ಕುಶಾಲನಗರದಲ್ಲಿ ತಾಲೂಕು ಕಾನೂನು ಸೇವಾ ಪ್ರಾಧಿಕಾರ ಆರಂಭ

ನೂತನವಾಗಿ ಸ್ಥಾಪನೆಯಾಗಿರುವ ಕುಶಾಲನಗರ ತಾಲೂಕು ಕಾನೂನು ಸೇವಾ ಪ್ರಾಧಿಕಾರವನ್ನು ಕೊಡಗು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೂ ಆದ ಹಿರಿಯ ನ್ಯಾಯಾಧೀಶೆÀ ಶುಭಾ ಉದ್ಘಾಟಿಸಿದರು. ಆರ್.ಕೆ. ನಾಗೇಂದ್ರ ಬಾಬು, ರೇಖಾ, ಎಲ್. ಚೈತ್ರ, ಕೆ.ಪಿ. ಹೇಮಂತ್, ಕಿರಣ್ ಜಿ. ಗೌರಯ್ಯ, ಟಿ.ಎಸ್. ಗಿರೀಶ್ ಮತ್ತಿತರರು ಇದ್ದರು.
ನೂತನವಾಗಿ ಸ್ಥಾಪನೆಯಾಗಿರುವ ಕುಶಾಲನಗರ ತಾಲೂಕು ಕಾನೂನು ಸೇವಾ ಪ್ರಾಧಿಕಾರವನ್ನು ಕೊಡಗು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೂ ಆದ ಹಿರಿಯ ನ್ಯಾಯಾಧೀಶೆÀ ಶುಭಾ ಉದ್ಘಾಟಿಸಿದರು. ಆರ್.ಕೆ. ನಾಗೇಂದ್ರ ಬಾಬು, ರೇಖಾ, ಎಲ್. ಚೈತ್ರ, ಕೆ.ಪಿ. ಹೇಮಂತ್, ಕಿರಣ್ ಜಿ. ಗೌರಯ್ಯ, ಟಿ.ಎಸ್. ಗಿರೀಶ್ ಮತ್ತಿತರರು ಇದ್ದರು.
Published on
ಕುಶಾಲನಗರ:
ಸಮಾಜದ ದುರ್ಬಲ ವರ್ಗದವರಿಗೆ ಉಚಿತ ಮತ್ತು ಸಮರ್ಥ ಕಾನೂನು ನೆರವು ಒದಗಿಸಲು ಹಾಗೂ ಲೋಕ ಅದಾಲತ್ ಮೂಲಕ ವಿವಾದಗಳನ್ನು ಬಗೆಹರಿಸಲು ಕಾನೂನು ಸೇವಾ ಪ್ರಾಧಿಕಾರ ಸ್ಥಾಪಿಸಲಾಗಿದೆ ಎಂದು ಕೊಡಗು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೂ ಆದ ಹಿರಿಯ ನ್ಯಾಯಾಧೀಶೆ ಶುಭಾ ಹೇಳಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕೊಡಗು, ಮಡಿಕೇರಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ವತಿಯಿಂದ ಇಲ್ಲಿನ ನ್ಯಾಯಾಲಯ ಸಂಕೀರ್ಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನೂತನವಾಗಿ ಸ್ಥಾಪನೆಯಾಗಿರುವ ತಾಲೂಕು ಕಾನೂನು ಸೇವಾ ಪ್ರಾಧಿಕಾರ ಉದ್ಘಾಟಿಸಿ ಮಾತನಾಡಿದರು.
ಕಾನೂನು ಸೇವೆಗಳ ಕಾಯಿದೆ 1987 ಮೂಲಭೂತವಾಗಿ ಸಮಾಜದ ದುರ್ಬಲ ವರ್ಗಗಳಿಗೆ ಉಚಿತ ಮತ್ತು ಸಮರ್ಥ ಕಾನೂನು ಸೇವೆ ಒದಗಿಸುವ ಗುರಿ ಹೊಂದಿದೆ. ಸ್ಥಳೀಯ ಕುಂದು ಕೊರತೆಗಳನ್ನು ನಿವಾರಿಸಿ ಜನಸಾಮಾನ್ಯರಿಗೆ, ಬಡವರಿಗೆ ನ್ಯಾಯ ಒದಗಿಸುವ ಜವಾಬ್ದಾರಿ ವಕೀಲರ ಮೇಲಿದೆ. ಪ್ರತಿಯೊಬ್ಬರೂ ಪ್ರಾಧಿಕಾರದ ಸೇವೆಯನ್ನು ಸದುಪಯೋಗ ಪಡಿಸಿಕೊಂಡು ತಮ್ಮ ವ್ಯಾಜ್ಯವನ್ನು ಬೇಗ ಮುಗಿಸಿಕೊಳ್ಳಬೇಕು ಎಂದರು.
ಕುಶಾಲನಗರ ವಕೀಲರ ಸಂಘದ ಅಧ್ಯಕ್ಷ ಆರ್.ಕೆ. ನಾಗೇಂದ್ರ ಬಾಬು ಮಾತನಾಡಿ, ನಿರಾಪರಾಧಿಗಳನ್ನು ಅಪರಾಧಿಗಳು ಎಂದು ಬಿಂಬಿಸುವ ಇಂದಿನ ಸಮಾಜದಲ್ಲಿ ಅವರಿಗೆ ಸೂಕ್ತ ನ್ಯಾಯ ಒದಗಿಸಲು ನ್ಯಾಯಾಲಯಗಳ ಅವಶ್ಯಕತೆ ಇದೆ. ಪ್ರಾಧಿಕಾರ ಆರ್ಯುವೇದಿಕ್ ಆಸ್ಪತ್ರೆ ಇದ್ದಂತೆ. ನ್ಯಾಯಾಲಯ ಸರ್ಕಾರಿ ಆಸ್ಪತ್ರೆ ಇದ್ದಂತೆ. ಆದ್ದರಿಂದ ನ್ಯಾಯಲಯದಲ್ಲಿ ವ್ಯಾಜ್ಯಗಳನ್ನು ದೀರ್ಘಕಾಲ ಮುಂದುವರೆಸುವ ಬದಲು ಪ್ರಾಧಿಕಾರದ ಮೂಲಕ ಇತ್ಯರ್ಥ ಪಡಿಸಿಕೊಳ್ಳಲು ಎಲ್ಲರು ಪ್ರಯತ್ನಿಸಬೇಕು ಎಂದು ಹೇಳಿದರು.
ಕುಶಾಲನಗರ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರೂ ಆದ ಸಿವಿಲ್ ಹಿರಿಯ ನ್ಯಾಯಾಧೀಶೆ ರೇಖಾ, ಕುಶಾಲನಗರ ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿಯೂ ಆದ ಸಿವಿಲ್ ನ್ಯಾಯಾಧೀಶೆ ಎಲ್. ಚೈತ್ರ ಮಾತನಾಡಿದರು.
ಸಿವಿಲ್ ನ್ಯಾಯಾಲಯದ ಸಹಾಯಕ ಸರ್ಕಾರಿ ಅಭಿಯೋಜಕ ಕೆ.ಪಿ. ಹೇಮಂತ್, ತಹಸೀಲ್ದಾರ್ ಕಿರಣ್ ಜಿ. ಗೌರಯ್ಯ, ಪುರಸಭೆ ಮುಖ್ಯಾಧಿಕಾರಿ ಟಿ.ಎಸ್. ಗಿರೀಶ್ ಮತ್ತಿತರರು ಈ ಸಂದರ್ಭ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net