ತನಿಷ್ಕಾಗೆ ನಾಟ್ಯರತ್ನ ರಾಷ್ಟ್ರೀಯ ಪ್ರಶಸ್ತಿ

ನ್ಯಾಷನಲ್ ಕ್ಲಾಸಿಕ್ ಅಕಾಡೆಮಿ ಸದಸ್ಯರಿಂದ ನಾಟ್ಯ ರತ್ನ ಪ್ರಶಸ್ತಿ ಸ್ವೀಕರಿಸುತ್ತಿರುವ ಪೊನ್ನಂಪೇಟೆಯ ತನಿಷ್ಕಾ.
ನ್ಯಾಷನಲ್ ಕ್ಲಾಸಿಕ್ ಅಕಾಡೆಮಿ ಸದಸ್ಯರಿಂದ ನಾಟ್ಯ ರತ್ನ ಪ್ರಶಸ್ತಿ ಸ್ವೀಕರಿಸುತ್ತಿರುವ ಪೊನ್ನಂಪೇಟೆಯ ತನಿಷ್ಕಾ.
Published on
ಪೊನ್ನಂಪೇಟೆ: ನ್ಯಾಷನಲ್ ಕ್ಲಾಸಿಕಲ್ ಡಾನ್ಸ್ ಅಕಾಡೆಮಿ ವತಿಯಿಂದ ತುಮಕೂರು ಬಾಲಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ 70ನೇ ಆಲ್ ಇಂಡಿಯಾ ಕ್ಲಾಸಿಕಲ್ ಡಾನ್ಸ್ ಫೆಸ್ಟಿವಲ್‌ನಲ್ಲಿ ನಾಟ್ಯ ರತ್ನ ರಾಷ್ಟ್ರೀಯ ಪ್ರಶಸ್ತಿಗೆ ಪೊನ್ನಂಪೇಟೆಯ ಟಿ.ಎಚ್.ತನಿಷ್ಕಾ ಭಾಜನಳಾಗಿದ್ದಾಳೆ.
ಈಕೆ ಪೊನ್ನಂಪೇಟೆ ಸಂತ ಅಂತೋಣಿ ಶಾಲೆಯ 5 ನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಪಿ.ಎ.ಮಿನಿ ಹಾಗೂ ಟಿ.ಎಸ್.ಹರೀಶ್ ದಂಪತಿ ಪುತ್ರಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net