ಕೊಡಗಿಗೆ ಮತ್ತೆ ಕಸ್ತೂರಿ ರಂಗನ್ ವರದಿ ಗುಮ್ಮ

ಕೊಡಗಿನಲ್ಲಿ ಪಶ್ಚಿಮ ಘಟ್ಟ ವ್ಯಾಪ್ತಿಗೆ ಬರುವ 53 ಗ್ರಾಮಗಳು ಸೂಕ್ಷö್ಮ ಪರಿಸರ ವಲಯಕ್ಕೆ ಸೇರುವ ಆತಂಕ ಎದುರಿಸುತ್ತಿವೆ.
ಕೊಡಗಿನಲ್ಲಿ ಪಶ್ಚಿಮ ಘಟ್ಟ ವ್ಯಾಪ್ತಿಗೆ ಬರುವ 53 ಗ್ರಾಮಗಳು ಸೂಕ್ಷö್ಮ ಪರಿಸರ ವಲಯಕ್ಕೆ ಸೇರುವ ಆತಂಕ ಎದುರಿಸುತ್ತಿವೆ.
Published on
ಮಡಿಕೇರಿ
ಕೊಡಗಿನಲ್ಲಿ ಮತ್ತೊಮ್ಮೆ ಕಸ್ತೂರಿ ರಂಗನ್ ವರದಿಯ ಗುಮ್ಮ ಸದ್ದು ಮಾಡುತ್ತಿದೆ. ಕಸ್ತೂರಿ ರಂಗನ್ ವರದಿ ಜಾರಿ ಸಂಬAಧ ಜು.7ರಂದು ಕೇಂದ್ರ ಸರ್ಕಾರ 7ನೇ ಕರಡು ಅಧಿಸೂಚನೆಯನ್ನು ಅಧಿಕೃತವಾಗಿ ಹೊರಡಿಸಿದ್ದು, ಕೊಡಗು ಸೇರಿದಂತೆ ಮಲೆನಾಡಿನ ಗ್ರಾಮಗಳಲ್ಲಿ ಆತಂಕ ಮನೆ ಮಾಡಿದೆ. ಪ್ರಸ್ತುತ ದಿನಗಳಲ್ಲಿನ ಹವಾಮಾನ ವೈಪರಿತ್ಯಗಳ ಹಿನ್ನೆಲೆಯಲ್ಲಿ ಪಶ್ಚಿಮ ಘಟ್ಟದ ಸೂಕ್ಷö್ಮ ಪರಿಸರ ವಲಯದ ರಕ್ಷಣೆ ಅತ್ಯಗತ್ಯವಾಗಿದೆ. ಹಾಗಾಗಿ
ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಸಂಬAಧಿಸಿದAತೆ ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಡಾ. ಕೆ. ಕಸ್ತೂರಿ ರಂಗನ್ ಸಮಿತಿಯ ಶಿಫಾರಸುಗಳ ಅನುಷ್ಠಾನಕ್ಕೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಚಟುವಟಿಕೆ ಪುನಾರಂಭಿಸಿದೆ.
ಕೇಂದ್ರ ಸರ್ಕಾರ ಪ್ರಕಟಿಸಿರುವ ಹೊಸ ಕರಡು ಅಧಿಸೂಚನೆಯಲ್ಲಿ ರಾಜ್ಯದ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಪಶ್ಚಿಮ ಘಟ್ಟ ವ್ಯಾಪ್ತಿಯ ಹಲವು ಗ್ರಾಮಗಳನ್ನು ಪರಿಸರ ಸೂಕ್ಷ್ಮ ವಲಯಕ್ಕೆ ಸೇರಿಸುವ ಪ್ರಸ್ತಾಪ ಮಾಡಲಾಗಿದೆ. ಇದರಲ್ಲಿ ಕೊಡಗು ಜಿಲ್ಲೆಯ 53 ಗ್ರಾಮಗಳೂ ಸೇರಿವೆ.
ಕೇಂದ್ರ ಸರ್ಕಾರ 2024ರ ಜುಲೈ 31ಕ್ಕೆ 6ನೇ ಕರಡು ಅಧಿಸೂಚನೆ ಪ್ರಕಟಿಸಿತ್ತು. ಆದರೆ ರಾಜ್ಯಗಳ ವಿರೋಧ ಮತ್ತು ಕಾನೂನಾತ್ಮಕ ಪ್ರಕ್ರಿಯೆಗಳಿಂದಾಗಿ ಯಾವುದೇ ಅಂತಿಮ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ. ಈ 6ನೇ ಕರಡಿನ ನಿಯಮಬದ್ಧ ಕಾಲಾವಕಾಶ ಈ ವರ್ಷದ ಜು. 27ಕ್ಕೆ ಮುಕ್ತಾಯಗೊಂಡ ಬೆನ್ನಲ್ಲೇ, ಕೇಂದ್ರ ಸರ್ಕಾರ ಅದೇ ದಿನ ನಿಯಮಾನುಸಾರ 7ನೇ ಕರಡು ಅಧಿಸೂಚನೆಯನ್ನು ಮರು ಪ್ರಕಟಿಸಿದೆ.
ಹೊಸದಾಗಿ ಹೊರಡಿಸಲಾಗಿರುವ ಈ 7ನೇ ಕರಡು ಅಧಿಸೂಚನೆಗೆ ಸಂಬAಧಿಸಿದAತೆ ಸಾರ್ವಜನಿಕರು, ಪರಿಸರ ಆಸಕ್ತರು ಹಾಗೂ ಬಾಧಿತ ರಾಜ್ಯ ಸರ್ಕಾರಗಳು ತಮ್ಮ ಲಿಖಿತ ಸಲಹೆಗಳು ಅಥವಾ ಆಕ್ಷೇಪಣೆಗಳನ್ನು ಸಲ್ಲಿಸಲು 60 ದಿನಗಳ ಕಾಲಾವಕಾಶ ನೀಡಲಾಗಿದೆ. ಈ ಅವಧಿಯ ನಂತರ ಕೇಂದ್ರ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ದಟ್ಟವಾಗಿದೆ.
ಕಸ್ತೂರಿ ರಂಗನ್ ವರದಿ ಜಾರಿಯಾದರೆ ಅಧಿಸೂಚನೆಯಲ್ಲಿ ಹೆಸರಿಸಲಾಗಿರುವ ಗ್ರಾಮಗಳು ಪರಿಸರ ಸೂಕ್ಷ್ಮ ವಲಯಕ್ಕೆ ಸೇರ್ಪಡೆ ಆಗಲಿದೆ. ಇದರಿಂದ ಇಲ್ಲಿನ ರೈತರ ದೈನಂದಿನ ಚಟುವಟಿಕೆಗಳಿಗೆ ತಡೆಯಾಗಬಹುದು ಎಂಬುದು ಸ್ಥಳೀಯರ ಆತಂಕ. ಅಂತಿಮ ಅಧಿಸೂಚನೆ ಪ್ರಕಟಿಸುವುದಕ್ಕೂ ಮೊದಲು ಗ್ರಾಮಗಳ ಗಡಿ, ಹೆಸರು ಹಾಗೂ ವ್ಯಾಪ್ತಿಗೆ ಸಂಬAಧಿಸಿದAತೆ ಸಾರ್ವಜನಿಕರಿಂದ ಬರುವ ಆಕ್ಷೇಪಣೆ ಮತ್ತು ಸಲಹೆಗಳನ್ನು ಪರಿಗಣಿಸಿ ಅಗತ್ಯ ತಿದ್ದುಪಡಿಗಳನ್ನು ಮಾಡುವ ಸಾಧ್ಯತೆ ಇರುವುದರಿಂದ, ಮಲೆನಾಡಿನ ಪರಿಸರ ಸೂಕ್ಷ್ಮ ಗ್ರಾಮಗಳ ಪಟ್ಟಿಯು ಇದೀಗ ಮತ್ತೊಮ್ಮೆ ಸಾರ್ವಜನಿಕ ಚರ್ಚೆಯ ಕೇಂದ್ರ ಬಿಂದುವಾಗಿದೆ.
"

ಕಸ್ತೂರಿರಂಗನ್ ವರದಿ ಅಥವಾ ಯಾವುದೇ ಯೋಜನೆಯಿಂದ ಕೊಡಗಿನ ರೈತರಿಗೆ, ಕಾಫಿ ಬೆಳೆಗಾರರಿಗೆ ಹಾಗೂ ಭೂಮಿಯ ಮಾಲೀಕರಿಗೆ ಯಾವುದೇ ರೀತಿಯ ತೊಂದರೆಯಾಗಬಾರದು. ಈ ಸಂಬAಧ ಅರಣ್ಯ ಪ್ರದೇಶ, ಪೈಸಾರಿ ಭೂಮಿ ಹಾಗೂ ರೈತರ ಕೃಷಿ ಭೂಮಿ ಯಾವುದು ಎಂಬುದರ ಕುರಿತು ಸಮಗ್ರ ಮತ್ತು ವೈಜ್ಞಾನಿಕ ಸರ್ವೆ ನಡೆಸಬೇಕು. ರೈತರ ಕೃಷಿ ಭೂಮಿಯನ್ನು ಈ ಯೋಜನೆಯ ವ್ಯಾಪ್ತಿಯಿಂದ ಸಂಪೂರ್ಣವಾಗಿ ಹೊರಗಿಡಬೇಕು.ಈ ವಿಷಯವನ್ನು ನಮ್ಮ ಶಾಸಕರು ಹಾಗೂ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಗಮನಕ್ಕೆ ಗಂಭೀರವಾಗಿ ತಂದು, ರೈತರ ಹಿತಾಸಕ್ತಿಗೆ ಯಾವುದೇ ಧಕ್ಕೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳುವ ಸಂಪೂರ್ಣ ಜವಾಬ್ದಾರಿ ವಹಿಸಬೇಕು.

— ರವಿ ಕುಶಾಲಪ್ಪ, ಮಾಜಿ ಅಧ್ಯಕ್ಷ, ಕರ್ನಾಟಕ ಪಶ್ಚಿಮ ಘಟ್ಟಗಳ ಕಾರ್ಯಪಡೆ

"

ಕಸ್ತೂರಿ ರಂಗನ್ ವರದಿಯ ಅನುಷ್ಠಾನ ಅರಣ್ಯ ಸರಹದ್ದು ವಿಸ್ತರಿಸುವ ನಿರ್ಣಯ ಆಗಿದೆ. ನಂತರ ಪೂರ್ತಿ ಪಶ್ಚಿಮ ಘಟ್ಟ ಕೇರಳದಿಂದ ಗುಜರಾತಿನವರೆಗೂ 1600 ಮೈಲಿ ವಿಶ್ವ ಸಂಸ್ಥೆಯ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸೇರಿಸುವ ತಯಾರಿ ಇರಬಹುದು. ಈ ಮೊದಲೇ ಎಲ್ಲ ಬಾಧಿತ ರಾಜ್ಯಗಳ ಸರ್ವ ಪಕ್ಷಗಳು ಏಕ ಪಕ್ಷಿಯವಾಗಿ ಕಸ್ತೂರಿ ರಂಗನ್ ವರದಿಯ ಅನುಷ್ಠಾನ ವಿರೋಧಿಸಿದ್ದವು. ಬಫರ್ ಝೋನ್ ಕೈ ಬಿಟ್ಟು ಬರಿ ರಿಸರ್ವ್ ಫಾರೆಸ್ಟ್ ಮಾತ್ರ ಸೇರಿಸುವಂತೆ ಕೇಳಿತ್ತು. ಬಫರ್ ಝೋನ್ ಒಳಗೆ ಸೇರಿಕೊಂಡರೆ ನಾವುಗಳೆಲ್ಲ ಫಾರೆಸ್ಟ್ ಕಾನೂನಿಗೆ ಒಳಗೊಂಡು ತುಂಬಾ ಕಷ್ಟಗಳನ್ನು ಅನುಭವಿಸಬೇಕಾಗಬಹುದು.

— ಉದಯ್ ಕೀಕಣಮಾಡ, ಮಾಜಿ ಸೈನಿಕ, ಪೂಕೋಳ ಗ್ರಾಮ

"

ಕೇಂದ್ರ ಸರ್ಕಾರ ಮಲೆನಾಡಿನ ಪರಿಸರ ಸೂಕ್ಷ್ಮ ಗ್ರಾಮಗಳ ಪಟ್ಟಿ ಪ್ರಕಟಿಸಿದೆ. ಆ ಪಟ್ಟಿಯಲ್ಲಿ ಕೊಡಗು ಜಿಲ್ಲೆಯ 53 ಗ್ರಾಮಗಳಿವೆ.ನಮ್ಮ ಗ್ರಾಮವೂ ಪರಿಸರ ಸೂಕ್ಷ್ಮ ವಲಯಕ್ಕೆ ಸೇರುವ ಆತಂಕ ಎದುರಾಗಿದೆ. ಸರ್ಕಾರಗಳು ಕಸ್ತೂರಿರಂಗನ್ ವರದಿಯ ಸಾಧಕ-ಬಾಧಕಗಳನ್ನಅರಿತು ಜನಪರವಾಗಿ ಮುಂದುವರಿದು ಒಳಿತು ಮಾಡಬೇಕು. ಪರಿಸರವೂ ಉಳಿಯಬೇಕು. ರೈತನೂ ಬದುಕಬೇಕು. ಜನವಿರೋಧಿ ವರದಿ ನಮಗೆ ಬೇಡ!

— ಬಿಂದು, ಗೃಹಿಣಿ, ಅಪ್ಪಂಗಳ ಗ್ರಾಮ

"

ಜಿಲ್ಲೆಯ 53 ಗ್ರಾಮಗಳು ಪರಿಸರ ಸೂಕ್ಷ್ಮ ವಲಯಕ್ಕೆ ಸೇರಿರುವುದು ಕೇಂದ್ರ ಸರ್ಕಾರ ಪ್ರಕಟಿಸಿರುವ ಪಟ್ಟಿಯಿಂದ ತಿಳಿದುಬಂದಿದೆ. ಆದರೆ ಈ ವಲಯದಲ್ಲಿ ವಾಸಿಸುತ್ತಿರುವ ರೈತಾಪಿ ವರ್ಗದ ಜನರಿಗೆ ಇದರಿಂದ ಬಹಳ ಸಂಕಷ್ಟವನ್ನು ಎದುರಿಸುವ ಪರಿಸ್ಥಿತಿ ಬರಬಹುದು. ಅಲ್ಲಿಯ ಜನರ ಕೃಷಿ ಚಟುವಟಿಕೆಗಳಿಗೆ ತೊಡಕಾಗಬಹುದು. ಸೂಕ್ಷ್ಮ ಪರಿಸರ ವಲಯ ಘೋಷಣೆಯಾದಲ್ಲಿ ಮಾನವ ಪ್ರಾಣಿ ಸಂಘರ್ಷ ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆ ಖಂಡಿತ ಬರುತ್ತದೆ. ಸರ್ಕಾರ ಮತ್ತೊಮ್ಮೆ ಈ ಬಗ್ಗೆ ಸೂಕ್ಷ್ಮವಾಗಿ ಪರಿಶೀಲನೆ ನಡೆಸಿ ಜನಪರ ಕಾಳಜಿ ವಹಿಸಬೇಕಾಗಿದೆ. ಸÀರ್ಕಾರದ ಈ ಯೋಜನೆಗೆ ವಿರೋಧವಿದೆ.

— ಕೊಡಪಾಲು ಎಸ್. ಗಣಪತಿ, ಅಧ್ಯಕ್ಷ, ಗೌಡ ಸಮಾಜ, ಕಾರುಗುಂದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net