ಉತ್ತಮ ಕ್ರೀಡಾಪಟು ಪ್ರಶಸ್ತಿಯನ್ನು ವಿಜ್ಞಾನ ವಿಭಾಗದಲ್ಲಿ ಎಚ್.ಆರ್.ಜೀವಿತ, ಭಗತ್, ವಾಣಿಜ್ಯ ವಿಭಾಗದಲ್ಲಿ ಸಿ.ಇ.ಆಶಿತ್, ಕೆ.ಎಸ್.ಮೊನಿಷಾ, ಅತೀ ಹೆಚ್ಚು ಅಂಕಪಡೆದವರ ಪ್ರಶಸ್ತಿಯನ್ನು ವಿಜ್ಞಾನ ವಿಭಾಗದಲ್ಲಿ ಇಬ್ಬನಿ, ಪವನ್, ವಾಣಿಜ್ಯ ವಿಭಾಗದಲ್ಲಿ ಮೊನಿಷಾ ಜಿ.ಜಿ. ಭುವನೇಶ್ ಪಡೆದುಕೊಂಡರು. ಆಲ್‌ರೌಂಡರ್ ಪ್ರಶಸ್ತಿಯನ್ನು ವಾಣಿಜ್ಯ ವಿಭಾಗದ ಹನಿ ಪಡೆದುಕೊಂಡರು. ಕ್ರೀಡಾಕ್ಷೇತ್ರದಲ್ಲಿ ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.