ಸಮಾಜಕ್ಕೆ ಒಕ್ಕಲಿಗರ ಕೊಡುಗೆ ಅಪಾರ

ದಕ್ಷಿಣ ಕೊಡಗು ಒಕ್ಕಲಿಗರ ಯುವ ವೇದಿಕೆ ವತಿಯಿಂದ ಆಯೋಜಿಸಲಾಗಿರುವ ಒಕ್ಕಲಿಗರ ಮಿಲನ ಒಕ್ಕಲಿಗರ ಕ್ರೀಡಾಕೂಟವನ್ನು ವೀರಾಜಪೇಟೆ ಶಾಸಕರೂ ಆಗಿರುವ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಉದ್ಘಾಟಿಸಿದರು. ಮಧುಸೂದನ್, ವಿ.ಈ. ಭದ್ರಯ್ಯ, ವಿ.ಟಿ. ಗೋಪಾಲ್, ಭವಾನಿ ಪರಮೇಶ್ವರ, ಜಿ. ಕೆ. ಜಯಲಕ್ಷ್ಮಿ ಗಣೇಶ್, ವಿ. ಎಸ್. ಪ್ರಶಾಂತ್ ಮತ್ತಿತರರು ಇದ್ದರು.
ದಕ್ಷಿಣ ಕೊಡಗು ಒಕ್ಕಲಿಗರ ಯುವ ವೇದಿಕೆ ವತಿಯಿಂದ ಆಯೋಜಿಸಲಾಗಿರುವ ಒಕ್ಕಲಿಗರ ಮಿಲನ ಒಕ್ಕಲಿಗರ ಕ್ರೀಡಾಕೂಟವನ್ನು ವೀರಾಜಪೇಟೆ ಶಾಸಕರೂ ಆಗಿರುವ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಉದ್ಘಾಟಿಸಿದರು. ಮಧುಸೂದನ್, ವಿ.ಈ. ಭದ್ರಯ್ಯ, ವಿ.ಟಿ. ಗೋಪಾಲ್, ಭವಾನಿ ಪರಮೇಶ್ವರ, ಜಿ. ಕೆ. ಜಯಲಕ್ಷ್ಮಿ ಗಣೇಶ್, ವಿ. ಎಸ್. ಪ್ರಶಾಂತ್ ಮತ್ತಿತರರು ಇದ್ದರು.
Published on
ಗೋಣಿಕೊಪ್ಪಲು:
ಒಕ್ಕಲಿಗರು ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ವೀರಾಜಪೇಟೆ ಶಾಸಕರೂ ಆಗಿರುವ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಹೇಳಿದರು. ದಕ್ಷಿಣ ಕೊಡಗು ಒಕ್ಕಲಿಗರ ಯುವ ವೇದಿಕೆ ವತಿಯಿಂದ ಹಾತೂರು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮೈದಾನದಲ್ಲಿ ಆಯೋಜಿಸಲಾಗಿರುವ ಒಕ್ಕಲಿಗರ ಮಿಲನ ಒಕ್ಕಲಿಗರ ಕ್ರೀಡಾಕೂಟದ ಉದ್ಘಾಟನೆಯನ್ನು ನೆರವೇರಿಸಿ ಶನಿವಾರ ಮಾತನಾಡಿದರು.
ಕೊಡಗು ಪುಟ್ಟ ಜಿಲ್ಲೆಯಾದರೂ ಕ್ರೀಡಾ ಕ್ಷೇತ್ರಕ್ಕೆ ಬಹಳಷ್ಟು ಕೊಡುಗೆ ನೀಡಿದೆ. ಒಕ್ಕಲಿಗರು ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಮೂಲಕ ದೇಶಕ್ಕೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಿದ್ದಾರೆ. ಕ್ರೀಡೆ ವ್ಯಕ್ತಿಯ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಸಮತೋಲನದಲ್ಲಿಡುವುದರ ಜತೆಗೆ ಸೋಲು ಗೆಲುವನ್ನು ಸಮವಾಗಿ ಸ್ವೀಕರಿಸಿ ಯಶಸ್ಸು ಸಾಧಿಸುವ ಕಲೆಯನ್ನು ಕಲಿಸುತ್ತದೆ. ಯಾವುದೇ ಒಂದು ಜನಾಂಗದ ಸಂಬAಧ ಬೆಸೆದು ಒಗ್ಗಟ್ಟು ಮೂಡಿಸಲು ಕ್ರೀಡೆ ಸಹಕಾರಿಯಾಗಿದ್ದು, ಸಮುದಾಯಗಳು ಆಚಾರ, ವಿಚಾರ, ಸಂಸ್ಕೃತಿ ಪದ್ಧತಿ ಪರಂಪರೆಯನ್ನು ಉಳಿಸಿ ಬೆಳೆಸಬೇಕು ಎಂದರು.
ನಂತರ ಶಾಸಕ ಪೊನ್ನಣ್ಣ ಅವರು ವಕೀಲರಾದ ರಾಕೇಶ್ ಅವರ ಬೌಲಿಂಗ್‌ನಲ್ಲಿ ಬ್ಯಾಟ್ ಮಾಡುವ ಮೂಲಕ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿದರು.
ದಕ್ಷಿಣ ಕೊಡಗು ಒಕ್ಕಲಿಗ ಯುವ ವೇದಿಕೆ ಅಧ್ಯಕ್ಷ ಮಧುಸೂದನ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದಾನಿಗಳಾದ ವಿ.ಈ. ಭದ್ರಯ್ಯ, ಸಮಾಜ ಸೇವಕ ವಿ.ಟಿ. ಗೋಪಾಲ್, ಭವಾನಿ ಪರಮೇಶ್ವರ, ಜಿ. ಕೆ. ಜಯಲಕ್ಷ್ಮಿ ಗಣೇಶ್, ವಿ. ಎಸ್. ಪ್ರಶಾಂತ್, ಹಂಚಿಮನೆ ಸುಜಾತ ಮಹೇಶ್, ವಿ. ಬಿ. ವಿಠಲ, ವಿ. ಎನ್. ಮಹೇಶ್, ವಿ. ಈ. ರಮೇಶ್, ಸುಚಿತ್ರ ಸುರೇಂದ್ರ, ವಿ. ಆರ್. ಕೃಷ್ಣ, ವಿ.ವಿ. ಡಾಲು, ವಿ.ಟಿ. ವೆಂಕಟೇಶ್ ಮತ್ತಿತರರು ಇದ್ದರು.
ಉದ್ಘಾಟನಾ ಕಾರ್ಯಕ್ರಮಕ್ಕೂ ಮುನ್ನ ಒಕ್ಕಲಿಗ ಬಾಂಧವರು ಬೈಗೋಡ್ ಜಂಕ್ಷನ್ ನಿಂದ ಮೈದಾನದವರೆಗೆ ಸಾಂಪ್ರದಾಯಿಕ ಉಡುಪು ತೊಟ್ಟು ವಾದ್ಯ ಮೇಳದೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿದರು. ಮಹಿಳೆಯರು ಕಳಸದೊಂದಿಗೆ ಹೆಜ್ಜೆ ಹಾಕಿ ಗಮನ ಸೆಳೆದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net