ಕ್ರೀಡಾ ಸಾಧನೆಗೆ ಗೆಲುವಿನ ಛಲ ಅವಶ್ಯ

ಹುಣಸೂರು ನಗರದ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಪದವಿಪೂರ್ವ ಕಾಲೇಜು ಮಟ್ಟದ ಕ್ರೀಡಾಕೂಟದಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟದ ಪ್ಯಾರಾ ಅಥ್ಲೀಟ್‌ನ ಪದಕ ವಿಜೇತೆ ಕೆ.ಎಸ್.ಶಿಲ್ಪಾ ಮಾತನಾಡಿದರು. ತಹಸೀಲ್ದಾರ್ ಮಂಜುನಾಥ್, ವಿವಿಧ ಕಾಲೇಜುಗಳ ಮುಖ್ಯಸ್ಥರು ಇದ್ದರು.
ಹುಣಸೂರು ನಗರದ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಪದವಿಪೂರ್ವ ಕಾಲೇಜು ಮಟ್ಟದ ಕ್ರೀಡಾಕೂಟದಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟದ ಪ್ಯಾರಾ ಅಥ್ಲೀಟ್‌ನ ಪದಕ ವಿಜೇತೆ ಕೆ.ಎಸ್.ಶಿಲ್ಪಾ ಮಾತನಾಡಿದರು. ತಹಸೀಲ್ದಾರ್ ಮಂಜುನಾಥ್, ವಿವಿಧ ಕಾಲೇಜುಗಳ ಮುಖ್ಯಸ್ಥರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕಾಮನ್‌ವೆಲ್ತ್ ಪ್ಯಾರಾ ಅಥ್ಲೀಟ್‌ನ ಕಂಚಿನ ಪದಕ ವಿಜೇತೆ ಕೆ.ಎಸ್.ಶಿಲ್ಪಾ ಅಭಿಪ್ರಾಯ
  • ಕ್ರೀಡಾಕೂಟಕ್ಕೆ ಚಾಲನೆ

ಹುಣಸೂರು:

ಸತತ ಪರಿಶ್ರಮ, ಆತ್ಮವಿಶ್ವಾಸ, ಗೆಲುವಿನ ಛಲ ಇದ್ದಲ್ಲಿ ಮಾತ್ರ ಕ್ರೀಡಾ ಸಾಧನೆ ಮಾಡಲು ಸಾಧ್ಯ. ಸೋಲಿನ ಬಗ್ಗೆ ಧೃತಿಗೆಡದೆ ಮತ್ತೆ ಪ್ರಯತ್ನಪಟ್ಟಲ್ಲಿ ನಿಮ್ಮನ್ನು ಗೆಲುವಿನತ್ತ ಕೊಂಡೊಯ್ಯಲಿದೆ ಎಂದು ಕಾಮನ್‌ವೆಲ್ತ್ ಕ್ರೀಡಾಕೂಟದ ಪ್ಯಾರಾ ಅಥ್ಲೀಟ್‌ನ ಕಂಚಿನ ಪದಕ ವಿಜೇತೆ ಕೆ.ಎಸ್.ಶಿಲ್ಪಾ ತಿಳಿಸಿದರು.

ತಾಲೂಕು ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆಯು ನಗರದ ಕ್ರೈಸ್ಟ್ ರಿವರ್ ವ್ಯೆ ಪದವಿಪೂರ್ವ ಕಾಲೇಜು ಸಹಯೋಗದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಎರಡು ದಿನಗಳ 2026-27ನೇ ಸಾಲಿನ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರೀತಿ, ಸೌಹಾರ್ದ ಬೆಸೆಯುವ ಕ್ರೀಡೆಯಲ್ಲಿ ಸಾಕಷ್ಟು ಅವಕಾಶಗಳಿವೆ. ಯಾವುದೇ ಅಡೆತಡೆ, ಟೀಕೆಗಳಿದ್ದರೂ ಸಹಿಸಿಕೊಂಡು ಆತ್ಮವಿಶ್ವಾಸದೊಂದಿಗೆ ನಿಮ್ಮ ಗುರಿ ತಲುಪಲು ಶ್ರಮ ಹಾಕಿ ಸಾಧಿಸಿ ತೋರಿಸಿ. ಆಗ ಟೀಕಿಸಿದವರೇ ಮುಂದೆ ನಿಮ್ಮ ಸಾಧನೆ ಕಂಡು ಚಪ್ಪಾಳೆ ತಟ್ಟಲಿದ್ದಾರೆ ಎಂದು ಪ್ರೋತ್ಸಾಹದ ಮಾತುಗಳನ್ನಾಡಿದರು.
ಕ್ರೀಡೆಯಲ್ಲಿ ಸಾಧನೆ ಮಾಡುವವರಿಗೆ ಸರ್ಕಾರಗಳಿಂದ ಸಾಕಷ್ಟು ಪ್ರೋತ್ಸಾಹ, ಸರ್ಕಾರಿ ಹುದ್ದೆ ದೊರೆಯಲಿದೆ. ಸಮವಸ್ತ್ರ, ಟ್ರಾೃಕ್‌ಸೂಟ್ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಬೇಕೆಂದು ಆಶಿಸಿದರು.
ತಹಸೀಲ್ದಾರ್ ಜೆ.ಮಂಜುನಾಥ್ ಮಾತನಾಡಿ, ಸರ್ವಾಂಗೀಣ ಶಿಕ್ಷಣದಲ್ಲಿ ಕ್ರೀಡೆಯ ಪಾತ್ರ ಮಹತ್ವದ್ದಾಗಿದೆ. ಉತ್ತಮ ಆರೋಗ್ಯ, ಮಾನಸಿಕ ಸ್ವಾಸ್ಥೃವು ಕ್ರೀಡಾ ದೈಹಿಕ ಶಕ್ತಿಗೆ ಪೂರಕವಾಗಿದೆ. ಕಾಮನ್‌ವೆಲ್ತ್ ಪ್ಯಾರಾ ಕ್ರೀಡಾಕೂಟದಲ್ಲಿ ದೇಶಕ್ಕೆ ಕೀರ್ತಿ ತಂದಿರುವ ಶಿಲ್ಪಾ ಅವರ ಸಾಧನೆ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಲಿ ಎಂದರು.
ಅದುಲಾಮ್ ಎಜುಕೇಶನ್ ಸಂಸ್ಥೆಯ ಕಾರ್ಯದರ್ಶಿ ಎಂ.ರಾಜು, ಪ್ರಾಚಾರ್ಯ ಶಿವಕುಮಾರ್, ಬಾಲಕಿಯರ ಪಿ.ಯು.ಕಾಲೇಜಿನ ಪ್ರಾಚಾರ್ಯ ಎ.ರಾಮೇಗೌಡ, ತಾಲೂಕು ನೋಡಲ್ ಅಧಿಕಾರಿ ಸುಧಾಮಣಿ, ಸಾಧನಾಪುರ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ ಶಿವಕುಮಾರ್, ಉದ್ಯಮಿ ರಮೇಶ್ ಹೆಜ್ಜೂರ್, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ರವಿ, ಹಿರಿಯ ಆರೋಗ್ಯ ಶಿಕ್ಷಣಾಧಿಕಾರಿ ರಾಜೇಶ್ವರಿ ಇತರರು ಇದ್ದರು.

ಅಥ್ಲೆಟಿಕ್ಸ್ ವಿಭಾಗದ ಪ್ರಮುಖ ಆಕರ್ಷಣೆಯಾದ 100ಮೀ.ಓಟದಲ್ಲಿ ನಗರದ ಶಾಸ್ತ್ರಿ ಕಾಲೇಜಿನ ಆರ್.ಜಸವಂತ(ಪ್ರಥಮ) ಹಾಗೂ ರಾಘವೇಂದ್ರ (ದ್ವಿತೀಯ)ಸ್ಥಾನ ಪಡೆದರೆ, ಸಂತ ಜೋಸೆಫರ ಕಾಲೇಜಿನ ಅಕ್ಷಯ್ ಕುಮಾರ್ (ತೃತೀಯ)ಸ್ಥಾನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net