: ಗದ್ದೆಹಳ್ಳದ ಬಾರೊಂದರಲ್ಲಿ ಮಧ್ಯರಾತ್ರಿಯ ವೇಳೆ ರೋಲಿಂಗ್‌ಶೆಟರ್ ಬೀಗ ಮುರಿದು ಒಳನುಗ್ಗಿದ ಕಳ್ಳರು ಗಲ್ಲಾಪಟ್ಟಿಗೆಯಲ್ಲಿ ಇರಿಸಿದ ನಗದನ್ನು ದೂಚಿದ್ದಾರೆ.
ಮಂಗಳವಾರ ರಾತ್ರಿ ಗದ್ದೆಹಳ್ಳದ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಬಾರ್‌ಗೆ ಮಧ್ಯರಾತ್ರಿ ಬೀಗ ಮುರಿದು ಒಳನುಗ್ಗಿದ ಕಳ್ಳರು ಗಲ್ಲಾಪೆಟ್ಟಿಗೆಯಲ್ಲಿ ಇರಿಸಿದ 37 ಸಾವಿರ ರೂ. ನಗದನ್ನು ದೋಚಿ ಪರಾರಿಯಾಗಿದ್ದಾರೆ. ಬೆಳಗ್ಗೆ ಅಂಗಡಿ ಬಾಗಿಲು ತೆಗೆಯಲು ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.
ಸುಂಟಿಕೊಪ್ಪ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.