ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳ ವತಿಯಿಂದ ರಾಜ್ಯದ ಪಟ್ಟಣ ಸಹಕಾರ ಬ್ಯಾಂಕುಗಳ ಅಧ್ಯಕ್ಷರು, ಉಪಾಧ್ಯಕ್ಷರು, ಆಡಳಿತ ಮಂಡಳಿ ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಏರ್ಪಡಿಸಿದ್ದ ಒಂದು ದಿನದ ವಿಚಾರಸಂಕಿರಣವನ್ನು ಮಹಾಮಂಡಲದ ನಿರ್ದೇಶಕರುಗಳು ಉದ್ಘಾಟಿಸಿದರು. ಡಾ. ಎಂ.ಆರ್ ವೆಂಕಟೇಶ್, ಅಶೋಕ ಪಟ್ಟಣಶೆಟ್ಟಿ, ಮಲ್ಲಮ್ಮ, ಎಸ್‌ಬಿಎಂ ಮಂಜು, ಹೆಚ್. ಜಯಪ್ರಕಾಶ್ ಕೆದ್ಲಾಯ, ಪುಂಡಲಿಕ ಎನ್. ಕೆರೂರೆ ಇದ್ದರು.
ನೂತನ ತಂತ್ರಜ್ಞಾನ, ಸರ್ಕಾರದ ನೀತಿ-ನಿಯಮಗಳು, ಆರ್‌ಬಿಐ ಸುತ್ತೋಲೆಗಳ ಬಗ್ಗೆ ಕಾಲ ಕಾಲಕ್ಕೆ ಮಾಹಿತಿ ಪಡೆಯುವ ಮೂಲಕ ತಮ್ಮ ಸಂಸ್ಥೆಗಳನ್ನು ಲಾಭದಾಯಕವನ್ನಾಗಿ ಮುನ್ನಡೆಸಬಹುದು ಎಂದು ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳದ ನಿರ್ದೇಶಕ ಡಾ. ಎಂ.ಆರ್ ವೆಂಕಟೇಶ್ ಹೇಳಿದರು. ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳ ವತಿಯಿಂದ ರಾಜ್ಯದ ಪಟ್ಟಣ ಸಹಕಾರ ಬ್ಯಾಂಕುಗಳ ಅಧ್ಯಕ್ಷರು, ಉಪಾಧ್ಯಕ್ಷರು, ಆಡಳಿತ ಮಂಡಳಿ ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಇಲ್ಲಿನ ಖಾಸಗಿ ಹೊಟೇಲ್‌ನಲ್ಲಿ ಬುಧವಾರ ಏರ್ಪಡಿಸಿದ್ದ ಒಂದು ದಿನದ ವಿಚಾರಸಂಕಿರಣ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಸಂಸ್ಥೆಗಳಲ್ಲಿ ಹೆಚ್ಚಿನ ಪಾರದರ್ಶಕ ಆಡಳಿತ ತರಬೇಕು, ಅಧ್ಯಕ್ಷರು, ಉಪಾಧ್ಯಕ್ಷರು, ಆಡಳಿತ ಮಂಡಳಿ ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹೆಚ್ಚಿನ ಜ್ಞಾನ ಪಡೆದುಕೊಳ್ಳಬೇಕು ಎನ್ನುವ ಉದ್ದೇಶದಿಂದ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳ ವತಿಯಿಂದ
ರಾಜ್ಯಾದ್ಯಂತ ಬೇರೆ ಬೇರೆ ಭಾಗಗಳಲ್ಲಿ, ಬೇರೆ ಬೇರೆ ಸಂದರ್ಭಗಳಲ್ಲಿ ರಾಜ್ಯಮಟ್ಟದ ವಿಚಾರ ಸಂಕಿರಣ ಆಯೋಜನೆ ಮಾಡಲಾಗುತ್ತಿರುತ್ತದೆ. ಇಂಥ ವಿಚಾರ ಸಂಕಿರಣಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ತಮ್ಮ ತಿಳುವಳಿಕೆ ಹೆಚ್ಚು ಮಾಡಿಕೊಳ್ಳಬೇಕು. ಇದರಿಂದಾಗಿ ಸಿಬ್ಬಂದಿ ವರ್ಗಕ್ಕೆ ಕಾಲ ಕಾಲಕ್ಕೆ ಮಾರ್ಗದರ್ಶನ ನೀಡಿ ಹೆಚ್ಚಿನ ಕೆಲಸ ತೆಗೆದುಕೊಳ್ಳಬಹುದು. ಬ್ಯಾಂಕ್‌ಗಳನ್ನು ಲಾಭದಾಯಕವಾಗಿ ಮುನ್ನಡೆಸಬಹುದು.
ಬ್ಯಾಂಕ್ ಆಡಳಿತ ಮಂಡಳಿ ಅಧ್ಯಕ್ಷರು, ಉಪಾಧ್ಯಕ್ಷರು, ಆಡಳಿತ ಮಂಡಳಿ ನಿರ್ದೇಶಕರು ಸರ್ಕಾರದ ನಿಯಮಗಳಲ್ಲಿ ಪ್ರಾಥಮಿಕವಾಗಿ ಆಗಿರುವ ತಿದ್ದುಪಡಿಗಳು, ಆರ್‌ಬಿಐ ಸುತ್ತೋಲೆಗಳನ್ನು ಮನನ ಮಾಡಿಕೊಳ್ಳಬೇಕು. ಇದನ್ನು ಚಾಚೂ ತಪ್ಪದೇ ಜಾರಿಗೆ ತರಬೇಕು. ಈ ಮೂಲಕ ಆಡಳಿತ ಮಂಡಳಿ ನಿರ್ದೆಶಕರ ಸಾಮರ್ಥ್ಯ ವೃದ್ಧಿ ಮಾಡಿಕೊಳ್ಳಬೇಕು. ಇದರಿಂದ ಸಂಸ್ಥೆಯ ಅಭಿವೃದ್ಧಿಗೆ ಕ್ರಮವಹಿಸಬಹುದು. ಈ ನಿಟ್ಟಿನಲ್ಲಿ ಮಹಾಮಂಡಳ ಇನ್ನೂ ಹೆಚ್ಚಿನ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತದೆ. ಇದರ ಅನುಕೂಲ ಪಡೆದುಕೊಳ್ಳಬೇಕು. ಇಂಥ ಕಾರ್ಯಕ್ರಮಗಳಲ್ಲಿ ವಿಧಾನ ಮಂಡಲದಲ್ಲಿ ಆಗಿರುವ ಕಾನೂನು ತಿದ್ದುಪಡಿಗಳ ಸೇರಿದಂತೆ ಬೇರೆ ವಿಷಯಗಳ ಬಗ್ಗೆ ಪರಿಣಿತರು ಮಾಹಿತಿ ಕೊಡುತ್ತಾರೆ. ಇದರ ಸದುಪಯೋಗಪಡಿಸಿಕೊಳ್ಳುವಂತಾಗಬೇಕು ಎಂದರು.
ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳ ನಿರ್ದೇಶಕರಾದ ಅಶೋಕ ಪಟ್ಟಣಶೆಟ್ಟಿ, ಮಲ್ಲಮ್ಮ, ಎಸ್‌ಬಿಎಂ ಮಂಜು, ಹೆಚ್. ಜಯಪ್ರಕಾಶ್ ಕೆದ್ಲಾಯ ಮಾತನಾಡಿದರು. ಮಹಾಮಂಡಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪುಂಡಲಿಕ ಎನ್. ಕೆರೂರೆ ಮತ್ತಿತರರು ಇದ್ದರು.
ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಪಟ್ಟಣ ಸಹಕಾರ ಬ್ಯಾಂಕುಗಳ ಅಧ್ಯಕ್ಷರು, ಉಪಾಧ್ಯಕ್ಷರು, ಆಡಳಿತ ಮಂಡಳಿ ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ವಿಚಾರಸಂಕಿರಣದಲ್ಲಿ ಪಾಲ್ಗೊಂಡಿದ್ದರು. ಕೆಎಸ್‌ಸಿ ಕಾಯಿದೆಯ ಪ್ರಮುಖ ನಿಬಂಧನೆಗಳು ಮತ್ತು ಇತ್ತೀಚಿನ ತಿದ್ದುಪಡಿಗಳು ಹಾಗೂ ಸಹಕಾರ ಪಟ್ಟಣ ಬ್ಯಾಂಕುಗಳ ಆಡಳಿತ ಮಂಡಳಿ ನಿರ್ದೇಶಕರ ಪಾತ್ರದ ಬಗ್ಗೆ ಸಹಕಾರಿ ಸಂಘಗಳ ಮಾಜಿ ಹೆಚ್ಚುವರಿ ರಿಜಿಸ್ಟಾçರ್ ಹೆಚ್.ಎಸ್. ನಾಗರಾಜಯ್ಯ ಮಾತನಾಡಿದರೆ, ಆರ್‌ಬಿಐನ ಇತ್ತೀಚಿಗಿನ ಮಾರ್ಗಸೂಚಿಗಳು ಹಾಗೂ ತಂತ್ರಜ್ಞಾನ ಸೇರ್ಪಡೆ, ಎನ್‌ಪಿಸಿಐ ಮತ್ತು ಇತರ ಉತ್ಪನ್ನಗಳ ಪಾತ್ರದ ಬಗ್ಗೆ ಬ್ಯಾಂಕಿAಗ್ ಪರಿಣಿತ ಎಸ್.ಜಿ. ಕುಲಕರ್ಣಿ ಮಾಹಿತಿ ನೀಡಿದರು.