ಸೋಮವಾರಪೇಟೆ: ಕಾಫಿ ತೋಟಗಳ ಲೈನ್‌ಮನೆಯಲ್ಲಿ ವಾಸವಿರುವ ಹೊರರಾಜ್ಯದ ಕಾರ್ಮಿಕರ ಪೂರ್ಣ ವಿವರವನ್ನು ಸ್ಥಳೀಯ ಪೊಲೀಸ್ ಠಾಣೆಗಳಿಗೆ ತೋಟದ ಮಾಲೀಕರು ನೀಡಬೇಕು ಎಂದು ಇನ್‌ಸ್ಪೆಕ್ಟರ್ ಮುದ್ದುಮಹದೇವ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಕಾಫಿ ಬೆಳೆಗಾರರೊಂದಿಗೆ ಇತ್ತೀಚೆಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ, ಕಾರ್ಮಿಕರು ಹಾಗೂ ಅವರ ಮಕ್ಕಳ ಸುರಕ್ಷತೆಗೂ ಮಹತ್ವ ನೀಡಬೇಕು. ಪ್ರತಿ ಘಟನೆಗೂ ಮಾಲೀಕರೇ ಜವಾಬ್ದಾರಿಯಾಗುತ್ತಾರೆ ಎಂದು ತಿಳಿಸಿದರು.
ರೈತ ಸಂಘದ ಅಧ್ಯಕ್ಷ ಕೆ.ಎಂ.ದಿನೇಶ್, ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಎಂ.ಲವ, ಸದಸ್ಯರಾದ ಬಿ.ಎಂ.ಸುರೇಶ್, ಸಿ.ಕೆ.ಮಲ್ಲಪ್ಪ, ಸಿ.ಕೆ.ರೋಹಿತ್, ತಾಕೇರಿ ಪೊನ್ನಪ್ಪ, ಗೌಡಳ್ಳಿ ಪ್ರಸಿ, ಸೋಮಶೇಖರ್ ಮತ್ತಿತರರು ಇದ್ದರು.