ತೊಡಿಕಾನ ಕುಂಟು ಕಾಡು ರಸ್ತೆಯ ಕೆಸರುಮಯ

ತೊಡಿಕಾನ ಗ್ರಾಮದ ಕುಂಟು ಕಾಡು ರಸ್ತೆಯ ದುಸ್ಥಿತಿ .
ತೊಡಿಕಾನ ಗ್ರಾಮದ ಕುಂಟು ಕಾಡು ರಸ್ತೆಯ ದುಸ್ಥಿತಿ .
Published on
ನಾಪೋಕ್ಲು: ಮಳೆಗಾಲ ಆರಂಭವಾಗುತ್ತಿದ್ದಂತೆ ಗ್ರಾಮೀಣ ರಸ್ತೆಗಳ ದುಸ್ಥಿತಿ ಹೇಳುತೀರದಾಗಿದೆ. ಇದಕ್ಕೊಂದು ಉದಾಹರಣೆ ತೊಡಿಕಾನ ಗ್ರಾಮದ ಕುಂಟು ಕಾಡು ರಸ್ತೆ.
ಮಳೆಯ ಕಾರಣದಿಂದ ರಸ್ತೆ ಸಂಪೂರ್ಣ ಕೆಸರುಮಯವಾಗಿದೆ. ಕೆಸರಿನ ರಸ್ತೆಯಲ್ಲಿ ವಾಹನ ಚಾಲಕರು ಜಾರುತ್ತ ಜೀವದ ಹಂಗು ತೊರೆದು ಪ್ರಯಾಣಿಸುವಂತಾಗಿದೆ. ಕಳೆದ ವರ್ಷವೂ ಇದೇ ಸಮಸ್ಯೆ ಉದ್ಭವಿಸಿತ್ತು. ರಸ್ತೆಗೆ ಸೂಕ್ತ ಚರಂಡಿ ಇಲ್ಲದ ಕಾರಣ ಮಳೆ ನೀರು ರಸ್ತೆ ಮಧ್ಯದಲ್ಲಿ ಹರಿದು ಗುಂಡಿಗಳು ನಿರ್ಮಾಣವಾಗಿತ್ತು. ಇದರಿಂದಾಗಿ ಗ್ರಾಮಸ್ಥರು ವಾರ್ಡ್ ಸಭೆ, ಗ್ರಾಮ ಸಭೆಯಲ್ಲಿ ರಸ್ತೆ ದುರಸ್ತಿಗೆ ಒತ್ತಾಯಿಸಿದ್ದರು.
ತೊಡಿಕಾನ ಅಂಚೆ ಕಚೇರಿ ಬಳಿ 5 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟೀಕರಣ ಮಾಡುವ ಭರವಸೆ ಗ್ರಾಮಸ್ಥರಿಗೆ ದೊರೆತಿತ್ತು. ಆದರೆ ಕಾಮಗಾರಿ ನಡೆಯಲಿಲ್ಲ. ನಾಲ್ಕು ತಿಂಗಳ ಹಿಂದೆ ಮಣ್ಣು ಹಾಕಿ ಚರಂಡಿಯನ್ನು ಮುಚ್ಚಲಾಗಿತ್ತು. ಈ ವರ್ಷ ಮತ್ತೆ ಮಳೆಗಾಲ ಆರಂಭವಾಗಿದ್ದು ರಸ್ತೆ ಚಾರುಬಂಡಿಯಾಗಿದೆ. ಬೈಕ್ ಸವಾರರು ಸರ್ಕಸ್ ಮಾಡಿಕೊಂಡೇ ರಸ್ತೆಯಲ್ಲಿ ಚಲಿಸುವಂತಾಗಿದೆ. ರಸ್ತೆ ಸಮಸ್ಯೆಗೆ ಮುಕ್ತಿ ಕೊಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net