ಕಡ್ಡಾಯ ಕನ್ನಡ ನಾಮಫಲಕಕ್ಕೆ ದೊರೆಯದ ಕಿಮ್ಮತ್ತು

Tನಾಮಫಲಕಗಳಲ್ಲಿ ಶೇ. 60ರಷ್ಟು ಕನ್ನಡ ಕಡ್ಡಾಯ ಆದೇಶ ನವೆಂಬರ್ ಮಾಸದಲ್ಲಾದರೂ ಜಾರಿಗೆ ಬರಲಿ ಎನ್ನುವುದು ಕನ್ನಡಾಭಿಮಾನಿಗಳ ಆಶಯ
Tನಾಮಫಲಕಗಳಲ್ಲಿ ಶೇ. 60ರಷ್ಟು ಕನ್ನಡ ಕಡ್ಡಾಯ ಆದೇಶ ನವೆಂಬರ್ ಮಾಸದಲ್ಲಾದರೂ ಜಾರಿಗೆ ಬರಲಿ ಎನ್ನುವುದು ಕನ್ನಡಾಭಿಮಾನಿಗಳ ಆಶಯ
Published on

ಪ್ರಮುಖ ಮುಖ್ಯಾಂಶಗಳು

  • ಕೇರಳದಿಂದ ಸುತ್ತುವರಿದಿರುವ ಕೊಡಗು
  • ಗಡಿಭಾಗದಲ್ಲಿ ಮಲಯಾಳಂ ಪ್ರಾಬಲ್ಯ
  • ನಾಮಫಲಕಗಳಲ್ಲಿ ಶೇ. 60 ಭಾಗ ಕನ್ನಡ ಕಡ್ಡಾಯ
 ಮಡಿಕೇರಿ
 ಜಿಲ್ಲೆಯ ಬಹುತೇಕ ಗಡಿ ಭಾಗಗಳಲ್ಲಿ ಕೇರಳದಿಂದ ಸುತ್ತುವರಿದಿರುವ ಕೊಡಗಿನಲ್ಲಿ ಮಲಯಾಳಂ ಪ್ರಾಬಲ್ಯ ಹೆಚ್ಚು ಕಂಡು ಬರುತ್ತಿದೆ. ಕೊಡಗು ಪ್ರವಾಸಿ ಜಿಲ್ಲೆಯೂ ಆಗಿರುವುದರಿಂದ ಇಂಗ್ಲಿಷ್ ಮತ್ತು ಹಿಂದಿಯೂ ಪ್ರಚಲಿತದಲ್ಲಿದೆ. ಈ ಮಧ್ಯೆ ನಾಮಫಲಕಗಳಲ್ಲಿ ಶೇ. 60 ಭಾಗ ಕನ್ನಡ ಕಡ್ಡಾಯ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಲ್ಲಿರುವ ಎಲ್ಲಾ ಅಂಗಡಿ, ಹೋಟೆಲ್, ವಾಣಿಜ್ಯ ಸಂಕೀರ್ಣ, ಕೈಗಾರಿಕೋದ್ಯಮ, ಶಾಲಾ ಕಾಲೇಜು, ಸರ್ಕಾರಿ ಕಚೇರಿಗಳು ಹಾಗೂ ಪ್ರವಾಸೋದ್ಯಮ ಕೇಂದ್ರಗಳ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆ ಬಳಕೆ ಕಡ್ಡಾಯವಾಗಿದ್ದು, ಈ ಸಂಬAಧ ತಮ್ಮ ತಮ್ಮ ಇಲಾಖೆ ವ್ಯಾಪ್ತಿಯಲ್ಲಿ ಸಮರ್ಪಕ ಅನುಷ್ಠಾನಕ್ಕೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಸಂಬAಧಿಸಿದವರಿಗೆ ಈಗಾಗಲೇ ಸೂಚನೆ ಕೊಟ್ಟಿದ್ದಾರೆ.
 ಸರ್ಕಾರ ಅಥವಾ ಸ್ಥಳೀಯ ಪ್ರಾಧಿಕಾರಗಳಿಂದ ಅನುಮತಿ, ಮಂಜೂರಾತಿ ಪಡೆದ ಎಲ್ಲಾ ಸಂಸ್ಥೆಗಳಿಗೂ ಈ ಆದೇಶ ಅನ್ವಯವಾಗಲಿದೆ. ಜಿಲ್ಲೆಯ ಗಡಿ ಪ್ರದೇಶಗಳು, ಖಾಸಗಿ ಶಾಲೆಗಳಲ್ಲಿ ಕನ್ನಡ ಭಾಷೆಗೆ ಪ್ರಥಮ ಆದ್ಯತೆ ನೀಡಬೇಕು. ಈ ಕಾರ್ಯ ಆಗದಿದ್ದಲ್ಲಿ ಪ್ರಥಮ ಹಂತದಲ್ಲಿ 5 ಸಾವಿರ ರೂ., ಎರಡನೇ ಹಂತದಲ್ಲಿ 10 ಸಾವಿರ ರೂ. ದಂಡ ಪಾವತಿಸಬೇಕಾಗುತ್ತದೆ. ನಂತರವೂ ಎಚ್ಚೆತ್ತುಕೊಳ್ಳದಿದ್ದಲ್ಲಿ ಪರವಾನಗಿಯನ್ನು ರದ್ದು ಪಡಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ಕೊಟ್ಟಿದ್ದಾರೆ. 
 ಜಿಲ್ಲಾಧಿಕಾರಿ ಆದೇಶ ಪರಿಣಾಮಕಾರಿಯಾಗಿ ಜಾರಿಯಾಗಲು ಸಂಬAಧಿಸಿದ ಸ್ಥಳೀಯಾಡಳಿತದ ಸಹಕಾರವೂ ಬೇಕಾಗುತ್ತದೆ. ಆದರೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಈ ಆದೇಶಕ್ಕೆ ಯಾವುದೇ ಕಿಮ್ಮತ್ತು ದೊರೆತಂತೆ ಕಂಡುಬರುತ್ತಿಲ್ಲ. ದಂಡ ಪ್ರಯೋಗ ಸರಿಯಾದ ರೀರಿಯಲ್ಲಿ ನಡೆದರೆ ಇದೇನೂ ಕಷ್ಟದ ವಿಷಯ. ಕನ್ನಡ ಮಾಸವಾದ ನವೆಂಬರ್‌ನಲ್ಲಾದರೂ ಇದು ಜಾರಿಯಾಗಲಿ ಎನ್ನುವುದು ಕನ್ನಡಾಭಿಮಾನಿಗಳ ಒತ್ತಾಯ. ಈ ಬಗ್ಗೆ ವಿಜಯವಾಣಿ ಓದುಗರು ಲೌಡ್‌ಸ್ಪೀಕರ್‌ನಲ್ಲಿ ಅಭಿಪ್ರಾಯ ಹಂಚಿಕೊAಡಿದ್ದಾರೆ.
"

ನಾಮಫಲಕಗಳಲ್ಲಿ ಶೇ. 60 ರಷ್ಟು ಕನ್ನಡ ನಿಯಮ ಕನ್ನಡ ಭಾಷೆಯ ಗೌರವ, ಸಂರಕ್ಷಣೆ ಮತ್ತು ಪ್ರಚಾರಕ್ಕಾಗಿ ಅಗತ್ಯವಾಗಿದೆ. ಜನರು ತಮ್ಮ ಮಾತೃ ಭಾಷೆಯನ್ನೇ ಮೊದಲಿಗೆ ಕಾಣುವಂತಾದರೆ ಸಂತೋಷವಾಗುತ್ತದೆ. ವ್ಯಾಪಾರ ಕೇಂದ್ರಗಳು, ಅಂಗಡಿಗಳು, ಸಂಸ್ಥೆಗಳು ಕನ್ನಡದಲ್ಲಿ ನಾಮಫಲಕ ಹಾಕುವುದರಿಂದ ಸ್ಥಳೀಯರಿಗೆ ಅರಿವು ಮತ್ತು ಅರ್ಥಗರ್ಭಿತ ಸಂವಹನ ಸಾಧ್ಯವಾಗುತ್ತದೆ. ಜತೆಗೆ ಕನ್ನಡದ ಸಾಂಸ್ಕೃತಿಕ ಗುರುತನ್ನು ಉಳಿಸಲು ಇದು ಸಹಾಯಕ.

"

ಕೊಡಗು ಪ್ರವಾಸಿ ತಾಣ ಆಗಿರುವುದರಿಂದ ಎಲ್ಲಾ ನಾಮಫಲಕಗಳು ಕನ್ನಡದಲ್ಲಿ ಇರುವುದು ಒಳ್ಳೆಯದು. ಅದರ ಜತೆಗೆ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಇದ್ದರೆ ಪ್ರವಾಸಿಗರಿಗೆ ಅನುಕೂಲ ಆಗುತ್ತದೆ. ಆದರೆ ಬೇರೆ ರಾಜ್ಯದ ಭಾಷೆಗಳ ನಾಮಫಲಕ ಬಳಸದಂತೆ ಕಟ್ಟು ನಿಟ್ಟಿನ ಆದೇಶ ಮಾಡಬೇಕು.

"

ಕನ್ನಡ ನಾಮಫಲಕ ಇತರೆ ರಾಜ್ಯಗಳಲ್ಲಿ ಕಾಣುವುದಿಲ್ಲ. ಆದರೆ ನಮ್ಮ ರಾಜ್ಯದಲ್ಲಿ ಇತರೆ ರಾಜ್ಯದ ನಾಮಫಲಕಗಳು ರಾರಾಜಿಸುತ್ತದೆ. ಈ ವಿಚಾರಗಳ ಬಗ್ಗೆ ನವೆಂಬರ್ ತಿಂಗಳಿನಲ್ಲಿ ಮಾತ್ರ ಹೆಚ್ಚು ಜೋರಾಗಿ ಮಾತನಾಡುತ್ತಾರೆ. ನಂತರ ಅದರ ಬಗ್ಗೆ ಯಾರೂ ಧ್ವನಿ ಎತ್ತುವುದಿಲ್ಲ. ಕೇವಲ ನವೆÀಂಬರ್ ತಿಂಗಳು ಮಾತ್ರ ಕನ್ನಡ ತಿಂಗಳಾಗಬಾರದು. ಪ್ರತಿ ತಿಂಗಳೂ ಕನ್ನಡ ಉಳಿಸಿ ಬೆಳೆಸುವ ಕೆಲಸ ಆಗಬೇಕು.

"

ಕಳೆದ ಹಲವಾರು ವರ್ಷಗಳಿಂದ ಎಲ್ಲಾ ವ್ಯಾಪಾರಸ್ಥರ ಅಂಗಡಿಗಳಿಗೆ ಕನ್ನಡ ನಾಮಫಲಕ ಅಳವಡಿಸುವುದು ಕಡ್ಡಾಯ ಎಂದು ಹೇಳಲಾಗುತ್ತಿದೆ. ಆದರೆ ಅದು ಅಧಿಕೃತವಾಗಿ ಜಾರಿ ಆಗಿಲ್ಲ. ಕೇವಲ ನವೆÀಂಬರ್ ಮಾಸದಲ್ಲಿ ಕನ್ನಡ ರಾಜ್ಯೋತ್ಸವದ ಹೆಸರಿನಲ್ಲಿ ಈ ರೀತಿ ಆದರೆ ಪ್ರಯೋಜನವಿಲ್ಲ. ಇದು ಪ್ರತೀ ದಿನ ಗ್ರಾಮ ಪಂಚಾಯಿತಿಗಳು ಎಚ್ಚರ ವಹಿಸಿ ಸ್ಥಳೀಯ ಭಾಗಗಳಲ್ಲಿ ಅರಿವು ಮೂಡಿಸುವುದು ಸೂಕ್ತವಾಗಿದೆ.

"

ಕನ್ನಡವನ್ನು ಉಳಿಸಬೇಕು ಬೆಳೆಸಬೇಕು ಎಂದು ಸÀರ್ಕಾರ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಾ ಇದೆ. ಅದರಂತೆ ಜಿಲ್ಲಾಡಳಿತ ಕೂಡ ನಾಮಫಲಕದಲ್ಲಿ ಕನ್ನಡ ಕಡ್ಡಾಯ ಮಾಡಿದೆ. ಇದು ಉತ್ತಮ ಬೆಳವಣಿಗೆ. ಇಂದಿನ ತಂತ್ರಜ್ಞಾನದ ಯುಗದಲ್ಲಿ ಯಾವ ಭಾಷೆಯನ್ನು ಬೇಕಾದರೂ ತಿಳಿಯುವ ಸಂದರ್ಭ ಇದೆ. ಹಾಗಾಗಿ ಕನ್ನಡ ಕಡ್ಡಾಯ ಸ್ವಾಗತಾರ್ಹ.

"

ಇದು ನಿಜಕ್ಕೂ ಗಂಭೀರ ವಿಷಯ. ಕೇರಳದ ಗಡಿಯಂಚಿನಲ್ಲಿ ಇರುವ ದಕ್ಷಿಣ ಕೊಡಗಿನ ಹಲವಾರು ಪಟ್ಟಣಗಳಲ್ಲಿ ಈಗಲೂ ಅಂಗಡಿ ಮುಂಗಟ್ಟು, ಸೂಚನಾ ಫಲಕಗಳಲ್ಲಿ ಕನ್ನಡವಿಲ್ಲ. ಬರೇ ಇಂಗ್ಲಿಷ್ ಹಾಗೂ ಮಲಯಾಳಂ ಸೇರಿ ಇನ್ನಿತರ ಭಾಷೆಯಲ್ಲಿದೆ. ಜಿಲ್ಲಾಧಿಕಾರಿ ಆದೇಶವನ್ನು ಯಾರೂ ಪಾಲಿಸುತ್ತಿಲ್ಲ. ಈ ಅವಸ್ಥೆ ಬದಲಾಗಬೇಕಿದೆ. ಮೊದಲ ಆದ್ಯತೆ ಕನ್ನಡಕ್ಕೆ ಸಿಗಬೇಕಿದೆ. ಜಿಲ್ಲಾಡಳಿತ ಈ ದುರವಸ್ಥೆಯ ಬಗ್ಗೆ ಎಚ್ಚೆತ್ತು ಕ್ರಮ ಕೈಗೊಳ್ಳಬೇಕಿದೆ.

"

ನಮ್ಮ ದೇಶ ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ್ದರೂ ಆಯಾ ರಾಜ್ಯಗಳಲ್ಲಿ ಅಲ್ಲಿಯ ಭಾಷೆಗೆ ಬಹಳ ಪಾಮುಖ್ಯತೆ ಕೊಡುತ್ತಾರೆ. ನಾಮಫಲಕ ಮಾತ್ರವಲ್ಲ ವ್ಯಾವಹಾರಿಕವಾಗಿ ಕೂಡ ಬೇರೆ ಭಾಷೆಯ ಬಳಕೆ ಬೇರೆ ರಾಜ್ಯಗಳಲ್ಲಿ ಕಾಣುವುದಿಲ್ಲ. ಇದು ಆ ಭಾಷೆಯ ಪೋಷಣೆ ಮತ್ತು ಭಾಷಾಭಿಮಾನ. ಹೀಗಿರುವಾಗ ಬೇರೆಡೆಗಳಲ್ಲಿ ಕನ್ನಡ ಬಳಕೆ ಇಲ್ಲದ ಮೇಲೆ ಕರ್ನಾಟಕದಲ್ಲಿ ಕನ್ನಡ ಬಳಸಲು ಕೀಳರಿಮೆಯೇಕೆ? ಕೊಡಗು ಪ್ರವಾಸಿ ಜಿಲ್ಲೆಯಾದರೂ ಕೊಡಗಿನವರು ಹೊರ ರಾಜ್ಯಕ್ಕೆ ಹೋದಾಗ ಅಲ್ಲಿಯ ಭಾಷೆಯ ಬಗ್ಗೆ ತಿಳಿದುಕೊಂಡು ಹೊಂದಿಕೊಳ್ಳುವುದಿಲ್ಲವೇ ? ಆದ್ದರಿಂದ ನಾಮಫಲಕದಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಶೇ. 40 ಇಂಗ್ಲಿಷ್ ಮತ್ತು ಹಿಂದಿ ಬಳಕೆಯಾದರೆ, ಕಡ್ಡಾಯವಾಗಿ ಶೇ. 60 ಕನ್ನಡ ಬಳಕೆ ಆಗಲೇಬೇಕು.

"

ನಾಮಫಲಕದಲ್ಲಿ ಶೇ. 60ರಷ್ಟು ಕನ್ನಡ ಕಡ್ಡಾಯಗೊಳಿಸಿರುವ ನಿಯಮ ಬಹಳ ಮಹತ್ವದಾಗಿದೆ. ಈ ನಿಯಮ ಆದಷ್ಟು ಬೇಗ ಕಡ್ಡಾಯವಾಗಿ ಜಾರಿ ಆಗುವಂತೆ ಮಾಡಬೇಕು. ಇಲ್ಲಿ ಪ್ರಾದೇಶಿಕವಾಗಿ ಬೇರೆ ಭಾಷೆ, ವ್ಯವಹಾರಿಕವಾಗಿ ಬೇರೆ ಭಾಷೆ ಪ್ರಚಲಿತದಲ್ಲಿದ್ದರೂ ಕೊಡಗು ಕರ್ನಾಟಕದಲ್ಲಿದೆ ಎಂಬುದನ್ನು ಅರಿತು ಕನ್ನಡ ಭಾಷೆಗೆ ಮೊದಲ ಪ್ರಾಶಸ್ತ್ಯ ನೀಡಿ ನಂತರ ಇತರೆ ಭಾಷೆಗೆ ಗಮನ ಹರಿಸಬೇಕು.

"

ಕೊಡಗಿನಲ್ಲಿ ಕನ್ನಡ ಅಭಿಮಾನ ದಿನದಿಂದ ದಿನಕ್ಕೆ ಸೊರಗುತ್ತಿದೆ. ಬಾಳಿ ಬದುಕುವ ನೆಲ, ಜಲ, ಭಾಷೆಯನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ವ್ಯಾವಹಾರಿಕ ಭಾಷೆಯಾಗಿ ಕನ್ನಡ ಬಳಕೆಯಾಗಬೇಕು

"

ನ್ನಡ ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ, ವಿದೇಯಕ, 2024ಕ್ಕೆ ರಾಜ್ಯಪಾಲರಿಂದ ಒಪ್ಪಿಗೆ ದೊರೆತಿದ್ದು, ಜಿಲ್ಲೆಯ ಕೈಗಾರಿಕೆಗಳು, ವಾಣಿಜ್ಯ ಸಂಸ್ಥೆಗಳು, ವಹಿವಾಟು ಕೇಂದ್ರಗಳು, ಉದ್ಯಮಗಳ ನಾಮಫಲಕಗಳಲ್ಲಿ ಶೇ. 60ರಷ್ಟು ಕನ್ನಡ ಭಾಷೆ ಇರಲೇಬೇಕು. ಆ ನಿಟ್ಟಿನಲ್ಲಿ ಸ್ಥಳೀಯ ಸಂಸ್ಥೆಗಳು ಹಾಗೂ ಸಂಬAಧಪಟ್ಟ ಇಲಾಖೆಗಳು ಅಗತ್ಯ ಕ್ರಮಕೈಗೊಳ್ಳುವಂತೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ. ಸರ್ಕಾರ ಅಥವಾ ಸ್ಥಳೀಯ ಪ್ರಾಧಿಕಾರಗಳಿಂದ ಅನುಮತಿ, ಮಂಜೂರಾತಿ ಪಡೆದ ಎಲ್ಲಾ ಸಂಸ್ಥೆಗಳಿಗೂ ಈ ಕಾಯ್ದೆ ಅನ್ವಯವಾಗಲಿದೆ. ಖಾಸಗಿ ಶಾಲಾ ಕಾಲೇಜುಗಳು, ಆಸ್ಪತ್ರೆಗಳು, ಪ್ರಯೋಗಾಲಯಗಳು, ಮನರಂಜನಾ ಕೇಂದ್ರಗಳು, ಹೋಟೆಲ್ ಸೇರಿದಂತೆ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ನಾಮಫಲಕಗಳ ಮೇಲ್ಬಾಗದಲ್ಲಿ ಕನ್ನಡಭಾಷೆಯನ್ನು ಶೇ.60 ರಷ್ಟು ಪ್ರದರ್ಶಿಸಬೇಕು ಅಥವಾ ಬರೆಸಿರಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net