ಕೃಷಿ ವಿಜ್ಞಾನ ಕೇಂದ್ರ ಗೋಣಿಕೊಪ್ಪ ವತಿಯಿಂದ ಕಿತ್ತಳೆ, ಸಪೋಟ, ಗಜನಿಂಬೆ, ಬಾಳೆಕಾಯಿ, ಫಿಂಗರ್ ಬನಾನಾ, ಎಗ್ ಫ್ರೂಟ್ ಹಣ್ಣುಗಳು ಗಮನ ಸೆಳೆದವು. ಕಾಗೆಸಣ್ಣ, ಬಿ.ಕೆ.ಬಿ, ಪಂಚರತ್ನ, ಬರ್ಮಬ್ಯಾಕ್, ದೊಡ್ಡಿ, ಜಿರಿಗೆ ಸಣ್ಣ, ರಾಜಮುಡಿ, ಗೋವಿಂದ ಬೋಗ್, ರತ್ನಚೂಡಿ, ಇಂಟಾನ್, ತುಂಗಾ, ಕಿನ್ಯ ಭತ್ತ, ಬಿಳಿಯ, ರಕ್ತಶಾಲಿ, ಆತ್ಮಕ, ಕಾಲಾನಾಮಕ್ ಸೇರಿದಂತೆ 40 ಹೆಚ್ಚು ಭತ್ತದ ತಳಿಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಕೃಷಿ ಇಲಾಖೆಯಿಂದ ಮಾಹಿತಿ ಕೇಂದ್ರ ತೆರೆಯಲಾಗಿತ್ತು.