ವಿಶ್ವಮಟ್ಟಕ್ಕೆ ಪಸರಿಸಿದ ಕಾಫಿ ಪರಿಮಳ

ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರಿಗೆ ನರೇಂದ್ರ ಮೋದಿ ಕೊಡುಗೆಯಾನಿ ನೀಡಿದ ಇಂಡಿಯನ್ ಪ್ರೀಮಿಯಂ ಕಾಫಿ ಬಾಕ್ಸ್ನಲ್ಲಿದ್ದ ವಿವಿಧ ಕಾಫಿ
ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರಿಗೆ ನರೇಂದ್ರ ಮೋದಿ ಕೊಡುಗೆಯಾನಿ ನೀಡಿದ ಇಂಡಿಯನ್ ಪ್ರೀಮಿಯಂ ಕಾಫಿ ಬಾಕ್ಸ್ನಲ್ಲಿದ್ದ ವಿವಿಧ ಕಾಫಿ
Published on
ಮಡಿಕೇರಿ:
ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ತಮ್ಮ ಕಾಫಿ ಪ್ರೀತಿಯನ್ನು ಪ್ರದರ್ಶಿಸಿದ್ದಾರೆ. ತಮ್ಮ 127ನೇ ಆವೃತ್ತಿಯ ಮನ್ ಕಿ ಬಾತ್‌ನಲ್ಲಿ ಕೊಡಗು ಸೇರಿದಂತೆ ಕರ್ನಾಟಕದ ಕಾಫಿ ಬಗ್ಗೆ ಪ್ರಸ್ತಾಪ ಮಾಡಿ ದೇಶದುದ್ದಕ್ಕೂ ಕಾಫಿಯ ಪರಿಮಳ ಪಸರಿಸಿದ್ದ ಅವರು ಈಗ ವಿಶ್ವಮಟ್ಟದಲ್ಲೂ ನಮ್ಮ ನೆಲದ ಕಾಫಿಯನ್ನು ಪರಿಚಯಿಸಿದ್ದಾರೆ. ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರಿಗೆ ಭಾರತೀಯ ಪ್ರೀಮಿಯಂ ಕಾಫಿ ಬಾಕ್ಸ್ ಉಡುಗೊರೆಯಾಗಿ ಕೊಡುವ ಮೂಲಕ ಕಾಫಿ ಸಂಸ್ಕೃತಿಯನ್ನು ಮುಂಚೂಣಿಗೆ ತಂದಿದ್ದಾರೆ.
ಭಾರತದ ಕಾಫಿ ಅತ್ಯುತ್ತಮ ಕಾಫಿ. ಇದನ್ನು ಭಾರತದಲ್ಲಿ ತಯಾರಿಸಲಾಗುತ್ತದೆ ಮತ್ತು ಇಡೀ ಜಗತ್ತು ಇದನ್ನು ಪ್ರೀತಿಸುತ್ತದೆ..ಇದು ಪ್ರಧಾನಿ ನರೇಂದ್ರ ಮೋದಿ ತಮ್ಮ 127ನೇ ಆವೃತ್ತಿಯ ಮನ್ ಕಿ ಬಾತ್‌ನಲ್ಲಿ ಆಡಿದ ಮಾತು. ಈ ಸಂದರ್ಭ ಅವರು ದೇಶದಲ್ಲಿ ಕಾಫಿ ಬೆಳೆಯುವ ಪ್ರದೇಶಗಳ ಪ್ರಸ್ತಾಪ ಮಾಡುತ್ತಾ ಕರ್ನಾಟಕದ ಕೊಡಗು, ಚಿಕ್ಕಮಗಳೂರು ಹಾಗೂ ಹಾಸನವನ್ನೂ ಉಲ್ಲೇಖಿಸಿದ್ದರು. ಈ ಮೂಲಕ ದೇಶದಲ್ಲಿ ಕಾಫಿಗೆ ವಿಶೇಷ ಮನ್ನಣೆ ಸಿಗುವಲ್ಲಿ ಕಾರಣೀಭೂತರಾಗಿದ್ದರು.
ಇದೀಗ ಪ್ರಧಾನಿ ಮೋದಿ ಅವರ ಮತ್ತೊಂದು ನಡೆ ಕಾಫಿ ಉದ್ಯಮದಲ್ಲಿ ಹೊಸದೊಂದು ಆಶಾಕಿರಣ ಮೂಡಿಸಿದೆ. ತಮ್ಮ ಆಸ್ಟೆçÃಲಿಯಾ ಭೇಟಿ ವೇಳೆ ಅಲ್ಲಿಯ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರಿಗೆ ಇಂಡಿಯನ್ ಪ್ರೀಮಿಯಂ ಕಾಫಿ ಬಾಕ್ಸ್ ಉಡುಗೊರೆಯಾಗಿ ನೀಡಿರುವುದು ಸಾಕಷ್ಟು ನಿರೀಕ್ಷೆಗಳಿಗೆ ಕಾರಣವಾಗಿದೆ. ಭಾರತದಿಂದ 100ಕ್ಕೂ ಹೆಚ್ಚು ದೇಶಗಳು ಕಾಫಿ ಆಮದು ಮಾಡಿಕೊಳ್ಳುತ್ತಿದ್ದು, ಕಾಫಿ ಆಮದಿನಲ್ಲಿ 4ನೇ ಅತೀ ದೊಡ್ಡ ದೇಶವಾಗಿರುವ ಆಸ್ಟೆçÃಲಿಯಾದ ಪ್ರಧಾನಿಗೆ ನಮ್ಮಲ್ಲಿ ಭೌಗೋಳಿಕ ಮಾನ್ಯತೆ ಪಡೆದಿರುವ 7 ವಿವಿಧ ತಳಿಗಳ ಕಾಫಿ ಕೊಡಲಾಗಿದೆ.
ಈ ಉಡುಗೊರೆ ಕೇವಲ ಉತ್ತಮ ರುಚಿಗೆ ಮಾತ್ರ ಸೀಮಿತವಾಗಿರದೆ ಇದು ನಮ್ಮ ಪ್ರಗತಿಶೀಲ ಕಾಫಿ ವಲಯದ ಗುಣಮಟ್ಟ, ಸುಸ್ಥಿರತೆ ಮತ್ತು ಪರಿಸರಸ್ನೇಹಿ ಕೃಷಿ ಪದ್ಧತಿಗಳಿಗೆ ನೀಡಿದ ಮನ್ನಣೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಈ ಉಡುಗೊರೆ ಪೆಟ್ಟಿಗೆಯಲ್ಲಿ ಕೊಡಗಿನ ಅರೆಬಿಕಾ ಕಾಫಿ ಜತೆಗೆ ಜಗತ್ಪç್ರಸಿದ್ಧ ಚಿಕ್ಕಮಗಳೂರು ಅರೆಬಿಕಾ ಕಾಫಿ ಮತ್ತು ಬಾಬಾಬುಡನ್‌ಗಿರಿ ಅರೆಬಿಕಾ ಕಾಫಿಯನ್ನು ಒಳಗೊಂಡಿರುವುದರ ಮೂಲಕ ಭಾರತದ ಕಾಫಿ ನಾಡು ಎಂದೇ ಹೆಸರಾದ ಕರ್ನಾಟಕದ ಅಪ್ರತಿಮ ಪರಂಪರೆ ವಿಶ್ವಮಟ್ಟದಲ್ಲಿ ಬಿಂಬಿತವಾದAತೆ ಆಗಿದೆ. ಕಾಫಿ ಬೆಳೆಗಾರರು ಮತ್ತು ರೋಸ್ಟರ್‌ಗಳಿಗೆ ಅತ್ಯಂತ ಅರ್ಹವಾದ ಜಾಗತಿಕ ವೇದಿಕೆ ಒದಗಿಸಿಕೊಡುವುದಕ್ಕೂ ನೆರವಾಗಿದೆ.
ಭಾರತದಲ್ಲಿ ಬೆಳೆಯುವ ಕಾಫಿಯಲ್ಲಿ ಶೇ. 71ರಷ್ಟು ಕಾಫಿಯನ್ನು ಕರ್ನಾಟಕದಲ್ಲಿ ಬೆಳೆಯಲಾಗುತ್ತದೆ. 2024-25ರ ಅಂದಾಜಿನ ಪ್ರಕಾರ ಚಿಕ್ಕಮಗಳೂರಿನಲ್ಲಿ 91,400 ಮೆಟ್ರಿಕ್ ಟನ್, ಕೊಡಗಿನಲ್ಲಿ 1,21,600 ಮೆಟ್ರಿಕ್ ಟನ್ ಹಾಗೂ ಹಾಸನದಲ್ಲಿ 43 ಸಾವಿರ ಮೆಟ್ರಿಕ್ ಟನ್ ಕಾಫಿ ಬೆಳೆಯಲಾಗುತ್ತಿದೆ. ಈ ಮೂರು ಜಿಲ್ಲೆಯಿಂದ ಕಾಫಿ ಮೂಲಕ 10 ಸಾವಿರ ಕೋಟಿ ರೂ. ವಿದೇಶಿ ವಿನಿಮಯ ಬರುತ್ತಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಕಾಫಿ ಬೆಳವಣಿಗೆ ಉತ್ತಮವಾಗಿದೆ. ಮಾರುಕಟ್ಟೆಯ ಬೇಡಿಕೆಗಳನ್ನು ಈಡೇರಿಸುವುದಕ್ಕೆ ಸಂಬAಧಿಸಿದAತೆ ಎಲ್ಲಾ ಸಿದ್ಧತೆಗಳೂ ದೇಶದಲ್ಲಿ ನಡೆದಿದೆ. ಈ ನಿಟ್ಟಿನಲ್ಲಿ ಭಾರತೀಯ ಕಾಫಿ ಮಂಡಳಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯದ ಜತೆ ನಿರಂತರ ಸಂಪರ್ಕದಲ್ಲಿದ್ದು ಅದರ ಫಲ ಪ್ರಧಾನಿ ಅವರ ಕಾಫಿ ಉಡುಗೊರೆ ರೀತಿಯಲ್ಲಿ ವ್ಯಕ್ತವಾಗಿದೆ.
ಬೇರೆ ದೇಶಗಳ ಕಾಫಿಗೆ ಹೋಲಿಸಿದರೆ ಭಾರತೀಯ ಕಾಫಿ ವಿಭಿನ್ನವಾಗಿ ನಿಲ್ಲುತ್ತದೆ. ಇಲ್ಲಿ ಕಾಫಿಯನ್ನು ನೆರಳಿನಲ್ಲಿ ಬೆಳೆಸುವುದು ವಿಶೇಷ. ಆದರೆ ಭಾರತೀಯ ಕಾಫಿ ಇನ್ನೂ ಬ್ರಾಂಡಿAಗ್ ಆಗಿಲ್ಲ. ಹಾಗಾಗಿ ಭಾರತದ ಕಾಫಿಯನ್ನು ಬ್ರಾಂಡ್ ಮಾಡುವ ನಿಟ್ಟಿನಲ್ಲಿ ಮೋದಿ ಅವರ ನಡೆ ಮಹತ್ವದ ಪಾತ್ರ ವಹಿಸಲಿದೆ ಎಂದು ದೇಶದ ಕಾಫಿ ವಲಯ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದೆ.
"

ರಾಜತಾಂತ್ರಿಕ ಕೊಡುಗೆಯಾಗಿ ಕೊಡಗಿನ ಅರೆಬಿಕಾ ಕಾಫಿಯನ್ನು ಪ್ರದರ್ಶಿಸಿರುವುದು ನಿಜಕ್ಕೂ ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ. ಕೊಡಗಿನ ಮಂಜು ಮುಸುಕಿದ ಪವಿತ್ರ ಬೆಟ್ಟಗಳಲ್ಲಿ ಬೆಳೆಯಲಾಗುವ ಈ ವಿಶಿಷ್ಟ ಕಾಫಿ ನಮ್ಮ ಸ್ಥಳೀಯ ರೈತರ ಸಮರ್ಪಣಾ ಮನೋಭಾವ ಮತ್ತು ಭಾರತೀಯ ಸ್ಪೆಷಾಲಿಟಿ ಕಾಫಿಯ ಹೆಮ್ಮೆಯ ಗುರುತಾಗಿರುವ ಅದರ ವಿಶಿಷ್ಟ ಪರಿಮಳವನ್ನು ಪ್ರತಿನಿಧಿಸುತ್ತದೆ.

— ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಮೈಸೂರು-ಕೊಡಗು ಸಂಸದ
"

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರಿಗೆ ಇಂಡಿಯನ್ ಪ್ರೀಮಿಯಂ ಕಾಫಿ ಬಾಕ್ಸ್ ಉಡುಗೊರೆಯಾಗಿ ನೀಡಿದ್ದಾರೆ. ಇದು ನಮ್ಮ ವೈವಿಧ್ಯಮಯ ಭೂಪ್ರದೇಶಗಳು ಮತ್ತು ವಿಶಿಷ್ಟ ಪ್ರಕ್ರಿಯೆಗಳಿಂದ ರೂಪುಗೊಂಡ ವಿಶಿಷ್ಟ ಸುವಾಸನೆಗಳನ್ನು ಒಳಗೊಂಡಿರುವ ಭಾರತದ ಶ್ರೀಮಂತ ಕಾಫಿ ಪರಂಪರೆಯನ್ನು ಆಚರಿಸುತ್ತದೆ. ಈ ಉಡುಗೊರೆ ಜಾಗತಿಕ ಮಟ್ಟದಲ್ಲಿ ಸುಸ್ಥಿರವಾಗಿ ಬೆಳೆಯುವ, ವಿಶ್ವದರ್ಜೆಯ ಕಾಫಿ ಉತ್ಪಾದಕ ದೇಶವಾಗಿ ಭಾರತದ ಬೆಳೆಯುತ್ತಿರುವ ಹೆಮ್ಮೆಯನ್ನು ಪ್ರತಿಬಿಂಬಿಸುತ್ತದೆ.

— ಪಿಯುಷ್ ಗೋಯಲ್, ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಮಂತ್ರಿ

"

ಭಾರತದಿಂದ ಕಾಫಿಯನ್ನು ಆಮದು ಮಾಡಿಕೊಳ್ಳುವ ನಾಲ್ಕನೇ ಅತೀ ದೊಡ್ಡ ದೇಶ ಆಸ್ಟೆçÃಲಿಯಾ. ಭಾರತದ ಕಾಫಿ ಬ್ರಾಂಡಿAಗ್ ಆಗಿಲ್ಲ. ಬ್ರಾಂಡಿAಗ್‌ಗೆ ಈಗ ನಾವು ಪ್ರಯತ್ನ ಮಾಡುತ್ತಿದ್ದೇವೆ. ನಮ್ಮಲ್ಲಿ ಭೌಗೋಳಿಕ ಮಾನ್ಯತೆ ಪಡೆದ 7 ತಳಿಯ ಕಾಫಿಗಳಿವೆ. ನಮ್ಮಲ್ಲಿ ಕಾಫಿಯನ್ನು ನೆರಳಿನಲ್ಲಿ ಬೆಳೆಸುತ್ತೇವೆ. ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದ ಕಾಫಿ ವಿಭಿನ್ನವಾಗಿದೆ. ಪ್ರಧಾನಿಗಳು ಈ ರೀತಿ ಅವರು ಹೋದ ದೇಶದಲ್ಲಿ ಕೊಡುಗೆ ನೀಡುವುದರಿಂದ ಭಾರತೀಯ ಕಾಫಿಗೆ ಸ್ಕೋಪ್ ಜಾಸ್ತಿ ಆಗುತ್ತದೆ.

— ದಿನೇಶ್ ದೇವವೃಂದ, ಅಧ್ಯಕ್ಷ, ಭಾರತೀಯ ಕಾಫಿ ಮಂಡಳಿ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net