ಸಮಾಜದ ಪ್ರಗತಿಯಲ್ಲಿ ಮಹಿಳೆ ಪಾತ್ರ ಅನನ್ಯ

ಸೋಮವಾರಪೇಟೆ ರೋಟರಿ ಭವನದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಇನ್ನರ್ ವ್ಹೀಲ್ ಅಧ್ಯಕ್ಷೆ ತನ್ಮಯಿ ಪ್ರವೀಣ್ ಅವರನು ಸನ್ಮಾನಿಸಲಾಯಿತು. ವೀಣಾ, ರಮೇಶ್, ಸುಂದರ್ ಇದ್ದರು.
ಸೋಮವಾರಪೇಟೆ ರೋಟರಿ ಭವನದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಇನ್ನರ್ ವ್ಹೀಲ್ ಅಧ್ಯಕ್ಷೆ ತನ್ಮಯಿ ಪ್ರವೀಣ್ ಅವರನು ಸನ್ಮಾನಿಸಲಾಯಿತು. ವೀಣಾ, ರಮೇಶ್, ಸುಂದರ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಇನ್ನರ್‌ವ್ಹೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ಅಧ್ಯಕ್ಷೆ ತನ್ಮಯಿ ಪ್ರವೀಣ್
  • ರೋಟರಿ ಕ್ಲಬ್
ಸೋಮವಾರಪೇಟೆ: ಮಹಿಳೆಯರು ಸದಾ ತಮ್ಮ ಕುಟುಂಬ, ಸಮಾಜ ಮತ್ತು ರಾಷ್ಟ್ರಕ್ಕೆ ಪ್ರೀತಿ, ಸಹನೆ, ಸೇವಾ ಮನೋಭಾವ ಮತ್ತು ತ್ಯಾಗಮಯಿ ಆಗುವ ಮೂಲಕ ಸಮಾಜದ ಪ್ರಗತಿಗೆ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಇನ್ನರ್‌ವ್ಹೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ಅಧ್ಯಕ್ಷೆ ತನ್ಮಯಿ ಪ್ರವೀಣ್ ಹೇಳಿದರು.
ರೋಟರಿ ಕ್ಲಬ್ ವತಿಯಿಂದ ರೋಟರಿ ಭವನದಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಹಿಳೆಯರಿಗೆ ಸೂಕ್ತ ಅವಕಾಶ, ಗೌರವ ಮತ್ತು ಬೆಂಬಲ ನೀಡಿದಾಗ ಮಾತ್ರ ಸಮಾಜ ಇನ್ನಷ್ಟು ಪ್ರಗತಿಪರವಾಗುತ್ತದೆ. ಮಹಿಳೆಯರು ಶಕ್ತಿಯ ಪ್ರತಿರೂಪವಾಗಿದ್ದು, ಕೇವಲ ಕುಟುಂಬದ ಆಧಾರಸ್ತಂಭ ಮಾತ್ರವಲ್ಲದೆ ಸಮಾಜದ ಅಭಿವೃದ್ಧಿಯ ಪ್ರಮುಖ ಶಕ್ತಿಯಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಮಹಿಳೆಯರ ವಿರುದ್ಧ ನಡೆಯುವ ಅವಹೇಳನಕಾರಿ ಮಾತುಗಳು, ತೇಜೋವಧೆ ಹಾಗೂ ವ್ಯಕ್ತಿತ್ವ ಹನನದಂತಹ ಕೃತ್ಯಗಳನ್ನು ಖಂಡಿಸಬೇಕಾಗಿದೆ. ಇಂತಹ ಅನ್ಯಾಯಗಳ ವಿರುದ್ಧ ಪ್ರತಿಯೊಬ್ಬರೂ ವಿರೋಧ ವ್ಯಕ್ತಪಡಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಅಧ್ಯಕ್ಷೆ ವೀಣಾ ಮನೋಹರ್ ಮಾತನಾಡಿ, ಮಹಿಳೆಯರು ಸಮಾಜದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಶಿಕ್ಷಣ, ಉದ್ಯೋಗ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಮಹಿಳೆಯರು ಸಾಧಿಸಿರುವ ಸಾಧನೆ ಶ್ಲಾಘನೀಯ ಎಂದರು.
ಮಹಿಳೆಯರ ಆತ್ಮವಿಶ್ವಾಸ ಮತ್ತು ಸ್ವಾವಲಂಬನೆ ಹೆಚ್ಚಿಸಲು ಸಮಾಜದ ಎಲ್ಲ ವರ್ಗದವರ ಸಹಕಾರ ಅಗತ್ಯವಿದೆ. ಮಹಿಳೆಯರು ಸೇವಾಭಾವದಿಂದ ಕಾರ್ಯನಿರ್ವಹಿಸಿದಾಗ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ಸಾಧ್ಯ. ಮಹಿಳೆಯರಿಗೆ ಸಮಾನ ಅವಕಾಶ ದೊರೆತರೆ ಸಮೃದ್ಧ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.
ವೇದಿಕೆಯಲ್ಲಿ ಕಾರ್ಯದರ್ಶಿ ಡಿ.ಪಿ.ರಮೇಶ್, ವಲಯ ಸೇನಾನಿ ಡಾ. ರಾಕೇಶ್ ಪಟೇಲ್, ಮುಂದಿನ ಸಾಲಿನ ವಲಯ ಸೇನಾನಿ ಎ.ಎಸ್. ಮಲ್ಲೇಶ್, ನಿಯೋಜಿತ ರೋಟರಿ ಅಧ್ಯಕ್ಷ ಬಿ.ಎಸ್. ಸುಂದರ್ ಇದ್ದರು. ರೋಟರಿ ಕುಟುಂಬದವರ ಸಾಂಸ್ಕೃತಿಕ ಕಾರ್ಯಕ್ರಮ ಜನಮನ ಸೆಳೆಯಿತು.
01ಎಸ್‌ಪಿಟಿ2:
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net