ಪ್ರತಿ 10 ವರ್ಷಕ್ಕೆ ಒಮ್ಮೆ ಜನಗಣತಿ ನಡೆದಂತೆ ಎಸ್‌ಐಆರ್ ಕಾರ್ಯವೂ ಆಗಬೇಕು. 2015, 16ರಲ್ಲಿ ನಡೆಯಬೇಕಿದ್ದ ಈ ಪ್ರಕ್ರಿಯೆಯನ್ನು ಚುನಾವಣಾ ಆಯೋಗ ಈಗ ನಡೆಸುತ್ತಿರುವುದರ ಹಿಂದಿನ ಆಸಕ್ತಿ ಏನು? ಈ ಹಿಂದೆ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿಯೂ ಎಸ್‌ಐಆರ್ ನಡೆದಿತ್ತು. ಆದರೆ ಈಗಿನಂತೆ ಗೊಂದಲ, ಆತಂಕ ಇರಲಿಲ್ಲ. ದೇಶದ ಬಡವರು, ಅಲೆಮಾರಿಗಳು, ದಲಿತರಲ್ಲಿ ಈಗ ಭಯದ ವಾತಾವರಣ ಉಂಟಾಗಿದೆ. ಹಾಗಾಗಿ ಯಾವುದೇ ಆತಂಕ, ಅನುಮಾನಕ್ಕೆ ಎಡೆ ಮಾಡಿಕೊಡದೇ ಚುನಾವಣಾ ಆಯೋಗ ಎಸ್‌ಐಆರ್ ಕೆಲಸ ಮಾಡಬೇಕಿದೆ ಎಂದು ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.