ಪರಿವಾರ ದೇವರುಗಳ 48ನೇ ವಾರ್ಷಿಕ ಮಹೋತ್ಸವ ಸಂಪನ್ನ

ಕೊಡಗರಹಳ್ಳಿಯ ಕುಂದೂರುಮೊಟ್ಟೆ ಚಾಮುಂಡೇಶ್ವರಿ ಸೇವಾ ಸಮಿತಿ ವತಿಯಿಂದ ಅಯೋಜಿತ ಶ್ರೀವಿಷ್ಣುಮೂರ್ತಿ ಕೋಲ, ಶ್ರೀಚಾಮುಂಡೇಶ್ವರಿ, ಶ್ರೀರಕ್ತೇಶ್ವರಿ ಪರಿವಾರ ದೇವರುಗಳ ಕೋಲಗಳು.
ಕೊಡಗರಹಳ್ಳಿಯ ಕುಂದೂರುಮೊಟ್ಟೆ ಚಾಮುಂಡೇಶ್ವರಿ ಸೇವಾ ಸಮಿತಿ ವತಿಯಿಂದ ಅಯೋಜಿತ ಶ್ರೀವಿಷ್ಣುಮೂರ್ತಿ ಕೋಲ, ಶ್ರೀಚಾಮುಂಡೇಶ್ವರಿ, ಶ್ರೀರಕ್ತೇಶ್ವರಿ ಪರಿವಾರ ದೇವರುಗಳ ಕೋಲಗಳು.
Published on
ಸುಂಟಿಕೊಪ್ಪ: ಕೊಡಗರಹಳ್ಳಿಯ ಕುಂದೂರುಮೊಟ್ಟೆ ಚಾಮುಂಡೇಶ್ವರಿ ಸೇವಾ ಸಮಿತಿ ವತಿಯಿಂದ ಶ್ರೀಮಹಾವಿಷ್ಣು, ಶ್ರೀಚಾಮುಂಡೇಶ್ವರಿ, ಶ್ರೀರಕ್ತೇಶ್ವರಿ ಪರಿವಾರ ದೇವರುಗಳ 48ನೇ ವಾರ್ಷಿಕ ಮಹೋತ್ಸವ ಏ.13ರಿಂದ 22ರವರೆಗೆ ವಿವಿಧ ಪೂಜೆ ಮತ್ತು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆದು ಬುಧವಾರ ಸಂಪನ್ನಗೊಂಡಿತು.
ಏ.13ರಂದು ಸಂಜೆ ಶ್ರೀಮುನೇಶ್ವರ ಪೂಜೆಯೊಂದಿಗೆ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಏ.14ರಂದು ಮಹಾಚಂಡಿಕಾಯಾಗ ನಡೆದು ಅನ್ನ ಸಂತರ್ಪಣೆ ಕಾರ್ಯ ನಡೆಯಿತು.
ಏ.17ರಂದು ಶ್ರೀಮಹಾವಿಷ್ಣುವಿನ ಪೂಜೆ, ಏ.20ರಂದು ಗಣಪತಿ ಹೋಮ ಮತ್ತು ಕೊಡಿ ಏರಿಸುವುದರೊಂದಿಗೆ ಪೂಜಾ ಕಾರ್ಯಕ್ರಮಗಳು ಚಾಲನೆ ದೊರೆಯಿತು. ಅನಂತರ ಸಂಜೆ ದೀಪಾರಾಧನೆ ಏಳು ಸುತ್ತಿನ ಪ್ರದಕ್ಷಿಣೆ ಹಾಗೂ ಶ್ರೀಚಾಮುಂಡಿ ತಂಡದಿಂದ ಚಂಡೆ ಮೇಳ ಜರುಗಿತು. ಮಂಗಳವಾರ ಶ್ರೀಚಾಮುಂಡೇಶ್ವರಿ ದೇವಿಯ ಅಭಿಷೇಕ, ಪೂಜೆ ನಡೆಯಿತು.
22ರಂದು ಅಜ್ಜಪ್ಪ ಕೋಲ, ವಿಷ್ಣುಮೂರ್ತಿ ಕೋಲ, ರಕ್ತೇಶ್ವರಿ ಹಾಗೂ ಚಾಮುಂಡೇಶ್ವರಿ ಕೋಲದೊಂದಿಗೆ ರಾತ್ರಿ 8 ಗಂಟೆಗೆ ಶ್ರೀದೇವಿ ನೈವೇದ್ಯದೊಂದಿಗೆ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ತೆರೆ ಬಿದ್ದಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net