

ಸ್ಥಳೀಯ ಗ್ರಾಮ ಪಂಚಾಯತ್ ಮಟ್ಟದ ಸಂಜೀವಿನಿ ಒಕ್ಕೂಟವು ಸಂತೆ ಮೇಳವನ್ನು ಯಶಸ್ವಿಯಾಗಿ ಆಯೋಜಿಸಿದೆ. ಇದು ಕೇವಲ ಒಂದು ದಿನದ ಕಾರ್ಯಕ್ರಮಕಷ್ಟೇ ಸೀಮಿತವಾಗಬಾರದು. ತಮ್ಮ ತಮ್ಮ ಸಂಘಗಳಲ್ಲಿ ಉತ್ಪಾದಿಸಿದ ಉತ್ಪನ್ನಗಳ ಮಹಿಳೆಯರು ನಿರಂತರವಾಗಿ ಮಾರಾಟಕ್ಕೆ ಮಾರುಕಟ್ಟೆ ವ್ಯವಸ್ಥೆಯನ್ನು ರೂಪಿಸುವ ಕೆಲಸವಾಗಬೇಕು. ಈ ಮೂಲಕ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಸಾಧ್ಯವಿದೆ. ಸಮಾಜಕ್ಕೂ ಉತ್ತಮ ಸಂದೇಶ ತಲುಪಿಸಬಹುದಾಗಿದೆ.
ಗುಡ್ಡೆಹೊಸೂರು ಗ್ರಾಮ ಪಂಚಾಯತ್ ಮಟ್ಟದ ಸಂಜೀವಿನಿ ಒಕ್ಕೂಟ ಇದೇ ಪ್ರಪ್ರಥಮ ಬಾರಿಗೆ ಸಂತೆ ಮೇಳವನ್ನು ಆಯೋಜಿಸಿದೆ. ಇದು ನಮಗೆಲ್ಲರಿಗೂ ಹೊಸ ಹುರುಪನ್ನು ತಂದಿದೆ. ಮುಂದೆ ಬಹಳ ಹೆಚ್ಚಿನ ಸಂಖ್ಯೆಯಲ್ಲಿ ಒಕ್ಕೂಟದ ಸದಸ್ಯರನ್ನು ಸೇರಿಸಿ ಮತ್ತೊಮ್ಮೆ ಬೃಹತ್ ಮಟ್ಟದಲ್ಲಿ ಸಂತೆ ಮೇಳವನ್ನು ಆಯೋಜಿಸುವ ಆಲೋಚನೆ ಇದೆ. ಈ ಮೂಲಕ ಇನ್ನಷ್ಟು ಮಹಿಳೆಯರಿಗೆ ಸ್ವ-ಉದ್ಯೋಗಿಗಳಾಗಲು ಪ್ರೇರಣೆ ನೀಡಲಾಗುವುದು.
ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗುವ ನಿಟ್ಟಿನಲ್ಲಿ ಇಂಥ ಮೇಳಗಳು ಪ್ರಯೋಜನಕಾರಿ. ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾದಾಗ ಸಮಾಜವೂ ಸದೃಢವಾಗುತ್ತದೆ. ಈ ಹಿನ್ನೆಲೆಯಲ್ಲಿ ಸ್ವ-ಸಹಾಯ ಸಂಘಗಳು ಒಳ್ಳೆಯ ಕೆಲಸ ಮಾಡುತ್ತಿದೆ. ಸಂತೆಗಳು ಇನ್ನೂ ದೊಡ್ಡ ಮಟ್ಟದಲ್ಲಿ ನಡೆಯುವಂತಾಗಬೇಕು.