ಕನ್ನಡ ರಾಜ್ಯೋತ್ಸವದ ಅಂಗವಾಗಿ ಬಸವನಹಳ್ಳಿ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯಕ್ಕೆ ಶರಣರ ಕೊಡುಗೆಗಳು ವಿಚಾರ ಸಂಕಿರಣವನ್ನು ಕುಶಾಲನಗರದ ಸರ್ಕಾರಿ ಎಂಜಿನಿಯರಿAಗ್ ಕಾಲೇಜು ಪ್ರಾಂಶುಪಾಲ ಡಾ. ಪರಶಿವಮೂರ್ತಿ ಉದ್ಘಾಟಿಸಿದರು. ಎಸ್.ಜಿ. ಸಿದ್ದರಾಮಯ್ಯ, ಕೆ.ಎಸ್. ಮೂರ್ತಿ, ಬಿ. ನಟರಾಜು, ಶ್ರೀಲಕ್ಷಿ ಮತ್ತಿತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಕನ್ನಡ ಸಾಹಿತ್ಯಕ್ಕೆ ಶರಣರ ಕೊಡುಗೆಗಳು ವಿಚಾರ ಸಂಕಿರಣ
ಬಸವನಹಳ್ಳಿ ಮುರಾರ್ಜಿ ಶಾಲೆಯಲ್ಲಿ ಕಾರ್ಯಕ್ರಮ
ವಚನಗಳ ಅಧ್ಯಯನಕ್ಕೆ ಕರೆ
ಕುಶಾಲನಗರ:
ಹನ್ನೆರಡನೇ ಶತಮಾನದ ವಚನಕಾರರು ರಚಿಸಿದ ವಚನಗಳಲ್ಲಿ ಮನುಷ್ಯನ ಬದುಕನ್ನು ಸುಂದರಗೊಳಿಸುವ ಜೀವನ ಮೌಲ್ಯಗಳು ಅಡಕವಾಗಿದ್ದು ಅವುಗಳನ್ನು ಅಧ್ಯಯನ ಮಾಡುವ ಮೂಲಕ ವ್ಯಕ್ತಿತ್ವವನ್ನು ಹೊಳಪು ಮಾಡಿಕೊಳ್ಳಿ ಎಂದು ತುಮಕೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಗಮಕ ಕಲಾ ವಿದ್ವಾನ್ ಎಸ್.ಜಿ. ಸಿದ್ದರಾಮಯ್ಯ ಹೇಳಿದರು. ಕನ್ನಡ ರಾಜ್ಯೋತ್ಸವದ ಅಂಗವಾಗಿ ಬಸವನಹಳ್ಳಿ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಶುಕ್ರವಾರ ಸಂಜೆ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯಕ್ಕೆ ಶರಣರ ಕೊಡುಗೆಗಳು ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಪಠ್ಯಗಳ ಜೊತೆಯಲ್ಲಿ ನೈತಿಕ ಪ್ರಜ್ಞೆ ಹಾಗೂ ಸಾಮಾಜಿಕ ಜಾಗೃತಿ ಮೂಡಿಸುವ ಶರಣರ ವಚನಗಳನ್ನು ಅರಿತರೆ ಬದುಕು ಸಾರ್ಥಕವಾಗುತ್ತದೆ. ಕನ್ನಡ ಸಾಹಿತ್ಯವನ್ನು ವಿಶ್ವ ಮಟ್ಟದಲ್ಲಿ ಶ್ರೀಮಂತ ಗೊಳಿಸಿದ ವಚನಸಾಹಿತ್ಯ ಈ ನೆಲ ಮೂಲ ಸಂಸ್ಕ್ರತಿಯ ತಾಯಿ ಬೇರು. ಯಾರಿಗೂ ನೋವಾಗದಂತೆ ಎಲ್ಲರ ಮನವನ್ನು ಅರಳಿಸುವಂಥ ಮಾತು ಜ್ಯೋತಿರ್ಲಿಂಗದAತಿರಬೇಕು. ಅದು ಮುತ್ತಿನ ಹಾರದಂತಿರಬೇಕು.
ಎAದು ವಚನಗಳ ಮೂಲಕ ಶರಣರ ವಿಚಾರಧಾರೆಗಳನ್ನು ಪ್ರಸ್ತುತ ಪಡಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಕುಶಾಲನಗರದ ಸರ್ಕಾರಿ ಎಂಜಿನಿಯರಿAಗ್ ಕಾಲೇಜಿನ ಪ್ರಾಂಶುಪಾಲ ಡಾ. ಪರಶಿವಮೂರ್ತಿ ಮಾತನಾಡಿ, ಸಮಾಜದ ಅಂಕು ಡೊಂಕು ತಿದ್ದುವ ಮೂಲಕ ಸಮ ಸಮಾಜದ ಕನಸನ್ನು ನನಸು ಮಾಡಿದ ವಚನ ಸಾಹಿತ್ಯ ವಿದ್ಯಾರ್ಥಿಗಳ ಪಾಲಿಗೆ ಭಗವದ್ಗೀತೆ ಯಾಗಬೇಕು. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ವಚನಗಳ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಅಧ್ಯಯನಶೀಲರಾಗಬೇಕು ಎಂದರು.
ತುಮಕೂರಿನ ವಿದ್ಯಾವಾಹಿನಿ ವಿದ್ಯಾಸಂಸ್ಥೆಯ ನಿವೃತ್ತ ಪ್ರಾಂಶುಪಾಲ ಕುಮಾರಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳಿಗೆ ಸಮಾಜ ಸುಧಾರಕರು ಹಾಗೂ ವಚನಕಾರರ ಬದುಕು ಆದರ್ಶವಾಗಬೇಕು. ವಿದ್ಯಾರ್ಥಿಗಳು ಉಜ್ವಲ ಜೀವನದ ಕನಸು ಬಿತ್ತಬೇಕು. ಯೋಜನೆಗಳು ಮತ್ತು ನವ ನವೀನ ಯೋಚನೆಗಳ ಮೂಲಕ ನಿರಂತರವಾದ ಶ್ರಮದೊಂದಿಗೆ ಶಿಸ್ತು ಸಂಯಮ ಹಾಗೂ ಸಮಯ ಪಾಲನೆ ರೂಢಿಸಿಕೊಂಡರೆ ಬದುಕು ಸುಂದರವಾಗಿ ರೂಪುಗೊಳ್ಳುತ್ತದೆ ಎಂದು ಹೇಳಿದರು.
ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್. ಮೂರ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ. ನಟರಾಜು, ಶಾಲಾ ಪ್ರಾಂಶುಪಾಲೆ ಶ್ರೀಲಕ್ಷಿö್ಮÃ, ಶಿಕ್ಷಕರಾದ ಶಬರಿಗಿರೀಶ್, ಜಗದೀಶ್ ಹಾಗೂ ಶಾಲಾ ಸಮಿತಿ ಸದಸ್ಯ ಪ್ರಮೋದ್ ಇದ್ದರು.
ಇದೇ ವೇಳೆ ತುಮಕೂರಿನ ಸರಿಗಮಪ ಹಾಸ್ಯ ಕಲಾವಿದ ಮಿಮಿಕ್ರಿ ಈಶ್ವರಯ್ಯ ಅವರಿಂದ ಬೆಕ್ಕು, ಎಮ್ಮೆ, ಹಸು, ಶ್ವಾನಗಳು ಮುಂತಾದ ಪ್ರಾಣಿಗಳ ಕುರಿತಾದ ಮಿಮಿಕ್ರಿ ವಿದ್ಯಾರ್ಥಿಗಳ ಮನಸೂರೆಗೊಂಡಿತು. ತುಮಕೂರಿನ ಜಾನಪದ ಹಾಡುಗಾರ್ತಿ ಪ್ರೇಮ ಕುಮಾರಸ್ವಾಮಿ ಜಾನಪದ ಹಾಡುಗಳ ಮೂಲಕ ಮಕ್ಕಳನ್ನು ಆಕರ್ಷಿಸಿದರು. ಶಾಲೆಯ ಸಂಗೀತಾ ಶಿಕ್ಷಕ ಪುಟ್ಟರಾಜು ಅವರಿಂದ ವಚನಗಾಯನ ನಡೆಯಿತು.