ಗ್ರಾಮ ಪಂಚಾಯಿತಿಗೆ ವಿದ್ಯಾರ್ಥಿಗಳ ಭೇಟಿ

ಹಾಕತ್ತೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಹೊಸಕೇರಿ ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿ ನೀಡಿ ಪಂಚಾಯಿತಿಯ ಆಡಳಿತ ಹಾಗೂ ಸೌಲಭ್ಯ, ಕೆಲಸ ಕಾರ್ಯಗಳ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಂಡರು. ಕುಮಾರಸ್ವಾಮಿ, ಸರಸ್ವತಿ ಇತರರಿದ್ದರು.
ಹಾಕತ್ತೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಹೊಸಕೇರಿ ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿ ನೀಡಿ ಪಂಚಾಯಿತಿಯ ಆಡಳಿತ ಹಾಗೂ ಸೌಲಭ್ಯ, ಕೆಲಸ ಕಾರ್ಯಗಳ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಂಡರು. ಕುಮಾರಸ್ವಾಮಿ, ಸರಸ್ವತಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪಂಚಾಯಿತಿಯ ಆಡಳಿತ ಹಾಗೂ ಸೌಲಭ್ಯ, ಕೆಲಸ ಕಾರ್ಯಗಳ ಬಗ್ಗೆ ಸಮಗ್ರ ಮಾಹಿತಿ
ನಾಪೋಕ್ಲು: ಹಾಕತ್ತೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಹೊಸಕೇರಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಪಂಚಾಯಿತಿಯ ಆಡಳಿತ ಹಾಗೂ ಸೌಲಭ್ಯ, ಕೆಲಸ ಕಾರ್ಯಗಳ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಂಡರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಿ.ಬಿ.ಕವಿತಾ, ಉಪಾಧ್ಯಕ್ಷ ಎಂ.ಬಿ. ಚಿದಂಬರ ಹಾಗೂ ಸದಸ್ಯರೊಂದಿಗೆ ವಿದ್ಯಾರ್ಥಿಗಳ ಸಭೆ ನಡೆಯಿತು. ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಬ್ದುಲ್ಲಾ ಅವರು, ಗ್ರಾಮ ಪಂಚಾಯಿತಿಯ ಕೆಲಸ ಕಾರ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಗ್ರಾಮ ಪಂಚಾಯಿತಿಯ ಅಧಿಕಾರ, ಗ್ರಾಮ ಅಭಿವೃದ್ಧಿಯ ಮೂಲಕ ಜನರಿಗೆ ಹೇಗೆ ಸೇವೆ ಸಲ್ಲಿಸುತ್ತದೆ ಎಂಬುದನ್ನು ತಿಳಿಸಿದರು. ನಂತರ ಗ್ರಂಥಾಲಯದಲ್ಲಿರುವ 6000 ಪುಸ್ತಕಗಳ ಜೋಡಣೆಯನ್ನು ನೋಡಿ ವಿಸ್ಮಿತರಾದರು. ಕೆಲವೊಂದು ಪುಸ್ತಕಗಳ ಬಗ್ಗೆ ಶಿಕ್ಷಕರಿಂದ ಮಾಹಿತಿ ಪಡೆದುಕೊಂಡರು. ಮುಖ್ಯ ಶಿಕ್ಷಕ ಟಿ.ಬಿ.ಕುಮಾರಸ್ವಾಮಿ, ಅತಿಥಿ ಶಿಕ್ಷಕಿ ಸರಸ್ವತಿ, ಪಂಚಾಯತಿ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net