ಸರ್ಕಾರಿ ಶಾಲೆಯಲ್ಲಿ ಕಡಿಮೆಯಾಗುತ್ತಿದೆ ಮಕ್ಕಳ ಸಂಖ್ಯೆ

ಪೊನ್ನಂಪೇಟೆಯ ಕೆಪಿಎಸ್ ಶಾಲೆಯಲ್ಲಿನ ಶೌಚಗೃಹಗಳನ್ನು ಬೋಪಣ್ಣ ಉದ್ಘಾಟಿಸಿದರು. ಕನಕ ಸಭಾಪತಿ, ವಿಜಯ್ ಇತರರಿದ್ದರು.
ಪೊನ್ನಂಪೇಟೆಯ ಕೆಪಿಎಸ್ ಶಾಲೆಯಲ್ಲಿನ ಶೌಚಗೃಹಗಳನ್ನು ಬೋಪಣ್ಣ ಉದ್ಘಾಟಿಸಿದರು. ಕನಕ ಸಭಾಪತಿ, ವಿಜಯ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತೀತಿರ ಬೋಪಣ್ಣ ಕಳವಳ
ಪೊನ್ನಂಪೇಟೆ: ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಥಮಿಕ ವಿಭಾಗದ ಹೆಣ್ಣು ಮಕ್ಕಳ ಉಪಯೋಗಕ್ಕಾಗಿ ನೆಸ್ಲೆ ಇಂಡಿಯಾ ಲಿ.ವತಿಯಿಂದ ನಿರ್ಮಿಸಲಾದ ಮೂರು ಪ್ರತ್ಯೇಕ ಶೌಚಗೃಹಗಳನ್ನು ಇತ್ತೀಚೆಗೆ ಸಂಸ್ಥೆಯ ನಂಜನಗೂಡು ವಿಭಾಗದ ವ್ಯವಸ್ಥಾಪಕ ತೀತಿರ ಬೋಪಣ್ಣ ಉದ್ಘಾಟಿಸಿದರು.
ಪ್ರತಿ ವರ್ಷ ಕಂಪನಿಯಿಂದ ಸರ್ಕಾರಿ ಶಾಲೆ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಶೌಚಗೃಹಗಳನ್ನು ನಿರ್ಮಿಸಿ ಕೊಡಲಾಗುತ್ತಿದೆ. ಅದರಂತೆ ಈ ವರ್ಷ ಇಲ್ಲಿನ ಶಾಲೆಗೆ ನಿರ್ಮಿಸಿ ಕೊಡಲಾಗಿದೆ. ಇಲ್ಲಿ 340 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಇದಕ್ಕೆ ಅನುಗುಣವಾಗಿ ಮೂರು ಪ್ರತ್ಯೇಕ ಶೌಚಗೃಹಗಳನ್ನು ನಿರ್ಮಿಸಿ ಕೊಡಲಾಗಿದೆ. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಯಲ್ಲಿ ಬೆರಳೆಣಿಕೆ ವಿದ್ಯಾರ್ಥಿಗಳು ಮಾತ್ರ ಕಾಣುತ್ತಿರುವುದು ವಿಷಾದನೀಯ ಎಂದು ಬೇಸರ ವ್ಯಕ್ತಪಡಿಸಿದರು.
ಇಲ್ಲಿನ ಸರ್ಕಾರಿ ಶಾಲೆಯಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವುದು ಸಂತೋಷದ ವಿಚಾರ. ಇದು ನಮಗೆ ಇನ್ನಷ್ಟು ಶಾಲೆಗಳಿಗೆ ಸೇವೆ ಮಾಡಲು ಪ್ರೇರಣೆಯಾಗಿದೆ ಎಂದರು.
ವಿನೂತನ ಶೌಚಗೃಹ ನಿರ್ವಹಣೆ ಬಗ್ಗೆ ನೆಸ್ಲೆ ಇಂಡಿಯಾದ ಸಹ ಆಡಳಿತಾಧಿಕಾರಿ ಕನಕ ಸಭಾಪತಿ ಶಾಲೆಯ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಎಸ್‌ಡಿಎಂಸಿ ವತಿಯಿಂದ ತಿತೀರ ಬೋಪಣ್ಣ ಹಾಗೂ ಸಹ ಆಡಳಿತಾಧಿಕಾರಿ ಕನಕ ಸಭಾಪತಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲೆ ಮುಖ್ಯ ಶಿಕ್ಷಕ ವಿಜಯ್, ಎಸ್‌ಡಿಎಂಸಿ ಅಧ್ಯಕ್ಷ ಜುನೈದ್, ಚೆಪ್ಪುಡೀರ ಉತ್ತಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net