ಕೋಟ್ಯಂತರ ರಾಮ ಭಕ್ತರು ಪಕ್ಷ, ಜಾತಿ, ಮತ ಭೇದ ಮರೆತು ರಾಮನ ಮಂದಿರ ನಿರ್ಮಾಣಕ್ಕಾಗಿ ತನು, ಮನ, ಧನವನ್ನು ಸಮರ್ಪಿಸಿದ್ದಾರೆ. ಆದರೆ ಮುಖವಾಡ ತೊಟ್ಟ ವಂಚಕರು ಭಕ್ತರ ಹಣವನ್ನೇ ಲೂಟಿ ಮಾಡಿದ್ದಾರೆ. ಇದು ಕೇವಲ ರಾಮ ಭಕ್ತರಿಗೆ ಮಾತ್ರವಲ್ಲ, ಇಡೀ ದೇಶಕ್ಕೆ ಮಾಡಿದ ಅಪಮಾನವಾಗಿದೆ. ಈ ಪ್ರಕರಣದಲ್ಲಿ ಕೇಂದ್ರ ಸರ್ಕಾರ ಯಾವುದೇ ಒತ್ತಡ ಅಥವಾ ಸ್ವಜನ ಪಕ್ಷಪಾತಕ್ಕೆ ಮಣಿಯದೆ ಕಠಿಣ ಕಾನೂನು ಕ್ರಮಕ್ಕೆ ಮುಂದಾಗಬೇಕು. ಶ್ರೀ ರಾಮ ಮಂದಿರದ ಆಡಳಿತದಲ್ಲಿ ದಕ್ಷತೆಯನ್ನು ಮೂಡಿಸುವ ಮೂಲಕ ಭಕ್ತರ ಭಾವನೆಯನ್ನು ಗೌರವಿಸಬೇಕು ಎಂದಿದ್ದಾರೆ.