ಸೋಮವಾರಪೇಟೆ ತಾಲೂಕಿನ ಹಿರಿಕರ ಗ್ರಾಮದ ಕೃಷಿಕರು ಮಳೆಗಾಗಿ ಮಾಲಂಬಿ ಬೆಟ್ಟದಲ್ಲಿರುವ ಶ್ರೀ ಮಳೆಮಲ್ಲೇಶ್ವರ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು.
Published on:
Copied
Follow Us
ಸೋಮವಾರಪೇಟೆ: ವಿಪರೀತ ಬಿಸಿಲಿನಿಂದ ಕಂಗೆಟ್ಟಿರುವ ತಾಲೂಕಿನ ಗ್ರಾಮೀಣ ಜನರು ಮಳೆಗಾಗಿ ದೇವರ ಮೊರೆ ಹೋಗುತ್ತಿದ್ದಾರೆ.
ಹಿರಿಕರ ಗ್ರಾಮದ ಕೃಷಿಕರು, ಸೋಮವಾರ ಗ್ರಾಮದ ಶ್ರೀ ಮಲ್ಲೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಮಾಲಂಬಿ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ತೆರಳಿ ಬೆಟ್ಟದ ಮಳೆಮಲ್ಲೇಶ್ವರ ಹಾಗೂ ಬಸವಣ್ಣ ದೇವರಿಗೆ ಸಾಮೂಹಿಕ ಪೂಜೆ ಸಲ್ಲಿಸಿ, ಮಳೆಗಾಗಿ ಪ್ರಾರ್ಥಿಸಿದರು.
ಅರೇಬಿಕಾ ಕಾಫಿ ತೋಟಗಳಿಗೆ ಅಲ್ಪಸ್ವಲ್ಪ ಮಳೆ ಬಿದ್ದ ಪರಿಣಾಮ ಶೇ.50 ರಷ್ಟು ಕಾಫಿ ಬ್ಲಾಸಂ ಆಗಿದೆ. ಈ ಸಂದರ್ಭ ಬ್ಯಾಕಿಂಗ್ ಮಳೆ ಬಿದ್ದರೆ, ಮಾತ್ರ ಫಸಲು ಉಳಿಯುತ್ತದೆ. ಈಗ ಮಳೆ ಬೀಳದ ಹಿನ್ನೆಲೆಯಲ್ಲಿ ಕೃಷಿಕರು ಆತಂಕಗೊಂಡಿದ್ದಾರೆ. ಈ ಕಾರಣದಿಂದ ಮಳೆಗಾಗಿ ದೇವರ ಮೊರೆ ಹೋಗಿದ್ದೇವೆ ಎಂದು ಹಿರಿಕರ ದೇವಾಲಯ ಸಮಿತಿಯ ಅಧ್ಯಕ್ಷ ಕೆ.ಕೆ.ಶಿವಪ್ರಕಾಶ್ ಹೇಳಿದರು.
ಕಾರ್ಯದರ್ಶಿ ಕೀರ್ತಿ ಮುತ್ತಣ್ಣ, ಖಜಾಂಚಿ ಸಿ.ಎಲ್.ವೆಂಕಟೇಶ್, ಸಲಹೆಗಾರ ಎಚ್.ಪಿ.ಸುರೇಶ್ ಸೇರಿದಂತೆ ಗ್ರಾಮದ ಹಿರಿಯರು ಪೂಜೆಯಲ್ಲಿ ಪಾಲ್ಗೊಂಡಿದ್ದರು.