ದೆಹಲಿ ಪ್ರತಿಭಟನೆಗೆ ವಿರಾಜಪೇಟೆಯಲ್ಲಿ ಬೆಂಬಲ

ಸಿಜೆಪಿಪ್ರತಿಭಟನೆ ಬೆಂಬಲಿಸಿ ಅಬ್ದುಲ್ ಸಲೀಂ ನೇತ್ರತ್ವದಲ್ಲಿ ವಿರಾಜಪೇಟೆಯಲ್ಲಿ ಶಾಂತಿಯುತ ಪ್ರತಿಭಟನೆ ಮತ್ತು ಜಾಗೃತಿ ಅಭಿಯಾನ ನಡೆಯಿತು.
ಸಿಜೆಪಿಪ್ರತಿಭಟನೆ ಬೆಂಬಲಿಸಿ ಅಬ್ದುಲ್ ಸಲೀಂ ನೇತ್ರತ್ವದಲ್ಲಿ ವಿರಾಜಪೇಟೆಯಲ್ಲಿ ಶಾಂತಿಯುತ ಪ್ರತಿಭಟನೆ ಮತ್ತು ಜಾಗೃತಿ ಅಭಿಯಾನ ನಡೆಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಸೋನಮ್ ವಾಂಗ್ಚುಕ್, ಸಿಜೆಪಿ ಬೆಂಬಲಿಗರಿಂದ ಜಾಗೃತಿ ಅಭಿಮಾನ
ವಿರಾಜಪೇಟೆ: ದೇಶದ ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆ ತರುವುದರ ಜತೆಗೆ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆ ಬೆಂಬಲಿಸಿ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಮತ್ತು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಬೆಂಬಲಿಗರು ಇಲ್ಲಿನ ಗಡಿಯಾರ ಕಂಬದ ಬಳಿ ಪ್ರತಿಭಟನೆ ನಡೆಸಿದರು.
ನವದೆಹಲಿಯಲ್ಲಿ ನಡೆಯುತ್ತಿರುವ ಯುವ ಪ್ರತಿಭಟನಾಕಾರರನ್ನು ಬೆಂಬಲಿಸಿ ಇಲ್ಲಿನ ಕೆಲವು ನಿವಾಸಿಗಳು ಶಾಂತಿಯುತ ಪ್ರತಿಭಟನೆ ನಡೆಸುವುದರೊಂದಿಗೆ ಜಾಗೃತಿ ಅಭಿಯಾನ ನಡೆಸಿದರು. ಸಿಜೆಪಿ ಬೆಂಬಲಿಸಿ ದೆಹಲಿಯ ಜಂತರ್‌ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಇಂಜಿನಿಯರ್ ಮತ್ತು ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರಿಗೆ ಸಭೆ ಬೆಂಬಲ ವ್ಯಕ್ತಪಡಿಸಿತು.
ವಿರಾಜಪೇಟೆ ನಿವಾಸಿ ಸಫ್ವಾನ್ ಅಬ್ದುಲ್ ಸಲೀಮ್ ಮಾತನಾಡಿ, ಈ ಪ್ರತಿಭಟನೆಯು ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆಯ ಪರಿಣಾಮವನ್ನು ಎತ್ತಿ ತೋರಿಸುವುದಾಗಿದೆ ಎಂದು ಹೇಳಿದರು.
ನೀಟ್-ಯುಜಿ ಪತ್ರಿಕೆ ಸೋರಿಕೆ ವಿವಾದ ಮತ್ತು ಪದೇ ಪದೆ ಪರೀಕ್ಷೆ ರದ್ದತಿಯಿಂದ ಉಂಟಾದ ಒತ್ತಡದಿಂದ ಹಲವಾರು ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದಾರೆ. ದೇಶಾದ್ಯಂತ ವಿದ್ಯಾರ್ಥಿಗಳೊಂದಿಗೆ ನಿಲ್ಲಲು ಜಾಗೃತಿ ಅಭಿಯಾನ ಆಯೋಜಿಸಿದ್ದೇವೆ. ಪರೀಕ್ಷಾ ಪತ್ರಿಕೆಗಳು ಏಕೆ ಸೋರಿಕೆಯಾಗುತ್ತಿವೆ ಎಂಬುದರ ಕುರಿತು ಶಿಕ್ಷಣ ಸಚಿವರಿಂದ ನಾವು ಹೊಣೆಗಾರಿಕೆಯನ್ನು ಬಯಸುತ್ತೇವೆ. ವಿರಾಜಪೇಟೆ ಯುವಕರು ದೆಹಲಿಯಲ್ಲಿ ಮೆರವಣಿಗೆ ನಡೆಸುತ್ತಿರುವವರೊಂದಿಗೆ ಒಗ್ಗಟ್ಟಿನಿಂದ ನಿಂತಿದ್ದಾರೆ ಎಂದು ಹೇಳಿದರು.
ವಿರಾಜಪೇಟೆಯಲ್ಲಿ ನಡೆದ ಜಾಗೃತಿ ಆಂದೋಲನ ಯಾವುದೇ ರಾಜಕೀಯ ಪಕ್ಷ ಅಥವಾ ಧರ್ಮಕ್ಕೆ ಸಂಬಂಧಿಸಿದ್ದಲ್ಲ. ನಾವು ಈ ದೇಶದ ವಿದ್ಯಾರ್ಥಿಗಳು ಮತ್ತು ಯುವಕರಿಗಾಗಿ ಮಾತ್ರ ಇಲ್ಲಿದ್ದೇವೆ. ನಮ್ಮ ಪ್ರತಿಭಟನೆ ಅವರ ಭವಿಷ್ಯವನ್ನು ರಕ್ಷಿಸುವುದು ಮತ್ತು ನ್ಯಾಯಯುತ ಪರೀಕ್ಷಾ ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳುವುದು ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net