ಹೆರಿಗೆಗೆ ಪ್ರಸಿದ್ಧಿ ಕೊಡಗಿನ ಈ ಸರ್ಕಾರಿ ಆಸ್ಪತ್ರೆ

ಮಡಿಕೇರಿಯಲ್ಲಿ ಇರುವ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆಗೆ ಸೇರಿದ ಪ್ರಸೂತಿ, ಸ್ತಿçÃರೋಗ ಮತ್ತು ಮಕ್ಕಳ ವಿಭಾಗ
ಮಡಿಕೇರಿಯಲ್ಲಿ ಇರುವ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆಗೆ ಸೇರಿದ ಪ್ರಸೂತಿ, ಸ್ತಿçÃರೋಗ ಮತ್ತು ಮಕ್ಕಳ ವಿಭಾಗ
Published on

ಪ್ರಮುಖ ಮುಖ್ಯಾಂಶಗಳು

  • ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಚ್ಚುತ್ತಿರುವ ಹೆರಿಗೆ
  • ಸರ್ಕಾರಿ ಆಸ್ಪತ್ರೆಗಳಲ್ಲಿ ಶೇ. 81ರಷ್ಟು ಹೆರಿಗೆ
  • ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ಕೊಡಗಿಗೆ 2ನೇ ಸ್ಥಾನ
ಮಡಿಕೇರಿ:
ಹೆರಿಗೆ ಮಾಡಿಸಿಕೊಳ್ಳುವವರು ಕೊಡಗಿನಲ್ಲಿ ಸರ್ಕಾರಿ ಆಸ್ಪತ್ರೆಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲೂ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮಡಿಕೇರಿ ಬೋಧಕ ಆಸ್ಪತ್ರೆ ಸುರಕ್ಷಿತ ಹೆರಿಗೆಗಾಗಿ ಅಕ್ಕಪಕ್ಕದ ಜಿಲ್ಲೆಗಳಲ್ಲೂ ಹೆಸರು ಮಾಡಿದೆ. ಈ ವರ್ಷ ಇಲ್ಲಿಯ ತನಕ ಜಿಲ್ಲೆಯಲ್ಲಿ ಹುಟ್ಟಿರುವ ಮಕ್ಕಳ ಪೈಕಿ ಶೇ. 81ರಷ್ಟು ಮಕ್ಕಳು ಸರ್ಕಾರಿ ಆಸ್ಪತ್ರೆಯಲ್ಲೇ ಆಗಿರುವ ಹೆರಿಗೆ ಮೂಲಕವೇ ಜಗತ್ತನ್ನು ಕಂಡಿರುವುದು ವಿಶೇಷವಾಗಿದೆ.
ಸಾಮಾನ್ಯವಾಗಿ ಸರ್ಕಾರಿ ಆಸ್ಪತ್ರೆಗಳೆಂದರೆ ಜನಸಾಮಾನ್ಯರಲ್ಲಿ ಮೂಡುವ ಕಲ್ಪನೆಯೇ ಬೇರೆ ರೀತಿಯಲ್ಲಿ ಇರುತ್ತದೆ. ಹಿಂದಿನಿAದಲೂ ರೂಢಿಯಲ್ಲಿರುವ ವ್ಯವಸ್ಥೆಗಳು ಈ ರೀತಿಯ ಮನೋಭಾವ ಸೃಷ್ಟಿಯಾಗಲು ಕಾರಣವಾಗಿದೆ. ವೈದ್ಯರ ಅಸಡ್ಡೆ, ಸಿಬ್ಬಂದಿ ದರ್ಪ, ಅಶುಚಿತ್ವದ ವಾತಾವರಣ, ಲಂಚಗುಳಿತನ, ಮೂಲಭೂತ ಸೌಲಭ್ಯದ ಕೊರತೆ, ಔಷಧಿಗಳ ಅಲಭ್ಯತೆ...ಹೀಗೆ ಅನೇಕ ಸಂಗತಿಗಳು ಸರ್ಕಾರಿ ಆಸ್ಪತ್ರೆ ಬಗೆಗೆ ತಪ್ಪು ಅಭಿಪ್ರಾಯಗಳನ್ನು ಹುಟ್ಟುಹಾಕಿರುವುದರಿಂದ ಬಹುತೇಕರು ಈಗಲೂ ಸರ್ಕಾರಿ ಆಸ್ಪತ್ರೆಗಳಿಂದ ದೂರವೇ ಉಳಿದಿದ್ದಾರೆ. ಆದರೆ ಜಿಲ್ಲೆಯ ಪರಿಸ್ಥಿತಿ ಇದಕ್ಕಿಂತ ವಿಭಿನ್ನವಾಗಿದೆ.
ಕೆಲವೊಂದು ಚಿಕ್ಕಪುಟ್ಟ ಅಪವಾದಗಳನ್ನು ಹೊರತುಪಡಿಸಿದರೆ ಕೊಡಗಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಸರ್ಕಾರಿ ಆಸ್ಪತ್ರೆಗಳು ಜನಸ್ನೇಹಿಯಾಗಿ ಕೆಲಸ ಮಾಡುತ್ತಿವೆ. ತೀರಾ ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರ ಕೊರತೆ ಇದ್ದರೂ ಉಳಿದಂತೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಸೇವೆ ಸಿಗುತ್ತಿದೆ. ಆಗಾಗ್ಗೆ ಅಲ್ಲಲ್ಲಿ ಕೆಲವೊಂದು ಸಮಸ್ಯೆಗಳು ಕಾಣಿಸಿಕೊಂಡರೂ ಅವುಗಳನ್ನು ಸರಿಪಡಿಸಿಕೊಂಡು ಅವು ಪುನರಾವರ್ತನೆ ಆಗದ ರೀತಿಯಲ್ಲಿ ಉತ್ತಮ ಸೇವೆ ಸಿಗುವುದರಿಂದ ಸರ್ಕಾರಿ ಆಸ್ಪತ್ರೆಗಳ ಅವಲಂಬನೆ ಈಗೀಗ ಹೆಚ್ಚಾಗುತ್ತಿದೆ.
ಬಾಣಂತಿಯರ ಪಾಲಿಗೆ ಕೊಡಗಿನ ಸರ್ಕಾರಿ ಆಸ್ಪತ್ರೆಗಳು ಹೆಚ್ಚು ಸುರಕ್ಷಿತ ಎನ್ನುವುದು ಸಾಬೀತಾಗಿದೆ. ಬಾಣಂತಿಯರ ಮರಣದ ಪ್ರಮಾಣ ರಾಜ್ಯದಲ್ಲಿ ಶೇ. 58ರಷ್ಟು ಇದ್ದರೆ ಜಿಲ್ಲೆಯಲ್ಲಿ ಈ ಪ್ರಮಾಣ ಶೇ. 16ರಷ್ಟು ಇದೆ. 2014ರಲ್ಲಿ ರಾಜ್ಯಾದ್ಯಂತ ಬಾಣಂತಿಯರ ಸಾವಿನ ಪ್ರಕರಣಗಳು ಭಾರಿ ಸದ್ದು ಮಾಡಿದರೆ ಕೊಡಗಿನಲ್ಲಿ ಬಾಣಂತಿಯರ ಸಾವಿನ ಸಂಖ್ಯೆ ಶೂನ್ಯವಾಗಿತ್ತು. 2025ರಲ್ಲಿ ಬಾಣಂತಿಯರ ಸಾವಿನ 2 ಪ್ರಕರಣಗಳು ಸಂಭವಿಸಿದ್ದು, ಹೆರಿಗೆ ನಂತರದ ಆರೈಕೆ ಸಂದರ್ಭ ಕುಟುಂಬಸ್ಥರ ನಿರ್ಲಕ್ಷö್ಯ ಇದಕ್ಕೆ ಕಾರಣ ಎಂದು ಹೇಳಲಾಗಿದೆ.
ಈ ಮಧ್ಯೆ ಹೆರಿಗಾಗಿ ಸರ್ಕಾರಿ ಆಸ್ಪತ್ರೆಯನ್ನೇ ಆಯ್ಕೆ ಮಾಡಿಕೊಳ್ಳುವ ಮನೋಭಾವ ಕೊಡಗಿನಲ್ಲಿ ಈಚೆಗೆ ಹೆಚ್ಚಾಗಿ ಕಂಡುಬರುತ್ತಿದೆ. ಆರೋಗ್ಯ ಇಲಾಖೆಯ ಅಂಕಿ-ಅAಶಗಳ ಪ್ರಕಾರ 2020-21ರಲ್ಲಿ ಕೊಡಗಿನಲ್ಲಿ ಆಗಿರುವ ಹೆರಿಗೆಗಳ ಪೈಕಿ ಶೇ. 84ರಷ್ಟು ಹೆರಿಗೆಗಳು ಸರ್ಕಾರಿ ಆಸ್ಪತ್ರೆಯಲ್ಲೇ ಆಗಿವೆ. 2021-22ರಲ್ಲೂ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಶೇ. 84ರಷ್ಟು ಹೆರಿಗೆಗಳನ್ನು ಮಾಡಲಾಗಿದೆ. 2022-23ರಲ್ಲಿ ಈ ಪ್ರಮಾಣ ಸ್ವಲ್ಪ ಇಳಿಮುಖ ಆಗಿದ್ದು, ಶೇ. 82ರಷ್ಟು ಹೆರಿಗೆಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಮಾಡಿಸಲಾಗಿದೆ. 2023-24ರಲ್ಲಿ ಈ ಪ್ರಮಾಣ ಶೇ.78ಕ್ಕೆ ಇಳಿದಿತ್ತು. ನಂತರ 2024-25ರಲ್ಲಿ ಶೇ. 79ಕ್ಕೆ ಏರಿದ್ದು, ಈ ವರ್ಷ ಮತ್ತೆ ಸಹಜ ಸ್ಥಿತಿಗೆ ಬರುವ ಲಕ್ಷಣಗಳು ಗೋಚರವಾಗಿದೆ. 2025ರ ಆಗಸ್ಟ್ ತನಕದ ಮಾಹಿತಿ ಪ್ರಕಾರ ಶೇ.81ರಷ್ಟು ಹೆರಿಗೆಗಳು ಸರ್ಕಾರಿ ಆಸ್ಪತ್ರೆಯಲ್ಲೇ ಆಗಿದೆ.
ಸರ್ಕಾರಿ ಆಸ್ಪತ್ರೆಯಲ್ಲಿ ಈ ವರ್ಷ ಅತೀ ಹೆಚ್ಚು ಹೆರಿಗೆ ಆದ ಜಿಲ್ಲೆಗಳಲ್ಲಿ ಯಾದಗಿರಿ ಮೊದಲ ಸ್ಥಾನದಲ್ಲಿದ್ದರೆ, ಕೊಡಗು ಎರಡನೇ ಸ್ಥಾನ ಪಡೆದುಕೊಂಡಿದೆ. ಸುರಕ್ಷಿತ ಹೆರಿಗೆ ಮತ್ತು ತಾಯ್ತನದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮಡಿಕೇರಿ ಬೋಧಕ ಆಸ್ಪತ್ರೆಗೆ ಸೇರಿದ ಪ್ರಸೂತಿ, ಸ್ತಿçÃರೋಗ ಮತ್ತು ಮಕ್ಕಳ ವಿಭಾಗದ ಕೊಡುಗೆ ದೊಡ್ಡದಿದೆ. ಇಲ್ಲಿ ತಜ್ಞ ವೈದ್ಯರು, ಅತ್ಯಾಧುನಿಕ ಉಪಕರಣಗಳು, ಸುಸಜ್ಜಿತ ಶಸ್ತçಚಿಕಿತ್ಸಾ ಕೊಠಡಿಗಳು, ಗರ್ಭಿಣಿಯರಿಗೆ ಚಿಕಿತ್ಸೆ, ಪ್ರಸವದ ನಂತರ ಉತ್ತಮ ಆರೈಕೆ, ತೀವ್ರ ನಿಗಾ ವಿಭಾಗ, ಸಾಮಾನ್ಯ ವಾರ್ಡ್ಗಳ ಸೌಲಭ್ಯ, ಶುಚಿತ್ವಕ್ಕೆ ಕೊಡುವ ಆದ್ಯತೆಯಿಂದಾಗಿ ಗರ್ಭಿಣಿಯರು ಹೆರಿಗೆಗಾಗಿ ಈ ಆಸ್ಪತ್ರೆಯನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.
ಕೊಡಗು ಮಾತ್ರವಲ್ಲದೆ ಪಕ್ಕದ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ಹುಣಸೂರು, ಹೆಚ್.ಡಿ. ಕೋಟೆ ತಾಲೂಕು, ಹಾಸನ ಜಿಲ್ಲೆಯ ಅರಕಲಗೂಡು, ಸಕಲೇಶಪುರ ತಾಲೂಕು, ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಿಂದಲೂ ಹೆರಿಗೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬಾಣಂತಿಯರು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮಡಿಕೇರಿ ಬೋಧಕ ಆಸ್ಪತ್ರೆಗೆ ಸೇರಿದ ಪ್ರಸೂತಿ, ಸ್ತಿçÃರೋಗ ಮತ್ತು ಮಕ್ಕಳ ವಿಭಾಗಕ್ಕೆ ದಾಖಲಾಗುವುದು ಸಾಮಾನ್ಯವಾಗಿದೆ. ಹಾಗಾಗಿ ಇಲ್ಲಿ ಯಾವಾಗಲೂ ಹೆಚ್ಚಿನ ಜನಸಂದಣಿ ಕಂಡು ಬರುತ್ತದೆ. ಆದರೂ ಇಲ್ಲಿಗೆ ಬರುವ ಎಲ್ಲರಿಗೂ ಚಿಕಿತ್ಸೆ ಕೊಡಲು ಆದ್ಯತೆ ನೀಡಲಾಗುತ್ತದೆ.
ಖಾಸಗಿ ಆಸ್ಪತ್ರೆಗಳಿಗೆ ಪೈಪೋಟಿ ನೀಡುವಷ್ಟರ ಮಟ್ಟಿಗೆ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮಡಿಕೇರಿ ಬೋಧಕ ಆಸ್ಪತ್ರೆಯಲ್ಲಿ ಸೇವೆ ಸಿಗುವುದರಿಂದ ಹೆರಿಗೆಗಾಗಿ ಈ ಆಸ್ಪತ್ರೆಯನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಕೊಡಗಿನಲ್ಲಿ ಅತ್ಯಾಧುನಿಕ ಸೌಲಭ್ಯಗಳು ಇರುವ ಖಾಸಗಿ ಆಸ್ಪತ್ರೆಗಳು ಇಲ್ಲದಿರುವುದು ಕೂಡ ಸರ್ಕಾರಿ ಆಸ್ಪತ್ರೆಯ ಅವಲಂಬನೆ ಹೆಚ್ಚುವಂತೆ ಮಾಡಿದೆ. ಕೊಡಗಿನ ಕಾಫಿ ತೋಟಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ದುಡಿಯುತ್ತಿದ್ದು ಇವರ ಪ್ರಥಮ ಆಯ್ಕೆ ಕೂಡ ಸರ್ಕಾರಿ ಆಸ್ಪತ್ರೆಯೇ ಆಗಿದೆ. ಪ್ರಮುಖವಾಗಿ ಇಲ್ಲಿ ಸಿಸೇರಿಯನ್ ಮೊದಲ ಆದ್ಯತೆ ಆಗಿರುವುದಿಲ್ಲ. ತೀರಾ ಅವಶ್ಯಕತೆ ಇದ್ದರೆ ಮಾತ್ರ ಸಿಸೇರಿಯನ್ ಮಾಡಲಾಗುತ್ತದೆ. ಸಹಜ ಹೆರಿಗೆಗೆ ಹೆಚ್ಚಿನ ಒತ್ತು ಕೊಡುವುದರಿಂದ ಶೇ. 27ರಷ್ಟು ಪ್ರಮಾಣದಲ್ಲಿ ಮಾತ್ರ ಇಲ್ಲಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಸೇರಿಯನ್ ಮೂಲಕ ಹೆರಿಗೆ ಆಗುತ್ತದೆ. ಇದು ಕೂಡ ಜನಸಾಮಾನ್ಯರು ಹೆರಿಗೆಗಾಗಿ ಸರ್ಕಾರಿ ಆಸ್ಪತ್ರೆಗಳ ಕಡೆಗೆ ಬರಲು ಒಂದು ಕಾರಣವಾಗಿದೆ. ಇದರ ಜತೆಗೆ ಬಿಪಿಎಲ್ ಕಾರ್ಡ್ದಾರರಿಗೆ ಇಲ್ಲಿ ಎಲ್ಲವೂ ಸಂಪೂರ್ಣವಾಗಿ ಉಚಿತವಾಗಿ ಆಗುತ್ತದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸುವುದರಿಂದ ಸರ್ಕಾರಿ ಸವಲತ್ತುಗಳನ್ನು ಹೊಂದಿಕೊಳ್ಳಲು ಕೂಡ ಸುಲಭವಾಗುತ್ತದೆ. ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಬೆಲೆ ತೆರಬೇಕಾದ ಮಕ್ಕಳ ಕೆಲವೊಂದು ಅಗತ್ಯ ಚುಚ್ಚುಮದ್ದುಗಳನ್ನು ಇಲ್ಲಿ ಉಚಿತವಾಗಿ ಕೊಡಲಾಗುತ್ತದೆ.
"

ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿ ಕಾರ್ಮಿಕರು ಇದ್ದಾರೆ. ಇವರೆಲ್ಲಾ ಹೆರಿಗೆಗಾಗಿ ಸರ್ಕಾರಿ ಆಸ್ಪತ್ರೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಕೊಡಗಿನಲ್ಲಿ ದೊಡ್ಡ ಮಟ್ಟದಲ್ಲಿ ಖಾಸಗಿ ಆಸ್ಪತ್ರೆಗಳು ಇಲ್ಲ. ಹಾಗಾಗಿ ಅತ್ಯಾಧುನಿಕ ಸವಲತ್ತುಗಳು ಇರುವ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮಡಿಕೇರಿ ಬೋಧಕ ಆಸ್ಪತ್ರೆಗೆ ಸೇರಿದ ಪ್ರಸೂತಿ, ಸ್ತಿçÃರೋಗ ಮತ್ತು ಮಕ್ಕಳ ವಿಭಾಗಕ್ಕೆ ಹೆರಿಗೆಗಾಗಿ ಬರುತ್ತಾರೆ. ಬಾಣಂತಿಯರ ಸಾವಿನ ಪ್ರಮಾಣ ಕೊಡಗಿನಲ್ಲಿ ಶೇ. 16ರಷ್ಟು ಮಾತ್ರ ಇದೆ. ನಮ್ಮಲ್ಲಿ ಅನಗತ್ಯವಾಗಿ ಸಿಸೇರಿಯನ್ ಮಾಡುವುದಿಲ್ಲ. ನಮ್ಮಲ್ಲಿ ಸಿಸೇರಿಯನ್ ಪ್ರಮಾಣ ಶೇ. 27ರಷ್ಟು ಇದೆ. ಹಾಗಾಗಿ ಕೊಡಗಿನಲ್ಲಿ ಹೆರಿಗೆಗಾಗಿ ಸರ್ಕಾರಿ ಆಸ್ಪತ್ರೆಗಳಿಗೆ ಆದ್ಯತೆ ಕೊಡುತ್ತಾರೆ.

"

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮಡಿಕೇರಿ ಬೋಧಕ ಆಸ್ಪತ್ರೆಗೆ ಸೇರಿದ ಪ್ರಸೂತಿ, ಸ್ತಿçÃರೋಗ ಮತ್ತು ಮಕ್ಕಳ ವಿಭಾಗದಲ್ಲಿ ವ್ಯವಸ್ಥೆಗಳು ತುಂಬಾ ಚೆನ್ನಾಗಿದೆ. ತಜ್ಞ ವೈದ್ಯರ ಉಸ್ತುವಾರಿಯಲ್ಲಿ ಸೂಕ್ತ ರೀತಿಯ ಆರೈಕೆ ನಡೆಯುತ್ತದೆ. ಇಲ್ಲಿ ಅತ್ಯಂತ ಕಟ್ಟುನಿಟ್ಟಿನ ವ್ಯವಸ್ಥೆ ಕೆಲವೊಮ್ಮೆ ರೋಗಿ ಕಡೆಯವರಿಗೆ ಕಿರಿ ಕಿರಿ ಅನ್ನಿಸಿದರೂ ಆಸ್ಪತ್ರೆಯ ನಿರ್ವಹಣೆಗೆ ಈ ರೀತಿಯ ಶಿಸ್ತಿನ ಕ್ರಮಗಳೂ ಬೇಕಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net