ಸೋಮವಾರಪೇಟೆ ತಾಲೂಕಿನ ಕಾಜೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪ್ರತಿಜ್ಞಾವಿಧಿ ಸ್ವೀಕರಿಸಿದರು.
Published on:
Copied
Follow Us
ಸೋಮವಾರಪೇಟೆ: ಮಾದಕವಸ್ತು ಬಳಕೆ ಮತ್ತು ಅದರಿಂದಾಗುವ ದುಷ್ಪರಿಣಾಮ ಕುರಿತು ತಾಲೂಕಿನ ಕಾಜೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಶಾಲಾ ಸಭಾಂಗಣದಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಧೂಮಪಾನ ಮತ್ತು ಮಾದಕ ವಸ್ತುಗಳ ಬಳಕೆಯಿಂದಾಗುವ ದುಷ್ಪರಿಣಾಮಗಳ ಕುರಿತು ಶಾಲೆ ಮುಖ್ಯ ಶಿಕ್ಷಕಿ ಸರಳಾಕುಮಾರಿ ಮಾಹಿತಿ ನೀಡಿದರು.
ಶಿಕ್ಷಕಿ ಅನುಸೂಯ ಮಾತನಾಡಿ, ಮನೆಯಲ್ಲಿ ಹಿರಿಯರು ಮಾದಕ ವಸ್ತು ಬಳಕೆ ಮಾಡುತ್ತಿದ್ದರೆ, ಅವರಿಗೆ ಮುಂದಾಗಬಹುದಾದ ಆರೋಗ್ಯ ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳು ತಿಳಿಸಿಕೊಡುವ ಕೆಲಸ ಮಾಡಬೇಕು ಎಂದರು.
ಇದೇ ಸಂದರ್ಭ ಶಾಲೆಯ 14 ವಿದ್ಯಾರ್ಥಿಗಳ ತಂಡ ಮಾದಕ ವ್ಯಸನದ ಬಗ್ಗೆ ಕಿರುನಾಟಕ ಪ್ರದರ್ಶನ ಮಾಡಿತು. ಶಾಲಾ ಆವರಣದಲ್ಲಿ ಮಾದಕ ವಸ್ತುಗಳ ಚಟುವಟಿಕೆ ನಡೆದಲ್ಲಿ ಪೊಲೀಸ್ ಸಹಾಯವಾಣಿ 112ಕ್ಕೆ ಕರೆಮಾಡಿ ಮಾಹಿತಿ ನೀಡಬೇಕೆಂದು ತಿಳಿಸಿದರು. ಶಿಕ್ಷಕ ಸತೀಶ್ ಇದ್ದರು.