ನಾಳೆ ಮಹಾದೇವ ಕೋಟ ದೇಗುಲದ ವಾರ್ಷಿಕ ಉತ್ಸವ

ಮಹಾದೇವ ಕೋಟ ದೇವಸ್ಥಾನ.
ಮಹಾದೇವ ಕೋಟ ದೇವಸ್ಥಾನ.
Published on
ನಾಪೋಕ್ಲು: ಇಲ್ಲಿಗೆ ಸಮೀಪದ ಈಸ್ಟ್ ಕೊಳಕೇರಿಯ ಬಿದ್ದಾಟಂಡ ವಾಡೆ ಸಮೀಪದ ಮಹಾದೇವ ಕೋಟ ದೇವಸ್ಥಾನದ ವಾರ್ಷಿಕ ಉತ್ಸವ ಮೇ 10ರಂದು ನಡೆಯಲಿದೆ.
ಅಂದು ಬೆಳಗ್ಗೆ 7.30ಕ್ಕೆ ಗಣಪತಿ ಹೋಮ, 10ಕ್ಕೆ ರುದ್ರಾಭಿಷೇಕ, 11ಕ್ಕೆ ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ ಹಾಗೂ ಅನ್ನದಾನ ನೆರವೇರಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ದೇವಾಲಯದ ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net