ಪುಟಾಣಿ ರೈಲಿನ ಚುಕುಬುಕು ಸದ್ದು

ತುಕ್ಕು ಹಿಡಿದ ಸ್ಥಿತಿಯಲ್ಲಿ ಇರುವ ಪಟಾಣಿ ರೈಲಿನ ಬೋಗಿಗಳು
ತುಕ್ಕು ಹಿಡಿದ ಸ್ಥಿತಿಯಲ್ಲಿ ಇರುವ ಪಟಾಣಿ ರೈಲಿನ ಬೋಗಿಗಳು
Published on
ಮಡಿಕೇರಿ:
ರೈಲ್ವೇ ಸಂಪರ್ಕವೇ ಇಲ್ಲದ ದೇಶದ ಏಕೈಕ ಜಿಲ್ಲೆ ಕೊಡಗಿನ ಪುಟಾಣಿ ರೈಲು ತನ್ನ ಸಂಚಾರ ಪುನಾರಂಭಿಸುವ ಲಕ್ಷಣಗಳು ಕಂಡುಬರುತ್ತಿದೆ. ಒಂದೊಮ್ಮೆ ಮಡಿಕೇರಿಯ ಪ್ರಮುಖ ಆಕರ್ಷಣೆ ಆಗಿದ್ದ ಈ ರೈಲು ಹಳೆಯದ್ದಾಗಿದ್ದ ಕಾರಣ ಪ್ರಯಾಣಿಕರ ಸುರಕ್ಷತೆ ಹಿನ್ನೆಲೆಯಲ್ಲಿ 10 ವರ್ಷಗಳ ಹಿಂದೆ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಇದೀಗ ಆಧುನಿಕ ತಂತ್ರಜ್ಞಾನಗಳೊAದಿಗೆ ಸ್ಥಳೀಯ ಹವಾಮಾನಕ್ಕೆ ಹೊಂದಿಕೊಳ್ಳುವAಥ ಯೋಜನೆಯ ಬಗ್ಗೆ ಚರ್ಚೆಗಳು ನಡೆದಿದ್ದು, ಆದಷ್ಟು ಶೀಘ್ರ ಅನುಷ್ಠಾನಗೊಳ್ಳುವ ವಿಶ್ವಾಸ ವ್ಯಕ್ತವಾಗುತ್ತಿದೆ.
ಪ್ರವಾಸಿ ಜಿಲ್ಲೆ ಕೊಡಗಿನಲ್ಲಿ 1991ರಲ್ಲಿ ಆರಂಭವಾದ ಪುಟಾಣಿ ರೈಲು ಸಂಚಾರದಿAದಾಗಿ ದೇಶದಲ್ಲಿ ರೈಲ್ವೇ ಸಂಪರ್ಕ ಇಲ್ಲದ ಏಕೈಕ ಜಿಲ್ಲೆ ಎನ್ನುವ ಕೊರಗನ್ನು ಹೋಗಲಾಡಿಸುವಲ್ಲಿ ಸ್ವಲ್ಪಮಟ್ಟಿಗೆ ಯಶಸ್ವಿ ಆಗಿತ್ತು. ಮೊದಲಿಗೆ ಮಡಿಕೇರಿ ಗಾಲ್ಫ್ ಗ್ರೌಂಡ್ ಬಳಿ ಪುಟಾಣಿ ರೈಲು ಸಂಚಾರದ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ಆ ಪ್ರದೇಶ ನಗರದಿಂದ ದೂರ ಮತ್ತು ಅಲ್ಲಿಗೆ ಹೆಚ್ಚಾಗಿ ಪ್ರವಾಸಿಗರು ತೆರಳುವುದಿಲ್ಲ ಎನ್ನುವ ಕಾರಣಕ್ಕೆ ರಾಜಾಸೀಟ್‌ಗೆ ಸ್ಥಳಾಂತರಿಸಲಾಗಿತ್ತು. ನಂತರ 2016ರ ತನಕವೂ ಈ ಆಟಿಕೆ ರೈಲು ಚಾಲನೆಯಲ್ಲಿ ಇತ್ತು.
2018ರ ಆ.9 ರಂದು ನಡೆಸಲಾಗಿದ್ದ ಪುಟಾಣಿ ರೈಲಿನ ನಿಯತಕಾಲಿಕ ತಪಾಸಣಾ ವರದಿಯಲ್ಲಿ ಹಾಲಿ ಇರುವ ಪುಟಾಣಿ ರೈಲಿನಲ್ಲಿ ಗೇರ್ ಬಾಕ್ಸ್, ಹೈಡ್ರಾಲಿಕ್ ಪವರ್ ಟ್ರಾನ್ಸ್ಮಿಷನ್, ಲೀಫ್ ಸ್ಪಿçಂಗ್‌ಗಳು, ಸೆಂಟರ್ ಪಿಓಟ್‌ಗಳು ಮತ್ತು ರೈಲ್ವೆ ಬಾಡಿ 28 ವರ್ಷ ಹಳೆಯದಾಗಿರುವುದರಿಂದ ಶಿಥಿಲಗೊಂಡು ತಾಂತ್ರಿಕ ದೋಷದಿಂದ ಕೂಡಿದೆ. ಹಾಗಾಗಿ ಪ್ರಯಾಣಿಕರ ಹಿತದೃಷ್ಟಿಯಿಂದ ಸ್ಥಗಿತಗೊಳಿಸುವಂತೆ ರೈಲ್ವೇ ಇಲಾಖೆ ಅಧಿಕಾರಿಗಳು ತಿಳಿಸಿದ್ದರು. ಹಳೆಯ ರೈಲಿನ ದುರಸ್ತಿಯ ಬದಲು ಪ್ರವಾಸಿಗರ ಸುರಕ್ಷತಾ ಹಿತದೃಷ್ಠಿಯಿಂದ ಹೊಸದಾಗಿ ರೈಲನ್ನು ಖರೀದಿಸಿ ಚಾಲನೆ ಮಾಡಲು ಶಿಫಾರಸ್ಸು ಮಾಡಲಾಗಿತ್ತು.
ಸ್ಥಳೀಯರು ಮಾತ್ರವಲ್ಲದೆ ಪ್ರವಾಸಿಗರ ಮನವನ್ನೂ ಗೆದ್ದಿದ್ದ ಈ ಪುಟಾಣಿ ರೈಲಿನ ಸಂಚಾರವನ್ನು ರೈಲ್ವೇ ಇಲಾಖೆ ಅಧಿಕಾರಿಗಳ ಶಿಫಾರಸ್ಸಿನ ಹಿನ್ನೆಲೆಯಲ್ಲಿ ಪ್ರವಾಸಿಗರ ಸುರಕ್ಷತೆಯ ಕಾರಣ ನೀಡಿ ನಿಲ್ಲಿಸಲಾಗಿತ್ತು. ನಂತರ ಜಿಲ್ಲೆಯನ್ನು ಕಾಡಿದ್ದ ಪ್ರಾಕೃತಿ ವಿಕೋಪ ಈ ರೈಲು ಸಂಚಾರದ ಮೇಲೂ ಪರಿಣಾಮ ಬೀರಿ ಪುನಾರಂಭಕ್ಕೆ ಕಾಲವೇ ಕೂಡಿಬಂದಿರಲಿಲ್ಲ. ಈ ಬಗ್ಗೆ ಅಂದಿನ ವಿಧಾನಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಹ್ಮಣಿ ಹಾಲಿ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಸದನದಲ್ಲೂ ಗಮನ ಸೆಳೆದಿದ್ದರು.
ಮೊದಲು ಈ ಪುಟಾಣಿ ರೈಲನ್ನು ಮಡಿಕೇರಿ ನಗರಸಭೆ ವತಿಯಿಂದ ಅಭಿವೃದ್ಧಿಪಡಿಸಿ ಇದರಿಂದ ಬರುವ ಆದಾಯ ಮತ್ತು ಖರ್ಚನ್ನು ನಗರಸಭೆಯ ವತಿಯಿಂದಲೇ ನಿರ್ವಹಣೆ ಮಾಡಲಾಗುತ್ತಿತ್ತು. ನಂತರದ ದಿನಗಳಲ್ಲಿ ಮಕ್ಕಳ ಟಾಯ್ ಟ್ರೆöÊನ್ ಘಟಕ ಗ್ರೇಟರ್ ರಾಜಾಸೀಟ್ ಉದ್ಯಾನವನದ ಒಂದು ಭಾಗವಾಗಿದೆ. ರೈಲ್ವೇ ಹಳಿ, ಬೋಗಿ, ಎಂಜಿನ್‌ಗಳು ಹಾಳಾದ ಕಾರಣ ದುರಸ್ತಿ ಸಾಧ್ಯವಾಗದೇ ಇದನ್ನು ಸ್ಥಗಿತಗೊಳಿಸಿರುವ ಬಗ್ಗೆ ಸರ್ಕಾರವೂ ಸದನದಲ್ಲಿ ಉತ್ತರ ಕೊಟ್ಟಿತ್ತು.
ಪುಟಾಣಿ ರೈಲು ಸಂಚಾರ ಸ್ಥಗಿತ ಆಗುವ ಸಂದರ್ಭ ಈ ಸಂಪೂರ್ಣ ವ್ಯವಸ್ಥೆ ನಗರಸಭೆ ವತಿಯಿಂದ ನಿರ್ವಹಣೆ ಆಗುತ್ತಿತ್ತು. ನಗರಸಭೆಯ ನಿರ್ವಹಣೆಯಲ್ಲಿ ಇರುವಾಗಲೇ ಪುಟಾಣಿ ರೈಲಿನ ಬೋಗಿ, ಎಂಜಿನ್, ಹಳಿಗಳು ಹಾಳಾಗಿದ್ದು, ಓಡಾಟವೂ ಸ್ಥಗಿತಗೊಂಡಿತ್ತು. ನಂತರದ ಅವಧಿಯಲ್ಲಿ ಅಂದರೆ 2021ರ ಆ. 8ರಂದು ಗ್ರೇಟರ್ ರಾಜಾಸೀಟ್ ಉದ್ಯಾನವನ ತೋಟಗಾರಿಕೆ ಇಲಾಖೆಗೆ ಹಸ್ತಾಂತರ ಆಗಿದೆ. ಆದರೆ ತೋಟಗಾರಿಕೆ ಇಲಾಖೆಗೆ ರಾಜಾಸೀಟ್ ಜಮೀನು ಹಸ್ತಾಂತರವಾಗುವ ಸಂದರ್ಭದಲ್ಲಿ ಗ್ರೇಟರ್ ರಾಜಾಸೀಟ್‌ನ ಭಾಗವಾಗಿರುವ ಪುಟಾಣಿ ರೈಲಿಗೆ ಸಂಬAಧಿಸಿದ ಕಡತ ಮತ್ತು ಸಾಮಗ್ರಿಗಳು ಹಸ್ತಾಂತರ ಆಗಿಲ್ಲ ಎನ್ನಲಾಗುತ್ತಿದೆ.
ಮತ್ತೊಂದು ಕಡೆ ಪುಟಾಣಿ ರೈಲು ಸಂಚಾರ ಪುನಾರಂಭಿಸಲು ತೋಟಗಾರಿಕೆ ಇಲಾಖೆ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ. ಈ ಸಂಬAಧ ರೈಲ್ವೇ ಹಳಿ, ಬೋಗಿ ಹಾಗೂ ರೈಲು ಎಂಜಿನ್ ಅನ್ನು ಹೊಸದಾಗಿ ಅಳವಡಿಸಲು ಸ್ಥಳ ಪರಿಶೀಲನೆ ನಡೆಸಿ ಅಂದಾಜು ಪಟ್ಟಿ ಸಲ್ಲಿಸುವಂತೆ ಮೈಸೂರು ವಿಭಾಗದ ದಕ್ಷಿಣ-ಪಶ್ಚಿಮ ರೈಲ್ವೇ ಅಧಿಕಾರಿಗಳನ್ನು ತೋಟಗಾರಿಕೆ ಇಲಾಖೆಯಿಂದ ಕೋರಲಾಗಿತ್ತು. ಈ ಹಿನ್ನೆಲೆಯಲ್ಲಿ ಸಂಬAಧಿಸಿದ ರೈಲ್ವೇ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ತಯಾರಿಸಿರುವ ತಾಂತ್ರಿಕ ಮಾಹಿತಿ ಮತ್ತು ಅಂದಾಜು ಪಟ್ಟಿಯ ಅಧ್ಯಯನ ನಡೆದಿದೆ.
ಈ ಮೊದಲು ಇಲ್ಲಿ ಓಡುತ್ತಿದ್ದ ಪುಟಾಣಿ ರೈಲು ಎಂಜಿನ್‌ಗೆ ಡೀಸೆಲ್ ಬಳಕೆ ಆಗುತ್ತಿತ್ತು. ಆದರೆ ಈಗ ನಡೆಯುತ್ತಿರುವ ಚರ್ಚೆಗಳ ಪ್ರಕಾರ ವಿದ್ಯುತ್ ಚಾಲಿತ ಆಟಿಕೆ ರೈಲು ಸೂಕ್ತ ಎನ್ನುವ ಅಭಿಪ್ರಾಯಗಳು ವ್ಯಕ್ತ ಆಗುತ್ತಿದೆ. ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಕೂಡ ಈ ಬಗ್ಗೆ ಒಲವು ತೋರಿಸಿದ್ದಾರೆ. ಆದರೆ ವರ್ಷದ ಬಹುತೇಕ ತಿಂಗಳು ಮಳೆ ಮತ್ತು ಮಂಜು ಕವಿದ ವಾತಾವರಣ ಇರುವ ಮಡಿಕೇರಿಗೆ ಎಲೆಕ್ಟಿçಕ್ ರೈಲು ಎಷ್ಟು ಸೂಕ್ತ ಎನ್ನುವುದರ ಬಗ್ಗೆಯೂ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆಗಳು ಆಗುತ್ತಿವೆ.
ಪುಟಾಣಿ ರೈಲು ಸಂಚಾರ ಪುನಾರಂಭಕ್ಕೆ ಸಾಕಷ್ಟು ಪ್ರಯತ್ನಗಳು ಮೊದಲಿನಿಂದಲೂ ನಡೆಯುತ್ತಿದೆ. ಆದರೆ ಸೂಕ್ತ ಕಾಲ ಮಾತ್ರ ಕೂಡಿ ಬರುತ್ತಿಲ್ಲ. 2019ರಲ್ಲಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಅಂದಿನ ಸದಸ್ಯ ಪಿ.ಡಿ. ಪೊನ್ನಪ್ಪ ಇದೇ ವಿಷಯ ಪ್ರಸ್ತಾಪಿಸಿದ್ದರು. ಈ ವೇಳೆ ಅಂದು ಉತ್ತರಿಸಿದ್ದ ಅಧಿಕಾರಿಗಳು, ಪುಟಾಣಿ ರೈಲನ್ನು ಪರಿಶೀಲಿಸಿರುವ ರೈಲ್ವೇ ಇಲಾಖೆ, ಈ ರೈಲು ಓಡಾಟ ಸುರಕ್ಷಿತ ಅಲ್ಲ. ಅದನ್ನು ಬದಲಾಯಿಸಬೇಕು ಎನ್ನುವ ಸಲಹೆ ಕೊಟ್ಟಿದೆ. ಈ ಹಿನ್ನೆಲೆಯಲ್ಲಿ ರೈಲನ್ನು ಬದಲಾಯಿಸುವ ಸಂಬAಧ ಸಿದ್ಧತೆ ನಡೆದಿದೆ. 48 ಜನ ಪ್ರಯಾಣಿಸಬಹುದಾದ ಪುಟಾಣಿ ರೈಲಿಗೆ 1.12 ಕೋಟಿ ರೂ. ವೆಚ್ಚ ಆಗಲಿದೆ. ಇದು ಸಂಪೂರ್ಣ ಸುರಕ್ಷಿತವಾಗಿದ್ದು, ಕೊಡಗಿನ ಹವಾಮಾನ ತಾಳಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಈಗಿರುವ ಹಳಿಗೆ ಬಳಸಿರುವ ಮರವೂ ಹಾಳಾಗಿದ್ದು, ಅದನ್ನೂ 48 ಲಕ್ಷ ವೆಚ್ಚದಲ್ಲಿ ಬದಲಾಯಿಸಿ ಕಾಂಕ್ರಿಟ್ ಅಳವಡಿಸಲಾಗುವುದು ಎಂದು ತಿಳಿಸಿದ್ದರು. ಈಗ ಹೊಸದಾಗಿ ಯೋಜನೆ ಆರಂಭಿಸಿದರೂ ಕೊಡಗಿನ ಹವಾಮಾನ ತಾಳಿಕೊಳ್ಳುವ ಸಾಮರ್ಥ್ಯದ ಆಟಿಕೆ ರೈಲು ವ್ಯವಸ್ಥೆಯನ್ನೇ ಅಳವಡಿಸಬೇಕಿದೆ ಎನ್ನುವುದು ಸ್ಥಳೀಯರ ಅಭಿಪ್ರಾಯ ಆಗಿದೆ.
"

ಮಡಿಕೇರಿ ರಾಜಾಸೀಟ್‌ನಲ್ಲಿ ಪುಟಾಣಿ ರೈಲು ಸಂಚಾರ ಪುನಾರಂಭಕ್ಕೆ ಸಂಬAಧಿಸಿದAತೆ ನೈರುತ್ಯ ರೈಲ್ವೆ ವಿಭಾಗದವರು ವರದಿ ನೀಡಿದ್ದಾರೆ. ಹಾಲಿ ಇದ್ದ ಡೀಸೆಲ್ ಎಂಜಿನ್ ಬದಲಿಗೆ ವಿದ್ಯುತ್ ಚಾಲಿತ ಪುಟಾಣಿ ರೈಲು ಆರಂಭಿಸಲು ಪ್ರಯತ್ನ ನಡೆದಿದೆ. ರಾಜಾಸೀಟ್‌ಗೆ ವರ್ಷಕ್ಕೆ 65 ಲಕ್ಷಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡುತ್ತಾರೆ. ಹಾಗಾಗಿ ಪುಟಾಣಿ ರೈಲು ಒಳಗೊಂಡು ರಾಜಾಸೀಟ್ ಅಭಿವೃದ್ಧಿಯ ಅಗತ್ಯವಿದೆ. ಇಲ್ಲಿ ಫುಡ್‌ಕೋರ್ಟ್ ನಿರ್ಮಾಣ ಆಗುತ್ತಿದ್ದು, ಪುಟಾಣಿ ರೈಲು ಜಾಗಕ್ಕೆ ಯಾವುದೇ ರೀತಿಯಲ್ಲಿ ಧಕ್ಕೆ ಆಗಬಾರದು. ಪರಿಸರ ಶುಚಿತ್ವಕ್ಕೆ ಆದ್ಯತೆ ನೀಡಬೇಕು ಎಂದು ಸೂಚಿಸಲಾಗಿದೆ.

— ಡಾ. ಮಂತರ್ ಗೌಡ, ಮಡಿಕೇರಿ ಶಾಸಕ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net