ಭಾವನಾತ್ಮಕ ಸಂವಹನ ಕ್ರಿಯೆಯಾಗಿ ಜನಪದ ಕಲೆಯ ಪಾತ್ರ ಮುಖ್ಯ

ಕುಶಾಲನಗರ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಅನುಗ್ರಹ ಕಾಲೇಜು ಸಂಭಾಗಣದಲ್ಲಿ ಆಯೋಜಿಸಿದ್ದ ದಿ.ಹಂಚೆಟಿರ ಕುಟ್ಟಪ್ಪ ಮತ್ತು ಕಾಮವ್ವ ದಂಪತಿ ಜ್ಞಾಪಕಾರ್ಥ ಜನಪದ ಕಲೆಯ ಕುರಿತ ಉಪನ್ಯಾಸ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಡಾ. ಜಮೀರ್ ಅಹಮದ್, ಎಂ.ಪಿ. ಕೇಶವ ಕಾಮತ್, ಕೆ.ಎಸ್. ನಾಗೇಶ್, ಫ್ಯಾನ್ಸಿ ಮುತ್ತಣ್ಣ, ಡಾ. ಬಿ.ಡಿ. ಚೈತ್ರ, ಶೈಲ ಪ್ರೇಮಕುಮಾರ್ ಇದ್ದರು.
ಕುಶಾಲನಗರ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಅನುಗ್ರಹ ಕಾಲೇಜು ಸಂಭಾಗಣದಲ್ಲಿ ಆಯೋಜಿಸಿದ್ದ ದಿ.ಹಂಚೆಟಿರ ಕುಟ್ಟಪ್ಪ ಮತ್ತು ಕಾಮವ್ವ ದಂಪತಿ ಜ್ಞಾಪಕಾರ್ಥ ಜನಪದ ಕಲೆಯ ಕುರಿತ ಉಪನ್ಯಾಸ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಡಾ. ಜಮೀರ್ ಅಹಮದ್, ಎಂ.ಪಿ. ಕೇಶವ ಕಾಮತ್, ಕೆ.ಎಸ್. ನಾಗೇಶ್, ಫ್ಯಾನ್ಸಿ ಮುತ್ತಣ್ಣ, ಡಾ. ಬಿ.ಡಿ. ಚೈತ್ರ, ಶೈಲ ಪ್ರೇಮಕುಮಾರ್ ಇದ್ದರು.
Published on
ಕುಶಾಲನಗರ:
ಮನುಷ್ಯ ತನ್ನ ಕಷ್ಟ-ಸುಖಗಳನ್ನು ವ್ಯಕ್ತಪಡಿಸುವುದಕ್ಕೆ ಭಾವನಾತ್ಮಕ ಸಂವಹನ ಕ್ರಿಯೆಯಾಗಿ ಜನಪದ ಕಲೆಯ ಪಾತ್ರ ಮುಖ್ಯವಾದುದು ಎಂದು ಕೊಡಗು ವಿಶ್ವವಿದ್ಯಾಲಯದ ಕನ್ನಡ ಉಪನ್ಯಾಸಕರಾ ಡಾ. ಜಮೀರ್ ಅಹಮದ್ ಹೇಳಿದರು. ಕುಶಾಲನಗರ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಬುಧವಾರ ಸ್ಥಳಿಯ ಅನುಗ್ರಹ ಕಾಲೇಜು ಸಂಭಾಗಣದಲ್ಲಿ ಆಯೋಜಿಸಿದ್ದ ದಿ.ಹಂಚೆಟಿರ ಕುಟ್ಟಪ್ಪ ಮತ್ತು ಕಾಮವ್ವ ದಂಪತಿ ಜ್ಞಾಪಕಾರ್ಥ
ಜನಪದ ಕಲೆಯ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಲೆಮಾರಿನಿಂದ ತಲೆಮಾರಿಗೆ ಮೌಖಿಕ ಪರಂಪರೆಯ ಮೂಲಕ ಸಮುದಾಯಗಳ ಸಂಪ್ರದಾಯ, ನಂಬಿಕೆ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಲೆ ಜನಪದ ಆಗಿದೆ. ಜನಪದರಿಂದ ಸೃಷ್ಟಿಸಲ್ಪಟ್ಟ ಕಲೆಗಳು ಕೇವಲ ಮನರಂಜನೆಯ ಸರಕಲ್ಲ. ನಮ್ಮ ಸಂಸ್ಕೃತಿಯ ಜೀವಾಳವಾಗಿವೆ. ಮನರಂಜನೆ ನೀಡುವುದರ ಜತೆಗೆ ಸಮಾಜಕ್ಕೆ ಸೂಕ್ತ ಮಾರ್ಗದರ್ಶನ ನೀಡುತ್ತದೆ. ಜನಪದವು ಪ್ರತಿಯೊಂದು ಪ್ರದೇಶದ ವಿಶಿಷ್ಟ ಇತಿಹಾಸ ಮತ್ತು ಸಾಂಸ್ಕೃತಿಕ ಹಿನ್ನೆಲೆಯನ್ನು ಹಿಡಿಯುತ್ತದೆ. ಕರ್ನಾಟಕವು ಶ್ರೀಮಂತ ಜಾನಪದ ಪರಂಪರೆಯನ್ನು ಹೊಂದಿದ್ದು, ಡೊಳ್ಳು ಕುಣಿತ, ಕಂಸಾಳೆ, ವೀರಗಾಸೆ, ಯಕ್ಷಗಾನ ಮತ್ತು ಭೂತಾರಾಧನೆಯಂಥ ವೈವಿಧ್ಯಮಯ ನೃತ್ಯ, ಗೀತೆ ಹಾಗೂ ಕಲಾ ಪ್ರಕಾರಗಳನ್ನು ಒಳಗೊಂಡಿದೆ.
ಈ ಜನಪದ ಕಲೆಗಳು ಕೃಷಿ ಸಂಸ್ಕೃತಿ, ದೈವಾರಾಧನೆ ಮತ್ತು ವೀರಗಾಸೆಯಂತಹ ಪೌರಾಣಿಕ ಕಥೆಗಳನ್ನು ಹೇಳುತ್ತವೆ. ಚಂಚಿಸುತ್ತವೆ, ಇವು ಗ್ರಾಮೀಣ ಜೀವನದ ಸಾಂಸ್ಕೃತಿಕ ಬೇರುಗಳಾಗಿವೆ. ಜನಪದ ನೃತ್ಯಗಳು, ರಂಗಭೂಮಿ ಮತ್ತು ಗೀತೆಗಳು ಜನಪದ ಸಾಹಿತ್ಯದ ಪ್ರಾಮುಖ್ಯತೆಯನ್ನು ಸಾರುತ್ತದೆ ಎಂದರು.
ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್, ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಗಳನ್ನು ಹೊರತೆಗೆಯಲು ಇಂತಹ ವೇದಿಕೆಗಳು ಸದ್ಬಳಕೆಯಾಗುತ್ತದೆ. ಹಿರಿಯರ ಹೆಸರುಗಳನ್ನು ಶಾಶ್ವತವಾಗಿ ಉಳಿಯುವಂತೆ ಮಾಡಲು ಕನ್ನಡ ಸಾಹಿತ್ಯ ಪರಿಷತ್ತಿಗೆ ಒಂದಷ್ಟು ಹಣ ದೇಣಿಗೆ ನೀಡುತ್ತಾರೆ. ಅದರಲ್ಲಿ ಬರುವ ಬಡ್ಡಿ ಹಣದಲ್ಲಿ ಸಾಹಿತ್ಯ ಕೃಷಿಯನ್ನು ಮಾಡಿ, ಹಿರಿಯರ ಹೆಸರು ಅಜರಾಮರವಾಗಿ ಉಳಿಯುವಂತೆ ಮಾಡಲಾಗುತ್ತದೆ ಎಂದು ಹೇಳಿದರು.
ಕಸಾಪ ತಾಲೂಕು ಅಧ್ಯಕ್ಷ ಕೆ.ಎಸ್. ನಾಗೇಶ್ ಮಾತನಾಡಿ, ವಿದ್ಯಾರ್ಥಿಗಳು ಜನಪದ ಕಲೆಯ ರೀತಿಯಲ್ಲಿ ತೆರೆದುಕೊಳ್ಳಬೇಕು. ಆ ಮೂಲಕ ತಮ್ಮ ತಮ್ಮ ಪ್ರತಿಭೆಗಳನ್ನು ಜಗತ್ತಿಗೆ ತೋರಿಸಬೇಕು ಎಂದರು.
ದತ್ತಿ ದಾನಿಗಳಾದ ಫ್ಯಾನ್ಸಿ ಮುತ್ತಣ್ಣ ಮಾತನಾಡಿ, ಜನಪದ ಎನ್ನುವುದು ಸಂಬAಧಗಳನ್ನು ಬೆಸೆಯುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಸಾಕಷ್ಟು ಸಂತೋಷದ ವಿಚಾರಗಳನ್ನು ಸೃಷ್ಟಿಸುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ಹೇಳಿದರು.
ವಿದ್ಯಾರ್ಥಿಗಳಾದ ದರ್ಶನ್ ಮತ್ತು ಶೆಲ್ಲಿ ಜನಪದ ಹಾಡು ಹೇಳುವ ಮೂಲಕ ಗಮನ ಸೆಳೆದರು.
ಅನುಗ್ರಹ ಕಾಲೇಜು ಪ್ರಾಂಶುಪಾಲೆ ಡಾ. ಬಿ.ಡಿ. ಚೈತ್ರ, ಕಸಾಪ ಕಾರ್ಯದರ್ಶಿ ಶೈಲ ಪ್ರೇಮಕುಮಾರ್, ಕೋಶಾಧಿಕಾರಿ ಉಮೇಶ್, ಹೆಬ್ಬಾಲೆ ಹೋಬಳಿ ಘಟಕದ ಅಧ್ಯಕ್ಷ ಎಂ.ಎನ್. ಮೂರ್ತಿ, ನಿರ್ದೇಶಕರಾದ ಎಂ.ಎನ್.ಕಾಳಪ್ಪ, ಪರಮೇಶ್, ಉಪನ್ಯಾಸಕಿ ಲೀಲಾ ಕುಮಾರಿ ತೊಡಿಕಾನ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net