ಹಿಂದೂ ಸಂಗಮ ಕಾರ್ಯಕ್ರಮ ಉದ್ದೇಶಿಸಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಜಿಲ್ಲಾ ಕುಟುಂಬ ಪ್ರಭೋದನ್ ಟಿ.ಸಿ. ಚಂದ್ರನ್ ಮಾತನಾಡಿದರು. ಯೋಗೇಶ್ , ರಾಜಪ್ಪ , ಲೀಲಾವತಿ , ಸಂತೋಷ್ , ಪ್ರಕಾಶ್ ಗಣಪತಿ ಇತರರಿದ್ದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘ ಜಿಲ್ಲಾ ಕುಟುಂಬ ಪ್ರಭೋದನ್ ಟಿ.ಸಿ. ಚಂದ್ರನ್ ಅಭಿಪ್ರಾಯ
ಹಿಂದೂ ಸಂಗಮ, ಶೋಭಾಯಾತ್ರೆ
ವಿರಾಜಪೇಟೆ:ಅಖಂಡ ಸನಾತನ ಧರ್ಮವು ಪುರಾತನವಾದದ್ದು. ಭರತ ಭೂಮಿ ಅನೇಕ ಸಾಧು ಸಂತರು, ಋಷಿ ಮುನಿಗಳು ತಪಸ್ಸು ಮಾಡಿದ ಪುಣ್ಯ ಭೂಮಿ. ಧರ್ಮ ಮತ್ತು ಸಂಸ್ಕೃತಿ ಉಳಿವಿಗಾಗಿ ಪ್ರತಿಯೊಬ್ಬರು ಶ್ರಮಿಸಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಜಿಲ್ಲಾ ಕುಟುಂಬ ಪ್ರಭೋದನ್ ಟಿ.ಸಿ. ಚಂದ್ರನ್ ಹೇಳಿದರು.
ಹಿಂದೂ ಸಂಗಮ ಆಯೋಜನಾ ಸಮಿತಿ ಬಿಳುಗುಂದ ಮಂಡಲದ ವತಿಯಿಂದ ಬುಧವಾರ ಬಿಳುಗುಂದ ಕೊಡವ ಸಮಾಜದ ಆವರಣದಲ್ಲಿ ನಡೆದ ಹಿಂದೂ ಸಂಗಮ ಮತ್ತು ಶೋಭಾಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭೌವ್ಯ ಭಾರತದ ಮೇಲೆ ನೂರಾರು ವರ್ಷ ಪರಕೀಯರ ಆಕ್ರಮಣ ನಡೆದರು ಅಖಂಡ ಭಾರತದ ವೈಭವಯುತ ದಿವ್ಯ ಪರಂಪರೆ ಸಂಸ್ಕೃತಿ ಆಚಾರ ವಿಚಾರ ಎಂದಿಗೂ ಮರೆಯಗಲಿಲ್ಲಾ. ರಾಷ್ಟ್ರ ಭಕ್ತಿ, ಧರ್ಮ ಸಂಸ್ಥಾಪನೆ, ದೇಶಿಯ ಪದ್ಧತಿಯನ್ನು ಜೀವಂತವಾಗಿರಿಸಲು ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಕಂಕಣಬದ್ಧವಾಗಿ ನೆಲೆ ನಿಂತು 100 ವರ್ಷಗಳು ಪೂರೈಸಿದೆ. ಸಂಘದ ಪಂಚಸೂತ್ರಗಳ ಅಳವಡಿಸುವಿಕೆಯಿಂದ ಜೀವನದ ಪದ್ಧತಿ, ದೇಶಿಯ ಸಂಸ್ಕೃತಿ, ಪರಿಸರ ಸಂರಕ್ಷಣೆಗೆ ಸಮಾಜವು ಬದ್ಧವಾಗಬೇಕು ಎನ್ನುವ ಮನೋಧರ್ಮದಿಂದ ಹಳ್ಳಿ ಗ್ರಾಮಗಳಲ್ಲಿ ಹಿಂದೂ ಸಂಗಮದ ಮೂಲಕ ರಾಷ್ಟ್ರೀಯ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಜಾತಿಗಳು, ವರ್ಗಗಳು, ಮತ್ತು ವರ್ಣಗಳ ವಿಂಗಡಣೆಯಿಂದ ಬೇರ್ಪಟ್ಟ ಸಮಾಜವು ಒಂದಾಗಬೇಕು ಎನ್ನುವ ಮನೋಭಾವ ನಮ್ಮದಾಗಬೇಕು. ಭೌವ್ಯ ಭಾರತದ ಮರುಕಲ್ಪನೆಗೆ ಹಿಂದೂ ಸಮಾಜ ಒಂದಾಗಬೇಕು ಎಂದು ತಿಳಿಸಿದರು.
ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಮೂಕಂಡ ವಿಜು ಸುಬ್ರಮಣಿ ಮಾತನಾಡಿ, ಧರ್ಮವನ್ನು ನಾವು ರಕ್ಷಣೆ ಮಾಡಿದರೆ ಧರ್ಮವು ನಮ್ಮನ್ನು ಕಾಪಾಡುತ್ತದೆ. ಆರ್.ಎಸ್.ಎಸ್. ಒಂದು ಸಂಘಟನೆಯಾಗಿ ಉಳಿಯದೆ. ಧರ್ಮದ ಪರವಾಗಿ ಸಾಮಾಜಿಕ ಬದ್ಧತೆಯೊಂದಿಗೆ ರಾಷ್ಟ್ರ ಭಕ್ತಿಯನ್ನು ವಿಶ್ವದ ಎಲ್ಲಡೆ ಪಸರಿಸುವ ಕಾರ್ಯ ಮಾಡುತ್ತಿದೆ. ಕಾಫಿ ನಾಡು ಇಂದು ಅಸ್ಸಾಮಿಗರ ನಾಡಾಗಿ ಪರಿವರ್ತಿತವಾಗುತ್ತಿದೆ. ಎಲ್ಲಿ ನೋಡಿದರು ಅಸ್ಸಾಮಿಗರು ಕಾಣಸಿಗುತಿದ್ದಾರೆ. ಸಮಾಜ ಒಡೆಯುವ ಷಡ್ಯಂತ್ರಕ್ಕೆ ಬಲಿಯಾಗದೆ. ನಾವು ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.
ಅಮ್ಮತ್ತಿ ಕೊಡವ ಸಮಾಜದ ಅಧ್ಯಕ್ಷ ಐನಂಡ ಪ್ರಕಾಶ್ ಗಣಪತಿ ಮಾತನಾಡಿ, ಸಂಸ್ಕೃತಿ, ಆಚಾರ ವಿಚಾರ ಪದ್ಧತಿ ನಮ್ಮ ಪರಿಚಯ. ಇವುಗಳನ್ನು ಜೀವಂತವಾಗಿರಿಸಲು ಪ್ರತಿಯೊಬ್ಬರು ಪಣತೊಡಬೇಕು. ವಿದೇಶಿ ಜೀವನ ಶೈಲಿಗೆ ಮಾರುಹೋಗದೆ ಮೌಲ್ಯಯುತ ಸಂಸ್ಕಾರವನ್ನು ಉಳಿಸಿ ಬೆಳೆಸುವ ನೀತಿಗೆ ಅಣಿಯಾಗಬೇಕು. ಹಿಂದೂ ಸಂಗಮದಿಂದ ಸಮಾಜದ ಬಂಧುಗಳು ಒಂದಾಗುವುದು ಮತ್ತು ಸಮಾಜ ಜಾಗೃತಿಗಾಗಿ ಕಾರ್ಯಕ್ರಮ ರೂಪುಗೊಂಡಿದೆ ಎಂದು ಹೇಳಿದರು.
ಶ್ರೀ ಭದ್ರಕಾಳಿ ದೇವಾಲಯದಿಂದ ಕೊಡವ ಸಮಾಜದ ಅವರಣದ ವರೆಗೆ ಹಿಂದೂ ಸಮಾಜ ಬಾಂಧವರ ಶೋಭಾಯಾತ್ರೆ ನಡೆಯಿತು.
ನಲ್ವತೋಕ್ಲು ಕೊಡವ ಸಮಾಜದ ಅಧ್ಯಕ್ಷ ಮುಕ್ಕಾಟಿರ ಸಂತೋಷ್, ಗ್ರಾಮ ಪಂಚಾಯಿತಿ ನಿಕಟಪೂರ್ವ ಅಧ್ಯಕ್ಷೆ ಮೂಕಂಡ ಲೀಲಾವತಿ, ಬಿಳುಗುಂದ ಹಿಂದೂ ಸಂಗಮ ಆಯೋಜನ ಸಮಿತಿಯ ಸಂಘಟಕರಾದ ಮುಕ್ಕಾಟಿರ ಯೋಗೇಶ್, ವಾಟೇರಿರ ರಾಜಪ್ಪ, ಮಂಡೇಡ ರಾಜ ಮೂಕಂಡ ಸಂಪತ್, ಮಂಡೇಪಂಡ ಲವ, ಆಂಗೀರ ಸುರೇಶ್, ಇತರರಿದ್ದರು.