ಸೋಮವಾರಪೇಟೆ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ಕೂತಿ ಗ್ರಾಮದ ತಮ್ಮೇಗೌಡ ಗೌರಮ್ಮ ಸೌಹಾರ್ದ ಟ್ರಸ್ಟ್‌ನ ಎರಡನೇ ವರ್ಷದ ವಾರ್ಷಿಕ ಸಭೆಯನ್ನು ಈರಮ್ಮ ನಿಂಗೇಗೌಡ ಉದ್ಘಾಟಿಸಿದರು. ಜೋಯಪ್ಪ, ಬೆಳ್ಳಿಗೌಡ, ಜೋಯಪ್ಪ ಇದ್ದರು.
ಸೋಮವಾರಪೇಟೆ: ಕೂತಿ ಗ್ರಾಮದ ತಮ್ಮೇಗೌಡ ಗೌರಮ್ಮ ಸೌಹಾರ್ದ ಟ್ರಸ್ಟ್‌ನ ಎರಡನೇ ವರ್ಷದ ವಾರ್ಷಿಕ ಸಭೆ ಒಕ್ಕಲಿಗರ ಸಮುದಾಯ ಭವನದಲ್ಲಿ ಈಚೆಗೆ ನಡೆಯಿತು.
ಕಾರ್ಯಕ್ರಮವನ್ನು ಈರಮ್ಮ ನಿಂಗೇಗೌಡ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಟ್ರಸ್ಟ್ ಅಧ್ಯಕ್ಷ ಕಾಮನಹಳ್ಳಿ ಕೆ.ಟಿ. ವೀರೇಶ್‌ಗೌಡ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕುಟುಂಬದ ಹಿರಿಯ ಸದಸ್ಯರಾದ ಕೂತಿ ಗ್ರಾಮದ ಜಯಮ್ಮ ಜೋಯಪ್ಪ, ಕರಡಿಕೊಪ್ಪ ಗ್ರಾಮದ ಅಕ್ಕಮ್ಮ ಪುಟ್ಟಪ್ಪ ಅವರನ್ನು ಸನ್ಮಾನಿಸಲಾಯಿತು. ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಪ್ರಮುಖರಾದ ಕೆ.ಟಿ.ಜೋಯಪ್ಪ ಪಟ್ಟೆದಾರ್, ಗೌರವ ಅಧ್ಯಕ್ಷ ಕಾಮನಹಳ್ಳಿ ಬೆಳ್ಳಿಗೌಡ, ಉಪಾಧ್ಯಕ್ಷ ಸಿ.ಕೆ.ಮಲ್ಲಪ್ಪ, ಕಾರ್ಯದರ್ಶಿ ಟಿ.ಕೆ.ರಾಜಶೇಖರ್, ಖಜಾಂಜಿ ಎಸ್.ಡಿ.ಪರಮೇಶ್, ಮಂಜೂರು ವಸಂತ ಇದ್ದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.