ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕು ಒಕ್ಕಲಿಗರ ಸಂಘದ ಸಭೆ ಅಧ್ಯಕ್ಷ ಕಾರ್ಮಾಡು ಸುಬ್ರಹ್ಮಣ್ಯ (ಸುಬ್ಬಣ್ಣ) ನೇತೃತ್ವದಲ್ಲಿ ನಡೆಯಿತು. ವಿ.ಎಲ್. ಸುರೇಶ್, ಕೆ.ಪಿ. ನಾಗರಾಜು, ಕೆ.ಆರ್. ಸುರೇಶ್, ವಿ.ಪಿ. ರಾಜ, ಹೆಚ್.ಎ. ಗಣೇಶ್, ಬಸವರಾಜ್, ಪದ್ಮಾ ಇದ್ದರು.
Published on:
Copied
Follow Us
ಮಡಿಕೇರಿ:
ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಕಾರ್ಮಾಡು ಸುಬ್ರಹ್ಮಣ್ಯ (ಸುಬ್ಬಣ್ಣ) ನೇತೃತ್ವದಲ್ಲಿ ಮಂಗಳವಾರ ವಿರಾಜಪೇಟೆ ನಗರದಲ್ಲಿ ಸಂಘದ ಸಭೆ ನಡೆಸಲಾಯಿತು. ತೆರುವಾಗಿರುವ ಕೆಲವು ಗ್ರಾಮಗಳಿಗೆ ಸಭೆಯಲ್ಲಿ ನಿರ್ದೇಶಕರನ್ನು ಆಯ್ಕೆ ಮಾಡಲಾಯಿತು. ಮಗ್ಗುಲ ಗ್ರಾಮದಿಂದ ಹಿರಿಯ ವಕೀಲ ವಿ.ಪಿ. ರಮೇಶ್ ಅವರನ್ನು ನಿರ್ದೇಶಕ ಮತ್ತು ಕಾನೂನು ಸಲಹೆಗಾರರಾಗಿ, ಮೈತಾಡಿ ಗ್ರಾಮದಿಂದ ಯುವ ವೇದಿಕೆ ಮಾಜಿ ಅಧ್ಯಕ್ಷ ವಿ.ಪಿ. ಲೋಹಿತ್ ಗೌಡ ಅವರನ್ನು ನಿರ್ದೇಶಕರಾಗಿ ನೇಮಕ ಮಾಡಿಕೊಳ್ಳಲಾಯಿತು.
ಈ ಸಂಸದರ್ಭ ಮಾತನಾಡಿದ ಪ್ರಧಾನ ಕಾರ್ಯದರ್ಶಿ ಕೊಟ್ಟೆಕೊಪ್ಪ ಗ್ರಾಮದ ವಿ.ಎಲ್. ಸುರೇಶ್, ಸಂಘವು ಇನ್ನು ಮುಂದೆ ಸಕ್ರೀಯವಾಗಿ ನಡೆಯುವಂತೆ ಎಲ್ಲಾ ರೀತಿಯಲ್ಲಿ ಆಡಿಟ್ ಮತ್ತು ರಿನಿವಲ್ ಆಗಿದ್ದು ಮುಂದಿನ ದಿನಗಳಲ್ಲಿ ಸಮಾಜದ ಮುಖ್ಯವಾಹಿನಿಯಲ್ಲಿ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತದೆ ಎಂದರು. ಅಧ್ಯಕ್ಷ ಸುಬ್ಬಣ್ಣ ಮಾತನಾಡಿ ಸಂಘವು ಹಲವು ತೊಡಕುಗಳನ್ನು ನಿವಾರಿಸಿಕೊಂಡು ಸಾಗುತ್ತಿದೆ. ಮುಂದೆ ಕೂಡ ಆಡಳಿತ ಮಂಡಳಿಯ ಎಲ್ಲರ ವಿಶ್ವಾಸದೊಂದಿಗೆ ಸಮುದಾಯದ ಹಿರಿಯರು, ಮುಖಂಡರು ಸ್ವಾಮೀಜಿಗಳೊಂದಿಗೆ ಚರ್ಚಿಸಿ ಜನಪರ ಸೇವೆ ಮಾಡಲು ಪ್ರವೃತ್ತರಾಗುತ್ತೇವೆ ಎಂದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಕಣ್ಣಂಗಾಲ ಗ್ರಾಮದ ಕೆ.ಪಿ. ನಾಗರಾಜು, ಕೋತೂರಿನ ಮಾಜಿ ಪ್ರಧಾನ ಕಾರ್ಯದರ್ಶಿ ಕೆ.ಆರ್. ಸುರೇಶ್, ಕೈಕೇರಿಯ ವಿ.ಪಿ. ರಾಜ, ಹಾತೂರಿನ ಹೆಚ್.ಎ. ಗಣೇಶ್, ಕೋತೂರಿನ ಬಸವರಾಜ್ ಮತ್ತು ನಿರ್ದೇಶಕಿ ಪದ್ಮಾ ಇದ್ದರು.