ಸಾಹಿತ್ಯಿಕವಾಗಿ ಮತ್ತಷ್ಟು ಬೆಳೆಯಬೇಕಿದೆ ಕೊಡವ ಭಾಷೆ

ಸುಂಟಿಕೊಪ್ಪದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ವತಿಯಿಂದ ಆಯೋಜಿಸಿದ್ದ ಸಮಾರಂಭದಲ್ಲಿ ಗಣ್ಯರು ಪುಸ್ತಕಗಳನ್ನು ಬಿಡುಗಡೆಗೊಳಿಸಿದರು. ಚೇಂದ್ರಿಮಡ ಕರುಂಬಯ್ಯ, ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ, ಅರುಣ್ ಮೊಣ್ಣಪ್ಪ, ಬೊಳಂದಂಡ ಸರೋಜಿನಿ ದೇವಯ್ಯ, ಅಜ್ಜಿಕುಟ್ಟಿರ ಸಿ.ಗಿರೀಶ್, ಕಂಬೆಯಂಡ ಡೀನಾ ಬೋಜಣ್ಣ ಇತರರಿದ್ದರು.
ಸುಂಟಿಕೊಪ್ಪದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ವತಿಯಿಂದ ಆಯೋಜಿಸಿದ್ದ ಸಮಾರಂಭದಲ್ಲಿ ಗಣ್ಯರು ಪುಸ್ತಕಗಳನ್ನು ಬಿಡುಗಡೆಗೊಳಿಸಿದರು. ಚೇಂದ್ರಿಮಡ ಕರುಂಬಯ್ಯ, ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ, ಅರುಣ್ ಮೊಣ್ಣಪ್ಪ, ಬೊಳಂದಂಡ ಸರೋಜಿನಿ ದೇವಯ್ಯ, ಅಜ್ಜಿಕುಟ್ಟಿರ ಸಿ.ಗಿರೀಶ್, ಕಂಬೆಯಂಡ ಡೀನಾ ಬೋಜಣ್ಣ ಇತರರಿದ್ದರು.
Published on
ಸುಂಟಿಕೊಪ್ಪ: ಯಾವುದೇ ಭಾಷೆಯಾದರೂ ಸರಿ, ಸಾಹಿತ್ಯ ರಚನೆಯಾದಷ್ಟು ಭಾಷೆಯು ಗಟ್ಟಿಗೊಳ್ಳುವುದು. ಕೊಡವ ಭಾಷೆಯು ಸಾಹಿತ್ಯಿಕವಾಗಿ ಮತ್ತಷ್ಟು ಬೆಳೆಯಬೇಕಾಗಿದೆ ಎಂದು ಸುಂಟಿಕೊಪ್ಪ ಕೊಡವ ಸಮಾಜದ ಅಧ್ಯಕ್ಷ ಚೇಂದ್ರಿಮಡ ಕರುಂಬಯ್ಯ ತಿಳಿಸಿದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ವತಿಯಿಂದ 7ನೇ ಕೊಡವ ಪುಸ್ತಕ ಪತ್ತಾಯ ಉದ್ಘಾಟನಾ ಸಮಾರಂಭದಲ್ಲಿ ಕೊಡವರ ಹೊಸ ವರ್ಷ ಎಡಮ್ಯಾರ್ ಒಂದಕ್ಕೆ ಶುಭ ಕೋರಿ ಮಾತನಾಡಿ, ಕೊಡವ ಭಾಷೆಯಲ್ಲಿ ಓದುವ, ಬರೆಯುವ ಪ್ರವೃತ್ತಿಯನ್ನು ಚಿಕ್ಕಂದಿನಿಂದಲೇ ಮಕ್ಕಳಿಗೆ ಕಲಿಸಬೇಕಾದ ಅನಿವಾರ್ಯತೆ ಭಾಷೆಯ ಭವಿಷ್ಯವನ್ನು ನಿರ್ಣಯಿಸುತ್ತದೆ. 1924ರ ಅವಧಿಯಲ್ಲಿ ನಡಿಕೇರಿಯಂಡ ಚಿಣ್ಣಪ್ಪನವರು ಕೊಡವ ಜಾನಪದ ಗ್ರಂಥ ಪಟ್ಟೋಲೆ ಪಳಮೆಯನ್ನು ಹೊರತಂದಿರುವುದು ಕೊಡವ ಸಂಸ್ಕೃತಿ ಹಾಗೂ ಸಾಹಿತ್ಯಕ್ಕೆ ಭದ್ರ ಬುನಾದಿಯಂತಿದೆ ಎಂದರು.
ಕೊಡವ ಅಕಾಡೆಮಿಯು ಈಗಾಗಲೇ ಹಲವು ವಿಧದ ಪುಸ್ತಕಗಳನ್ನು ಬಿಡುಗಡೆಗೊಳಿಸಿದೆ. ಇನ್ನೂ ಹೆಚ್ಚಿನ ಸಂಖ್ಯೆಯ ವಿಷಯಾಧಾರಿತ ಪುಸ್ತಕಗಳನ್ನು ಹೊರತರಬೇಕಿದೆ. ಕೊಡವ ಜನಾಂಗವು ಅತ್ಯಂತ ಕಡಿಮೆ ಜನಸಂಖ್ಯೆ ಹೊಂದಿರುವ ಜನಾಂಗವಾಗಿದ್ದರೂ ಸ್ವಾಭಿಮಾನದಿಂದ ಬದುಕುತ್ತಿರುವುದು ಹೆಗ್ಗಳಿಕೆಯ ವಿಷಯವಾಗಿದೆ ಎಂದು ನುಡಿದರು.
ಸುಂಟಿಕೊಪ್ಪನಾಡು ಕೊಡವ ಸಮಾಜದಲ್ಲಿ ಸ್ಥಾಪಿಸಲಾಗಿರುವ ಪುಸ್ತಕ ಪತ್ತಾಯವನ್ನು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ ಉದ್ಘಾಟಿಸಿದರು.
ಹಿರಿಯ ಸಮಾಜ ಸೇವಕ ಪುಡಿಯಂಡ ಮುತ್ತಣ್ಣ ಸುಂಟಿಕೊಪ್ಪ ಕೊಡವ ಸಮಾಜಕ್ಕೆ ದಾನವಾಗಿ ಸಿಕ್ಕ ಜಾಗದ ಬಗ್ಗೆ ಹಾಗೂ ಸಮಾಜ ನಡೆದು ಬಂದ ಹಾದಿಯ ಬಗ್ಗೆ ತಿಳಿಸಿದರು.
ಕುಶಾಲನಗರ ಶ್ರೀ ಇಗ್ಗುತಪ್ಪ ಕೊಡವ ಕಲ್ಚರಲ್ ಅಸೋಸಿಯೇಷನ್ ಉಪಾಧ್ಯಕ್ಷ ಕರ್ನಂಡ ಅರುಣ್ ಮೊಣ್ಣಪ್ಪ ಕೊಡವ ಪುದಿಯ ಕಾಲ ಎಡಮ್ಯಾರ್ ಒಂದ್ ಎಂಬ ವಿಷಯದ ಬಗ್ಗೆ ವಿಚಾರ ಮಂಡಿಸಿದರು.
ಈ ವೇಳೆ ಅಕಾಡೆಮಿಯ ವತಿಯಿಂದ ಸುಂಟಿಕೊಪ್ಪ ಕೊಡವ ಸಮಾಜಕ್ಕೆ ಕೊಡವ ಪುಸ್ತಕ ಪತ್ತಾಯದ ನೋಂದಣಿ ಪತ್ರ ಹಾಗೂ ನಾಲ್ಕು ದುಡಿಗಳನ್ನು ಹಸ್ತಾಂತರಿಸಿದರು.
ಕುಶಾಲನಗರ ಶ್ರೀ ಇಗ್ಗುತಪ್ಪ ಕೊಡವ ಕಲ್ಚರಲ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಅರುಣ್ ಮೊಣ್ಣಪ್ಪ, ಸುಂಟಿಕೊಪ್ಪ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಬೊಳಂದಂಡ ಸರೋಜಿನಿ ದೇವಯ್ಯ, ಸಮಾಜ ಕಾರ್ಯದರ್ಶಿ ಅಜ್ಜಿಕುಟ್ಟಿರ ಸಿ.ಗಿರೀಶ್ ಹಾಗೂ ಅಕಾಡೆಮಿಯ ಸದಸ್ಯೆ ಕಂಬೆಯಂಡ ಡೀನಾ ಬೋಜಣ್ಣ ಉಪಸ್ಥಿತರಿದ್ದರು.
ನಾಪಂಡ ಡಾಟಿ ಈರಪ್ಪ ಪ್ರಾರ್ಥಿಸಿ, ಸಮಾಜದ ಕಾರ್ಯದರ್ಶಿ ಅಜ್ಜಿಕುಟ್ಟಿರ ಸಿ.ಗಿರೀಶ್ ಸ್ವಾಗತಿಸಿ, ಅಜ್ಜಿಕುಟ್ಟಿರ ಸುನೀತ ಗಿರೀಶ್ ನಿರೂಪಿಸಿದರು. ಅಕಾಡೆಮಿಯ ಸದಸ್ಯೆ ಕಂಬೆಯಂಡ ಡೀನಾ ಬೋಜಣ್ಣ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net