ಸುಂಟಿಕೊಪ್ಪ ಸಮೀಪದ ಕಂಬಿಬಾಣೆಯ ಶ್ರೀ ರಾಮ ಮತ್ತು ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಸಭಾಭವನ ನಿರ್ಮಾಣಕ್ಕೆ ಶನಿವಾರ ಕಾಫಿಬೆಳೆಗಾರ ಹಾಗೂ ದಾನಿ ಟಿ.ಕೆ.ಸಂಜೀವ ಭೂಮಿ ಪೂಜೆ ನೇರವೇರಿಸಿದರು. ದೇಗುಲ ಸಮಿತಿ ಅಧ್ಯಕ್ಷ ಡಾ.ಶಶಿಕಾಂತ ರೈ, ಕಾರ್ಯದರ್ಶಿ ಗಣೇಶ್, ಖಜಾಂಜಿ ಅಜಿತ್, ಮಾತೃಮಂಡಳಿ ಸದಸ್ಯರಾದ ಪೂರ್ಣಿಮಾ, ಮೀನಾ ಹರೀಶ್ ಇದ್ದರು.
ಸುಂಟಿಕೊಪ್ಪ : ಕಂಬಿಬಾಣೆಯ ಶ್ರೀ ರಾಮ ಮತ್ತು ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಸಭಾಭವನ ನಿರ್ಮಾಣಕ್ಕೆ ಕಾಫಿಬೆಳೆಗಾರ ಹಾಗೂ ದಾನಿ ಟಿ.ಕೆ.ಸಂಜೀವ ಶನಿವಾರ ಭೂಮಿ ಪೂಜೆಯನ್ನು ನೇರವೇರಿಸಿದರು.
ದೇವಸ್ಥಾನದ ಆವರಣದಲ್ಲಿ 10 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಭವನ ನಿರ್ಮಾಣವಾಗಲಿದೆ. ಧಾರ್ಮಿಕ ಮತ್ತು ಕೌಟುಂಬಿಕ ಶುಭ ಕಾರ್ಯಗಳಿಗೆ ಇದು ಸದ್ಬಳಕೆ ಆಗಲಿದೆ ಎಂದು ಅವರುಈ ಸಂದರ್ಭದಲ್ಲಿ ತಿಳಿಸಿದರು.
ದೇವಾಲಯದ ಅರ್ಚಕ ಪ್ರಭಾಕರ್‌ಭಟ್ ಪೂಜಾ ವಿಧಿಗಳನ್ನು ನೆರವೇರಿಸಿದರು.
ಈ ಸಂದರ್ಭ ಶ್ರೀ ರಾಮ ಮತ್ತು ಚಾಮುಂಡೇಶ್ವರಿ ದೇವಸ್ಥಾನ ಸಮಿತಿ ಅಧ್ಯಕ್ಷ ಡಾ.ಶಶಿಕಾಂತ ರೈ, ಕಾರ್ಯದರ್ಶಿ ಗಣೇಶ್, ಖಜಾಂಜಿ ಅಜಿತ್, ಸಾಬು ಪಳಂಗಪ್ಪ, ಜಯಂತ್,ಗಂಗಾಧರ್, ರವಿಕುಮಾರ್, ಮಾತೃಮಂಡಳಿ ಸದಸ್ಯರಾದ ಪೂರ್ಣಿಮಾ, ಮೀನಾ ಹರೀಶ್, ರಮಣಿ, ಸುಧಾ ಹಾಗೂ ಭಕ್ತರು ಉಪಸ್ಥಿತರಿದ್ದರು.