ಬೆಳಗುತ್ತಿದೆ ಶರಣರು ಹಚ್ಚಿರುವ ಮಾನವತೆಯ ದೀಪ

 ಕೊಡಗು ಜಿಲ್ಲಾ ವೀರಶೈವ ಮಹಾಸಭಾ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ತೊರೆನೂರು ವಿರಕ್ತ ಮಠದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಮಾಸಿಕ ಹುಣ್ಣಿಮೆಯ ಚಿಂತನಾಗೋಷ್ಠಿಯನ್ನು ಕೊಡಗು ಜಿಲ್ಲಾ ವೀರಶೈವ ಮಹಾಸಭಾ ಅಧ್ಯಕ್ಷ ಎಚ್.ವಿ.ಶಿವಪ್ಪ ಉದ್ಘಾಟಿಸಿದರು. ಶ್ರೀ ಮಲ್ಲೇಶ ಸ್ವಾಮೀಜಿ, ಕೆ.ಎಸ್. ಮೂರ್ತಿ, ಶಾಂಬಶಿವಯ್ಯ, ವೆಂಕಟನಾಯ್, ನಟರಾಜು ಮತ್ತಿತರರು ಇದ್ದರು.

Published on
ಕುಶಾಲನಗರ : ಬಾಹ್ಯ ದೇವಾಲಯಗಳನ್ನು ಧಿಕ್ಕರಿಸಿ ಅಂತರಂಗದ ಅರಿವಿಗೆ ಹೆಚ್ಚು ಒತ್ತು ನೀಡಿದ ಶರಣರು ವಚನಗಳ ಮೂಲಕ ಹಚ್ಚಿರುವ ಮಾನವತೆಯ ದೀಪ ಹಚ್ಚಿದರು ಎಂದು ಹೆಬ್ಬಾಲೆ ಪ್ರೌಢಶಾಲೆಯ ಕನ್ನಡ ಉಪನ್ಯಾಸಕ ಮೆ.ನಾ.ವೆಂಕಟನಾಯಕ್ ಹೇಳಿದರು.
ಕೊಡಗು ಜಿಲ್ಲಾ ವೀರಶೈವ ಮಹಾಸಭಾ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ತೊರೆನೂರು ವಿರಕ್ತ ಮಠದ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಶ್ರೀ ಮಠದ ಮಹಾಂತ ಸ್ವಾಮೀಜಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಮಾಸಿಕ ಹುಣ್ಣಿಮೆಯ ಚಿಂತನಾಗೋಷ್ಠಿಯಲ್ಲಿ ವಚನಕಾರರ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಅರಿವೇ ನುಡಿ ಜ್ಯೋತಿರ್ಲಿಂಗ. ನಾವಾಡುವ ಮಾತುಗಳು ಮುತ್ತಿನ ಹಾರದಂತಿರಬೇಕು. ಇವನಾರವ ಎನ್ನದೇ ನಮ್ಮವ ಎಂದು ಅಪ್ಪುವ ಮೂಲಕ ವಿಶ್ವಮಾನವರಾಗಬೇಕು. ಇತರರಿಗೆ ಯಾವುದೇ ಕೆಡುಕು ಬಯಸದೆ ಸರ್ವ ಹಿತ ಬಯಸುವ ಶರಣರ ಚಿಂತನೆಗಳು ಸರ್ವಕಾಲಕ್ಕೂ ಪ್ರಸ್ತುತವಾಗಿದೆ ಎಂದರು.
ತೊರೆನೂರು ವಿರಕ್ತ ಮಠದ ಶ್ರೀ ಮಲ್ಲೇಶ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಕೊಡಗು ಜಿಲ್ಲಾ ವೀರಶೈವ ಮಹಾಸಭಾ ಅಧ್ಯಕ್ಷ ಎಚ್.ವಿ.ಶಿವಪ್ಪ ಅಧ್ಯಕ್ಷತೆ ವಹಿಸಿದ್ದರು.
ಪ್ರಧಾನ ಕಾರ್ಯದರ್ಶಿ ಶಾಂಬಶಿವಯ್ಯ, ವೀರಶೈವ ಸರ್ಕಾರಿ ನೌಕರರ ಸಂಘದ ಹಿತರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷ ಎಸ್. ನಂದೀಶ್, ಕಾರ್ಯದರ್ಶಿ ಶಿವಲಿಂಗು, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಂ.ಎಸ್.ಗಣೇಶ, ತೊರೆನೂರು ವೀರಶೈವ ಸಮಾಜದ ಅಧ್ಯಕ್ಷ ಟಿ.ಬಿ.ಜಗದೀಶ್, ಮರೂರು ಪ್ರಗತಿ ಪರ ಕೃಷಿಕ ಎಚ್.ಎಸ್. ನಾಗರಾಜು, ಕೊಡಗು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ, ಕಾರ್ಯದರ್ಶಿ ಬಿ. ನಟರಾಜು, ಕೃಷಿಕರಾದ ಮಣಜೂರು ಗುರುಲಿಂಗಪ್ಪ, ತೊರೆನೂರು ಸಹಕಾರ ಸಂಘದ ನಿವೃತ್ತ ಸಿಇಒ ಚಂದ್ರಶೇಖರ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net