ಮಡಿಕೇರಿ ಸಮೀಪಕ್ಕೆ ಬಂದ ಹುಲಿರಾಯ

ಇಬ್ನಿಳವಾಡಿ ವ್ಯಾಪ್ತಿಯಲ್ಲಿ ಹುಲಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುವ ಅರಣ್ಯ ಇಲಾಖೆ ತಂಡ. ಅಭಿಷೇಕ್, ಸೆಂದಿಲ್ ಕುಮಾರ್, ಸುನಿಲ್ ಕುಮಾರ್, ರಂಜನ್ ಮತ್ತಿತರರು ಇದ್ದಾರೆ.
ಇಬ್ನಿಳವಾಡಿ ವ್ಯಾಪ್ತಿಯಲ್ಲಿ ಹುಲಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುವ ಅರಣ್ಯ ಇಲಾಖೆ ತಂಡ. ಅಭಿಷೇಕ್, ಸೆಂದಿಲ್ ಕುಮಾರ್, ಸುನಿಲ್ ಕುಮಾರ್, ರಂಜನ್ ಮತ್ತಿತರರು ಇದ್ದಾರೆ.
Published on
ಮಡಿಕೇರಿ
ವನ್ಯಜೀವಿ-ಮಾನವ ಸಂಘರ್ಷ ತೀವ್ರವಾಗಿರುವ ಕೊಡಗಿನಲ್ಲಿ ಇದರ ಬಿಸಿ ಈಗ ಜಿಲ್ಲಾ ಕೇಂದ್ರ ಮಡಿಕೇರಿಗೂ ಮುಟ್ಟಿದೆ. ನಗರದಿಂದ ಕೇವಲ 2 ಕಿಮೀ ದೂರದ ಕಾಫಿ ತೋಟವೊಂದರಲ್ಲಿ ಹುಲಿ ಸಂಚಾರ ಕಂಡುಬAದಿರುವ ಬೆನ್ನಲ್ಲೇ ಅರಣ್ಯ ಇಲಾಖೆ ಕಾರ್ಯಾಚರಣೆ ತೀವ್ರಗೊಳಿಸಿದೆ. ಸಾಕಾನೆಗಳನ್ನು ಬಳಸಿ ಹುಲಿ ಪತ್ತೆ ಕಾರ್ಯ ನಡೆಸಲಾಗುತ್ತಿದೆ. ಕಡಗದಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮುಂದಿನ 2-3 ದಿನಗಳ ಕಾಲ ಸಾರ್ವಜನಿಕರು ಎಚ್ಚರದಿಂದ ಇರುವಂತೆ ಸೂಚಿಸಲಾಗಿದೆ.
ನಾಗರಹೊಳೆ ರಾಷ್ಟಿçÃಯ ಉದ್ಯಾನವನಕ್ಕೆ ಹೊಂದಿಕೊAಡAತಿರುವ ಊರುಗಳು ಸೇರಿದಂತೆ ದಕ್ಷಿಣ ಕೊಡಗು ವ್ಯಾಪ್ತಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಜನವಸತಿ ಪ್ರದೇಶಗಳಲ್ಲಿ ಹುಲಿಗಳು ಕಾಣಿಸಿಕೊಳ್ಳುವುದು ಸಾಮಾನ್ಯ ಎಂಬAತಾಗಿದೆ. ಅದರಲ್ಲೂ ಡಿಸೆಂಬರ್-ಮಾರ್ಚ್ ಮಧ್ಯೆ ಹುಲಿಗಳ ಹಾವಳಿ ಹೆಚ್ಚು ಇರುತ್ತದೆ. ವ್ಯಾಘ್ರಗಳ ಅಟ್ಟಹಾಸ ಹೆಚ್ಚಾದಂತೆ ಈ ವ್ಯಾಪ್ತಿಯಲ್ಲಿ ಜನಜೀವನದ ಮೇಲೂ ಸಾಕಷ್ಟು ಪರಿಣಾಮಗಳು ಆಗಿವೆ. ಪಶುಪಾಲನೆ ಬಹುತೇಕ ನಿಂತುಹೋಗಿದೆ. ಅಲ್ಲಲ್ಲಿ ಉಳಿದುಕೊಂಡಿರುವ ಜಾನುವಾರುಗಳು ಹುಲಿಗೆ ಆಹಾರ ಆಗುತ್ತಿವೆ.
ಡಿಸೆಂಬರ್ ಬಂತೆAದರೆ ಸಾಕು ಪೊನ್ನಂಪೇಟೆ ತಾಲೂಕು ಸೇರಿದಂತೆ ನಾಗರಹೊಳೆ ರಾಷ್ಟಿçÃಯ ಉದ್ಯಾನವನ ವ್ಯಾಪ್ತಿಗೆ ಬರುವ ಕಾಡಂಚಿನ ಗ್ರಾಮಸ್ಥರ ಎದೆಯಲ್ಲಿ ಢವ ಢವ ಶುರುವಾಗುತ್ತದೆ. ಕಳೆದ ಕೆಲವು ವರ್ಷಗಳಿಂದ ವರ್ಷದ ಕೊನೆ ಮತ್ತು ಆರಂಭದ 2 ತಿಂಗಳು ಇಲ್ಲಿನವರಿಗೆ ತಮ್ಮ ಜಾನುವಾರುಗಳನ್ನು ಕಾಪಾಡಿಕೊಳ್ಳುವುದೇ ದೊಡ್ಡ ಸವಾಲು. ರಾತ್ರೋ ರಾತ್ರಿ ಊರೊಳಗೆ ನುಗ್ಗುವ ಹೆಬ್ಬುಲಿ ಕೊಟ್ಟಿಗೆಯಲ್ಲಿ ಕಟ್ಟಿರುವ ಹಸುಗಳನ್ನು ಸದ್ದಿಲ್ಲದೆ ಕೊಂದು ಮುಗಿಸಿರುತ್ತದೆ.
ಹೀಗೆ ದಕ್ಷಿಣ ಕೊಡಗು ಭಾಗದಲ್ಲಿ ಹೆಚ್ಚಾಗಿ ಹಾವಳಿ ಮಾಡುತ್ತಿದ್ದ ಹುಲಿಗಳು ಈಗ ಮಡಿಕೇರಿ ವ್ಯಾಪ್ತಿಯಲ್ಲೂ ಕಾಣಿಸಿಕೊಂಡು ಆತಂಕಕ್ಕೆ ಕಾರಣವಾಗಿದೆ. ಜಿಲ್ಲಾ ಕೇಂದ್ರದಿAದ ಕೇವಲ 2 ಕಿಮೀ ದೂರದ ಇಬ್ನಿಳವಾಡಿ ಗ್ರಾಮದ ಪೊನ್ನಚೆಟ್ಟೀರ ಸಂದೀಪ್ ಎಂಬವರ ತೋಟದ ಸಿಸಿಟಿವಿಯಲ್ಲಿ ತೋಟದೊಳಗೆ ಹುಲಿ ಓಡಾಟದ ದೃಶ್ಯ ಸೆರೆಯಾಗಿದೆ. ಅದು ಕೂಡ ಮುಂಜಾನೆ 7 ಗಂಟೆ ಸುಮಾರಿಗೆ ಈ ದೃಶ್ಯ ಸೆರೆ ಸಿಕ್ಕಿದ್ದು, ಹಗಲಿನಲ್ಲೂ ಹುಲಿಗಳ ಓಡಾಟಕ್ಕೆ ಸಾಕ್ಷö್ಯ ಸಿಕ್ಕಂತಾಗಿದೆ.
ತಮ್ಮ ತೋಟದಲ್ಲಿ ಹುಲಿ ಇರುವುದು ಗೊತ್ತಾಗುತ್ತಿದ್ದಂತೆಯೇ ಪೊನ್ನಚೆಟ್ಟೀರ ಸಂದೀಪ್ ಅರಣ್ಯ ಇಲಾಖೆ ಗಮನಕ್ಕೆ ತಂದಿದ್ದಾರೆ. ಮಡಿಕೇರಿ ನಗರದ ಹೊರವಲಯದಲ್ಲೇ ಹುಲಿ ಓಡಾಟ ಕಂಡುಬAದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯೂ ಎಚ್ಚೆತ್ತುಕೊಂಡು ಹುಲಿ ಸೆರೆಗೆ ಕಾರ್ಯಾಚರಣೆ ಶುರುಮಾಡಿದೆ. ಇಬ್ನಿಳವಾಡಿ, ಸಿಂಕೋನ, ಕಡಗದಾಳು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಲಿ ಕಾಣಿಸಿಕೊಂಡÀ ಮಾಹಿತಿ ಹಿನ್ನೆಲೆ, ಅರಣ್ಯ ಇಲಾಖೆ ಕೂಂಬಿAಗ್ ಆರಂಭಿಸಿದೆ. ಮುಂಜಾಗ್ರತಾ ಕ್ರಮವಾಗಿ ಕಟ್ಟು ನಿಟ್ಟಿನ ನಿಗಾ ವಹಿಸಲಾಗಿದೆ. ಕುಶಾಲನಗರ ಮತ್ತು ಮಡಿಕೇರಿ ವಲಯದ ಅರಣ್ಯ ಇಲಾಖೆಯ 35-40 ಸಿಬ್ಬಂದಿ ಮತ್ತು ದುಬಾರೆಯ ಕಂಜನ್, ಈಶ್ವರ, ಪ್ರಶಾಂತ್ ಸಾಕಾನೆಗಳನ್ನು ಕಾರ್ಯಾಚರಣೆಗೆ ಬಳಸಲಾಗುತ್ತಿದೆ.
ಹುಲಿ ಹೆಜ್ಜೆ ಪರಿಶೀಲನೆ ನಡೆಸಲಾಗಿದ್ದು, 2-3 ವರ್ಷ ಪ್ರಾಯದ ಹುಲಿ ಇದಾಗಿರಬಹುದು ಎಂದು ಅಂದಾಜಿಸಲಾಗಿದೆ. ಕಾಫಿ ತೋಟದಲ್ಲಿ ಓಡಾಟದ ನಂತರ ಮಡಿಕೇರಿ ಪೂರ್ವ ಅರಣ್ಯ ಸೇರಿರುವುದು ಖಚಿತ ಪಟ್ಟಿದೆ. ಈ ಬೆನ್ನಲ್ಲೇ ಈ ಹುಲಿಯನ್ನು ಸೆರೆಹಿಡಿಯಲು ಅನುಮತಿ ಸಿಕ್ಕಿದ್ದು, ಈ ನಿಟ್ಟಿನಲ್ಲಿ ಹುಲಿ ಪತ್ತೆ ಹಚ್ಚಲು ಈ ವ್ಯಾಪ್ತಿಯಲ್ಲಿ ಅಲ್ಲಲ್ಲಿ 8 ಕ್ಯಾಮರಗಳನ್ನು ಅಳವಡಿಕೆ ಮಾಡಲಾಗಿದೆ. ಥರ್ಮಲ್ ಡ್ರೋಣ್ ಕೂಡ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಸ್ಥಳಕ್ಕೆ ಬೋನ್ ಕೂಡ ತರಿಸಲಾಗಿದೆ.
ಈ ವ್ಯಾಪ್ತಿಯಲ್ಲಿ ಹುಲಿ ಇರುವ ಬಗ್ಗೆ ಕಳೆದ ಕೆಲವು ದಿನಗಳಿಂದಲೇ ಸ್ಥಳೀಯರಲ್ಲಿ ಅನುಮಾನಗಳು ಇದ್ದವು. ಇಲ್ಲಿ ಈಚೆಗೆ ಹಸುವೊಂದರ ಮೇಲೆ ಕಾಡು ಪ್ರಾಣಿ ದಾಳಿ ನಡೆದಿತ್ತು. ಆಗ ಇದು ಚಿರತೆ ಅಥವಾ ಚಿರತೆ ಹೋಲುವ ಪೆರ್ಪಣದಂಥ ಚಿಕ್ಕ ಪ್ರಾಣಿಯಿಂದ ಆಗಿರಬಹುದು ಎಂದು ಭಾವಿಸಲಾಗಿತ್ತು. ಇದೀಗ ಇಬ್ನಿಳವಾಡಿ ಗ್ರಾಮದಲ್ಲಿ ಕಂಡುಬAದಿರುವ ಹುಲಿಯ ಹೆಜ್ಜೆ ಗುರುತು ಕೂಡ ಚಿಕ್ಕದಾಗಿರುವುದರಿಂದ ಇದೇ ಹುಲಿ ಹಸುವಿನ ಮೇಲೆ ದಾಳಿ ಮಾಡಿದ್ದಿರಬಹುದು ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.
ಹುಲಿ ಇರುವಿಕೆ ಖಚಿತಗೊಂಡ ಬೆನ್ನಲ್ಲೇ ಸುತ್ತಮುತ್ತಲ ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಮತ್ತು ವಿದ್ಯಾರ್ಥಿಗಳು ಆತಂಕಕಕ್ಕೆ ಒಳಗಾಗಿದ್ದಾರೆ. ಈ ವ್ಯಾಪ್ತಿಯಲ್ಲಿ ಗ್ರಾಮ ದೇವತೆ ಉತ್ಸವ ಕೂಡ ನಡೆಯುತ್ತಿದ್ದು, ರಾತ್ರಿ ವೇಳೆ ಓಡಾಟಕ್ಕೆ ಭಯಪಡುವಂತಾಗಿದೆ. ಕರಿಮೆಣಸು ಕೊಯ್ಲು ಮಾಡುವ ಕಾರ್ಮಿಕರು, ನೀರುಕೊಲ್ಲಿಯಿಂದ ಕಡಗದಾಳುವಿಗೆ ಬರುವ ಶಾಲಾ ಮಕ್ಕಳಲ್ಲೂ ಭಯದ ವಾತಾವರಣ ಮೂಡಿದೆ. ಈ ಮಧ್ಯೆ ಸಿಸಿಎಫ್ ಸೋನಲ್ ವೃಷ್ಣಿ, ಡಿಸಿಎಫ್ ಅಭಿಷೇಕ್, ಎಸಿಎಫ್ ಸೆಂದಿಲ್ ಕುಮಾರ್, ಡಿಆರ್‌ಎಫ್‌ಒ ಸುನಿಲ್ ಕುಮಾರ್, ರಂಜನ್ ಸೇರಿದಂತೆ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು ಕಾರ್ಯಾಚರಣೆಗೆ ಮಾರ್ಗದರ್ಶನ ನೀಡುತ್ತಿದ್ದಾರೆ.
ಇಬ್ನಿಳವಾಡಿ ಗ್ರಾಮದಲ್ಲಿ ಹುಲಿ ಕಾಣಿಸಿಕೊಂಡಿರುವು ಬಗ್ಗೆ ಹಲವು ರೀತಿಯಲ್ಲಿ ಚರ್ಚೆ ಆಗುತ್ತಿದೆ. ನವೆಂಬರ್‌ನಿAದ ಏಪ್ರಿಲ್ ಅವಧಿ ಹುಲಿಗಳ ಸಂತಾನೋತ್ಪತ್ತಿ ಸಮಯ. ಈ ವೇಳೆ ಹೆಣ್ಣು ಹುಲಿಗಳ ಮೇಲೆ ಆಧಿಪತ್ಯ ಸ್ಥಾಪಿಸುವ ಸಲುವಾಗಿ ಗಂಡು ಹುಲಿಗಳ ನಡುವೆ ಕಾಳಗ ನಡೆಯುತ್ತದೆ. ಬಲಿಷ್ಠ ಹುಲಿ ಸಹಜವಾಗಿ ಗೆಲುವು ಸಾಧಿಸಿ ತನ್ನ ಸರಹದ್ದು ಗುರುತಿಸಿಕೊಂಡರೆ, ದುರ್ಬಲ ಹುಲಿ ಅಲ್ಲಿಂದ ಹೊರಬೀಳಬೇಕಾಗುತ್ತದೆ. ಹಾಗಾಗಿ ತನಗೆ ಸುರಕ್ಷಿತ ಮತ್ತು ಸುಲಭವಾಗಿ ಆಹಾರ ಸಿಗುವ ಕಾಡಂಚಿನ ಗ್ರಾಮಗಳ ಕಡೆಗೆ ಇಂತಹ ಹುಲಿಗಳು ಹೆಜ್ಜೆ ಹಾಕುತ್ತವೆ ಎನ್ನುತ್ತಾರೆ ತಜ್ಞರು. ದೊರೆಯುವ ಬೇಟೆ ಆಧಾರದಲ್ಲಿ ಹೆಣ್ಣು ಹುಲಿಗಳು ಸುಮಾರು 20 ಚ.ಕಿ.ಮೀ. ಪ್ರದೇಶವನ್ನು ತಮ್ಮ ಸರಹದ್ದು ನಿಗದಿಮಾಡಿಕೊಂಡರೆ, ತನ್ನ ಸಂಗಾತಿ ಹೆಣ್ಣು ಹುಲಿಗಳು ಇರುವ ವ್ಯಾಪ್ತಿಯಲ್ಲಿ ಸುಮಾರು 60-100 ಚ.ಕಿ.ಮೀ. ಪ್ರದೇಶವನ್ನು ಗಂಡು ಹುಲಿಗಳು ತಮ್ಮ ಸರಹದ್ದು ಮಾಡಿಕೊಳ್ಳುತ್ತವೆ. ಸರಹದ್ದು ಕಾಪಾಡಿಕೊಳ್ಳಲು ಅಥವಾ ಸಂಗಾತಿಗಾಗಿ ಗಂಡು ಹುಲಿಗಳ ಮಧ್ಯೆ ಕಾದಾಟ ನಡೆಯುತ್ತದೆ. ಸಾಮರ್ಥ್ಯ ಇಲ್ಲದ ಹುಲಿ ಒಂದೋ ಸಾಯುತ್ತದೆ, ಇಲ್ಲವೇ ಸರಹದ್ದು ದಾಟಿ ಜನವಸತಿ ಪ್ರದೇಶಗಳಿಗೆ ಬರುವ ಸಾಧ್ಯತೆಯೇ ಹೆಚ್ಚು. ಹಾಗಾಗಿ ಈ ಹುಲಿ ಇಲ್ಲಿ ಯಾಕೆ ಬಂದಿರಬಹುದು ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.
"

ಇಬ್ನಿಳವಾಡಿ ಗ್ರಾಮದ ತೋಟದಲ್ಲಿ ಹುಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಲಾಖೆ ಎಚ್ಚರಿಕೆ ವಹಿಸಿದೆ. ಆ ಪ್ರದೇಶದಲ್ಲಿ ಕಾರ್ಯಾಚರಣೆ ಮುಂದುವರಿಸಲಾಗಿದೆ. ಹುಲಿಯ ಇರುವಿಕೆ ಬುಧವಾರ ಒಮ್ಮೆ ಗೋಚರವಾಗಿತ್ತು. ಆ ಹುಲಿ ಸೆರೆ ಹಿಡಿಯಲು ಅನುಮತಿ ದೊರೆಯ ಹಿನ್ನೆಲೆಯಲ್ಲಿ ಸಾಕಾನೆಗಳನ್ನು ಬಳಸಿಕೊಂಡು ಕಾರ್ಯಾಚರಣೆ ನಡೆಸಲಾಗುತ್ತಿದೆ. 35-40 ಸಿಬ್ಬಂದಿ ಕೂಡ ಇದ್ದಾರೆ. ಥರ್ಮಲ್ ದ್ರೋಣ್ ಸೇರಿದಂತೆ ವಿಶೇಷ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲಾಗುತ್ತಿದೆ. ವಿ. ಅಭಿಷೇಕ್, ಡಿಸಿಎಫ್, ಮಡಿಕೇರಿ ಅರಣ್ಯ ವಿಭಾಗ

"

ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಬ್ನಿಳವಾಡಿ ಗ್ರಾಮದ ತೋಟದಲ್ಲಿ ಹುಲಿ ಸಂಚಾರ ಕಂಡು ಬಂದ ಹಿನ್ನೆಲೆಯಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ಸೂಕ್ತ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ನಾನೂ ಸೇರಿದಂತೆ ಗ್ರಾಮ ಆಡಳಿತಾಧಿಕಾರಿ, ಕಂದಾಯ ಪರೀಕ್ಷಕರು ಇಬ್ನಿಳವಾಡಿ ಗ್ರಾಮದ ನೀರುಕೊಲ್ಲಿಯಲ್ಲಿ ಸಂಚರಿಸುತ್ತಿರುವ ಹುಲಿಯ ಕುರಿತು ಸ್ಥಳ ಪರಿಶೀಲನೆ ನಡೆಸಿ, ಆ ಸ್ಥಳದ ಸಮೀಪದಲ್ಲಿರುವ ಗ್ರಾಮಸ್ಥರಿಗೆ ಮುನ್ನೆಚ್ಚರಿಕೆಯನ್ನು ವಹಿಸಲು ತಿಳಿಸಲಾಗಿದೆ. ಗ್ರಾಮಸ್ಥರು ಎಚ್ಚರಿಕೆಯಿಂದ ಇರುವಂತೆ ಪಂಚಾಯಿತಿ ವತಿಯಿಂದ ಸ್ವಚ್ಛ ವಾಹಿನಿ ಧ್ವನಿವರ್ಧಕದ ಮೂಲಕ ಕೋರಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net