ಮಾಲ್ದಾರೆ ಪ್ರಾಥಮಿಕ ಶಾಲೆಯ ಶಿಕ್ಷಕಿ ಸೋನಿ ಅವರನ್ನು ಜನಪರ ಸಂಘಟನೆ ವತಿಯಿಂದ ಸನ್ಮಾನಿಸಲಾಯಿತು. ಅಧ್ಯಕ್ಷ ಭಾವ, ಎಸ್‌ಡಿಎಂಸಿ ಅಧ್ಯಕ್ಷ ಉಸ್ಮಾನ್, ಶಿಕ್ಷಣ ಇಲಾಖೆಯ ರುಕ್ಮಿಣಿ ಇತರರು ಇದ್ದರು.
ಮಾಲ್ದಾರೆ ಪ್ರಾಥಮಿಕ ಶಾಲೆಯ ಶಿಕ್ಷಕಿ ಸೋನಿ ಅವರ ಸುದೀರ್ಘ ಶೈಕ್ಷಣಿಕ ಹಾಗೂ ಕ್ರೀಡಾ ಸೇವೆಯನ್ನು ಪರಿಗಣಿಸಿ ಮಾಲ್ದಾರೆ ಜನಪರ ಸಂಘಟನೆ ವತಿಯಿಂದ ಇತ್ತೀಚೆಗೆ ಸನ್ಮಾನಿಸಲಾಯಿತು.
ಜನಪರ ಸಂಘಟನೆ ಅಧ್ಯಕ್ಷ ಭಾವ ಮಾತನಾಡಿ, ಶಿಕ್ಷಕಿ ಸೋನಿ ಅವರು ಕಳೆದ 20 ವರ್ಷಗಳಿಂದ ಮಾಲ್ದಾರೆ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಗ್ರಾಮೀಣ ಭಾಗದ ನೂರಾರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಇಂಗ್ಲಿಷ್ ಭಾಷಾ ತರಬೇತಿ ನೀಡುವ ಮೂಲಕ ಅವರ ಶೈಕ್ಷಣಿಕ ಬೆಳವಣಿಗೆಗೆ ಶ್ರಮಿಸಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಶಿಕ್ಷಣ ಪಡೆದ ಹಲವು ವಿದ್ಯಾರ್ಥಿಗಳು ಇಂದು ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಮಾಜದಲ್ಲಿ ಉತ್ತಮ ಬದುಕು ಕಟ್ಟಿಕೊಂಡಿದ್ದಾರೆ ಎಂದು ಹೇಳಿದರು
ಶಿಕ್ಷಣ ಕ್ಷೇತ್ರದ ಜತೆಗೆ ಕ್ರೀಡಾರಂಗದಲ್ಲೂ ಸಕ್ರಿಯರಾಗಿರುವ ಸೋನಿ ಅವರು ಉತ್ತಮ ವಾಲಿಬಾಲ್ ಆಟಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗೆ ಅವರಿಗೆ ವಿದ್ಯಾರತ್ನ ಪ್ರಶಸ್ತಿಯೂ ಲಭಿಸಿದ್ದು, ಅವರ 20 ವರ್ಷಗಳ ಶೈಕ್ಷಣಿಕ ಹಾಗೂ ಕ್ರೀಡಾ ಸೇವೆಯನ್ನು ಗುರುತಿಸಿ ಜನಪರ ಸಂಘದ ವತಿಯಿಂದ ಸನ್ಮಾನಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಉಸ್ಮಾನ್, ಶಿಕ್ಷಣ ಇಲಾಖೆಯ ರುಕ್ಮಿಣಿ, ಗ್ರಾಪಂ ಮಾಜಿ ಉಪಾಧ್ಯಕ್ಷ ಕುಂಜಣ್ಣ, ಆಟೋ ಚಾಲಕರ ಸಂಘದ ಅಧ್ಯಕ್ಷ ಇಬ್ರಾಹಿಂ, ಗ್ರಾಮಸ್ಥರಾದ ಮಣಿ, ಮುಸ್ತಫ, ಪ್ರೌಢಶಾಲೆ ಮುಖ್ಯ ಶಿಕ್ಷಕಿ ಈಶ್ವರಿ, ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ವಿಜಯಕುಮಾರ್, ಜನಪರ ಸಂಘದ ಮಾಜಿ ಅಧ್ಯಕ್ಷ ಅಂತೋಣಿ, ಸದಸ್ಯ ಪ್ರವೀಣ್ ಇದ್ದರು.