ, ಊರೊಡೆಯನ ಪೂಜೆ, ಔತಣಮಕ್ಕಿ ಪೂಜೆ ಮತ್ತು ಅಗ್ನಿ ಕೊಂಡ ಹಾಯುವುದು, ತೆಂಗಿನ ಕಾಯಿಗೆ ಗುಂಡು ಹೊಡೆಯುವ ಪೂಜಾ ವಿಧಿವಿಧಾನಗಳು ನೆರವೇರಿವೆ.