ಹೆಚ್ಚು ಹೆಚ್ಚು ಸಾಹಿತ್ಯ ರಚನೆಯಾದಷ್ಟೂ ಭಾಷೆ ಗಟ್ಟಿಯಾಗುತ್ತದೆ

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಸುಂಟಿಕೊಪ್ಪ ನಾಡು ಕೊಡವ ಸಮಾಜದಲ್ಲಿ ಸ್ಥಾಪಿಸಲಾದ 7ನೇ ಕೊಡವ ಪುಸ್ತಕ ಪತ್ತಾಯವನ್ನು ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ ಉದ್ಘಾಟಿಸಿದರು. ಪುಡಿಯಂಡ ಮುತ್ತಣ್ಣ, ಕರ್ನಂಡ ಅರುಣ್ ಮೊಣ್ಣಪ್ಪ, ಚೇಂದ್ರಿಮಡ ಕರುಂಬಯ್ಯ ಮತ್ತಿತರರು ಇದ್ದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಸುಂಟಿಕೊಪ್ಪ ನಾಡು ಕೊಡವ ಸಮಾಜದಲ್ಲಿ ಸ್ಥಾಪಿಸಲಾದ 7ನೇ ಕೊಡವ ಪುಸ್ತಕ ಪತ್ತಾಯವನ್ನು ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ ಉದ್ಘಾಟಿಸಿದರು. ಪುಡಿಯಂಡ ಮುತ್ತಣ್ಣ, ಕರ್ನಂಡ ಅರುಣ್ ಮೊಣ್ಣಪ್ಪ, ಚೇಂದ್ರಿಮಡ ಕರುಂಬಯ್ಯ ಮತ್ತಿತರರು ಇದ್ದರು.
Published on
ಮಡಿಕೇರಿ:
ಯಾವುದೇ ಭಾಷೆಯಲ್ಲಾದರೂ ಹೆಚ್ಚು ಹೆಚ್ಚು ಸಾಹಿತ್ಯ ರಚನೆಯಾದಷ್ಟೂ ಭಾಷೆ ಗಟ್ಟಿಗೊಳ್ಳುವುದು ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ ಹೇಳಿದರು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಸುಂಟಿಕೊಪ್ಪ ನಾಡು ಕೊಡವ ಸಮಾಜದಲ್ಲಿ ಸ್ಥಾಪಿಸಲಾದ 7ನೇ ಕೊಡವ ಪುಸ್ತಕ ಪತ್ತಾಯ ಉದ್ಘಾಟಿಸಿ ಶನಿವಾರ ಮಾತನಾಡಿದರು.
ಕೊಡವ ಭಾಷೆ ಸಾಹಿತ್ಯಿಕವಾಗಿ ಮತ್ತಷ್ಟು ಬೆಳೆಯಬೇಕಾಗಿದೆ. ಕೊಡವ ಭಾಷೆಯಲ್ಲಿ ಓದುವ, ಬರೆಯುವ ಪ್ರವೃತ್ತಿಯನ್ನು ಚಿಕ್ಕಂದಿನಿAದಲೇ ಮಕ್ಕಳಿಗೆ ಕಲಿಸಬೇಕಾದ ಅನಿವಾರ್ಯತೆ ಭಾಷೆಯ ಭವಿಷ್ಯವನ್ನು ನಿರ್ಣಯಿಸುತ್ತದೆ. 1924ರ ಅವಧಿಯಲ್ಲಿ ನಡಿಕೇರಿಯಂಡ ಚಿಣ್ಣಪ್ಪ ಕೊಡವ ಜಾನಪದ ಗ್ರಂಥ ಪಟ್ಟೋಲೆ ಪಳಮೆಯನ್ನು ಹೊರತಂದಿರುವುದು ಕೊಡವ ಸಂಸ್ಕೃತಿ ಹಾಗೂ ಸಾಹಿತ್ಯಕ್ಕೆ ಭದ್ರ ಬುನಾದಿಯಂತಿದೆ. ಹರದಾಸ ಅಪ್ಪಚ್ಚಕವಿ, ಬಾಚಮಡ ಡಿ. ಗಣಪತಿ, ಐ.ಮಾ. ಮುತ್ತಣ್ಣ ಸಮಕಾಲೀನರಾಗಿ ಇದ್ದುಕೊಂಡು ಹೊರತಂದ ಹಲವು ಕೃತಿಗಳು ಕೊಡವ ಭಾಷೆಯ ಬೆಳವಣಿಗೆಯಲ್ಲಿ ಮಹತ್ವದ ಕೊಡುಗೆಯಂತಿದೆ. ಪುಸ್ತಕ ಪ್ರೀತಿಯನ್ನು ಬೆಳೆಸಿಕೊಳ್ಳುವುದರಿಂದ ಸಮಾಜದಲ್ಲಿ ಉತ್ತಮ ದಾರಿ ಮಾಡಿಕೊಟ್ಟಂತಾಗುವುದು. ಕೊಡವ ಅಕಾಡೆಮಿ ಈಗಾಗಲೇ ಹಲವು ವಿಧದ ಪುಸ್ತಕಗಳನ್ನು ಬಿಡುಗಡೆಗೊಳಿಸಿದೆ. ಇನ್ನೂ ಹೆಚ್ಚಿನ ಸಂಖ್ಯೆಯ ವಿಷಯಾಧಾರಿತ ಪುಸ್ತಕಗಳನ್ನು ಹೊರತರಬೇಕಿದೆ. ಕೊಡವ ಜನಾಂಗ ಅತ್ಯಂತ ಕಡಿಮೆ ಜನಸಂಖ್ಯೆ ಹೊಂದಿರುವ ಜನಾಂಗವಾಗಿದ್ದರೂ ಸ್ವಾಭಿಮಾನದಿಂದ ಬದುಕುತ್ತಿರುವುದು ಹೆಗ್ಗಳಿಕೆಯ ವಿಷಯವಾಗಿದೆ ಎಂದು ಹೇಳಿದರು.
ಹಿರಿಯ ಸಮಾಜ ಸೇವಕ ಪುಡಿಯಂಡ ಮುತ್ತಣ್ಣ ಮಾತನಾಡಿ ಸುಂಟಿಕೊಪ್ಪ ಕೊಡವ ಸಮಾಜಕ್ಕೆ ದಾನವಾಗಿ ಸಿಕ್ಕ ಜಾಗದ ಬಗ್ಗೆ ಹಾಗೂ ಸಮಾಜ ನಡೆದು ಬಂದ ಹಾದಿಯ ಬಗ್ಗೆ ತಿಳಿಸಿದರು. ಕುಶಾಲನಗರ ಶ್ರೀ ಇಗ್ಗುತಪ್ಪ ಕೊಡವ ಕಲ್ಚರಲ್ ಅಸೋಸಿಯೇಷನ್ ಉಪಾಧ್ಯಕ್ಷ ಕರ್ನಂಡ ಅರುಣ್ ಮೊಣ್ಣಪ್ಪ ಕೊಡವ ಪುದಿಯ ಕಾಲ ಎಡಮ್ಯಾರ್ ಒಂದ್ ಎಂಬ ವಿಷಯದ ಬಗ್ಗೆ ವಿಚಾರ ಮಂಡಿಸಿದರು.
ಈ ವೇಳೆ ಅಕಾಡೆಮಿಯ ವತಿಯಿಂದ ಸುಂಟಿಕೊಪ್ಪ ಕೊಡವ ಸಮಾಜಕ್ಕೆ ಕೊಡವ ಪುಸ್ತಕ ಪತ್ತಾಯದ ನೋಂದಣಿ ಪತ್ರ ಹಾಗೂ ನಾಲ್ಕು ದುಡಿಗಳನ್ನು ಹಸ್ತಾಂತರಿಸಲಾಯಿತು.
ಸುAಟಿಕೊಪ್ಪ ಕೊಡವ ಸಮಾಜದ ಅಧ್ಯಕ್ಷ ಚೇಂದ್ರಿಮಡ ಕರುಂಬಯ್ಯ, ಸುಂಟಿಕೊಪ್ಪ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಬೊಳಂದAಡ ಸರೋಜಿನಿ ದೇವಯ್ಯ, ಸಮಾಜ ಕಾರ್ಯದರ್ಶಿ ಅಜ್ಜಿಕುಟ್ಟಿರ ಸಿ. ಗಿರೀಶ್, ಅಕಾಡೆಮಿಯ ಸದಸ್ಯೆ ಕಂಬೆಯAಡ ಡೀನಾ ಬೋಜಣ್ಣ, ನಾಪಂಡ ಡಾಟಿ, ಅಜ್ಜಿಕುಟ್ಟಿರ ಸುನೀತ ಗಿರೀಶ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net