ನಾಪೋಕ್ಲು: ಹಿಂದೂ ಸಮಾಜದ ಮೇಲೆ ಸ್ವಾತಂತ್ರೃ ಪೂರ್ವದಿಂದಲೂ ದಾಳಿ ನಡೆಯುತ್ತಾ ಬಂದಿದ್ದು, ಹಿಂದುಗಳು ಒಗ್ಗಟ್ಟಾದರೆ ಮಾತ್ರ ಧರ್ಮದ ರಕ್ಷಣೆ ಸಾಧ್ಯ ಎಂದು ರಾಷ್ಟ್ರೀಯ ಸ್ವಯಂಸೇವಕರ ಸಂಘದ ಪ್ರಮುಖ್ ವಿನಯ್ ಸುಬ್ರಮಣ್ಯ ಹೇಳಿದರು.
ಸಮೀಪದ ಹೊದ್ದೂರು ಮಂಡಲ ವತಿಯಿಂದ ರಾಷ್ಟ್ರೀಯ ಸ್ವಯಂಸೇವಕರ ಸಂಘದ ಶತಾಬ್ದಿಯ ಅಂಗವಾಗಿ ಸೋಮವಾರ ಆಯೋಜಿಸಿದ್ದ ಹಿಂದೂ ಮಹಾ ಸಂಗಮ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ನಿತ್ಯಾಕಾರ್ಯಪ್ಪ ಹಿಂದೂ ಸಮಾಜದ ರಕ್ಷಣೆಯಲ್ಲಿ ತಾಯಂದಿರ ಪಾತ್ರದ ಬಗ್ಗೆ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮದ ಹಿರಿಯ ಮಂಡೆಪಂಡ ಕರುಂಬಯ್ಯ ವಹಿಸಿದ್ದರು.
ಇದಕ್ಕೂ ಮುನ್ನ ಭಗವತಿ ದೇವಸ್ಥಾನದಿಂದ ಶೋಭಾ ಯಾತ್ರೆಯು ಕಬ್ಬಡಗೇರಿಯ ಆಟದ ಮೈದಾನದವರೆಗೆ ಸಾಗಿತು. ಕಾರ್ಯಕ್ರಮದಲ್ಲಿ ವಿಜು ಚೆಟ್ಟಳ್ಳಿ ಅವರಿಂದ ದೇಶಭಕ್ತಿ ಗೀತೆ ಗಾಯನ ನಡೆಯಿತು.
ಮೂರ್ನಾಡುವಿನ ನೃತ್ಯ ಕಲಾತಂಡದಿಂದ ದೇಶಭಕ್ತಿಯ ನೃತ್ಯ ಕಾರ್ಯಕ್ರಮ, ವಾಂಚೀರ ಅಜಯ್, ಜಸ್ಮಿ, ನೆರವಂಡ ಸಂಜಯ್, ಆಯೋಜನಾ ಸಮಿತಿಯ ಅಧ್ಯಕ್ಷರು, ಸಂಘ ಪರಿವಾರದ ಕಾರ್ಯಕರ್ತರು ಹಾಗೂ ಹಿಂದೂ ಭಕ್ತರು ಭಾಗವಹಿಸಿದ್ದರು.