ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಸೂರು ಕೂಡ್ಲೂರು ಕಾರ್ಯಕ್ಷೇತ್ರದ ದೊಡ್ಡ ಭಂಡಾರ ಗ್ರಾಮದ ಮಲ್ಲೇಶ್ವರ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಗ್ರಾಮಸ್ಥರು ಮತ್ತು ಸಂಘದ ಸದಸ್ಯರು
Published on:
Copied
Follow Us
ಶನಿವಾರಸಂತೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಸೋಮವಾರಪೇಟೆ ನಂದಿಗುಂದ ವಲಯ ವತಿಯಿಂದ ಬೆಸೂರು-ಕೂಡ್ಲೂರು ಕಾರ್ಯಕ್ಷೇತ್ರದ ದೊಡ್ಡ ಭಂಡಾರ ಗ್ರಾಮದ ಶ್ರೀ ಮಲ್ಲೇಶ್ವರ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಗಿತ್ತು.
ಸಂಘದ ಸದಸ್ಯರು ದೇವಸ್ಥಾನ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಶ್ರಮದಾನದ ಮೂಲಕ ಸ್ವಚ್ಛತೆಗೊಳಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ ನಡೆಯುವ ಕಾರ್ಯಕ್ರಮಗಳ ಕುರಿತು ಕೂಡ್ಲೂರು ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಶಾರದಮ್ಮ ಮಾಹಿತಿ ನೀಡಿದರು. ಗ್ರಾಮದ ಪ್ರಮುಖ ಮಂಜುನಾಥ್ ಮಾತನಾಡಿದರು.
ಪ್ರಮುಖರಾದ ಮಂಜುನಾಥ್, ಮಲ್ಲೇಗೌಡ, ಮಲ್ಲೇಶ್, ಗುರುರಾಜ್ ಗ್ರಾಮಸ್ಥರು, ಸ್ವಸಹಾಯ ಸಂಘದ ಸದಸ್ಯರು ಭಾಗವಹಿಸಿದ್ದರು.