ಭತ್ತ ನಾಟಿ ಮಾಡಿ ಖುಷಿ ಪಟ್ಟ ವಿದ್ಯಾರ್ಥಿಗಳು

ನಾಟಿ ಉತ್ಸವದಲ್ಲಿ ದ್ಯಾರ್ಥಿಗಳು ಪಾಲ್ಗೊಂಡು ಭತ್ತದ ನಾಟಿ ಬಗ್ಗೆ ಅನುಭವ ಪಡೆದುಕೊಂಡರು.
ನಾಟಿ ಉತ್ಸವದಲ್ಲಿ ದ್ಯಾರ್ಥಿಗಳು ಪಾಲ್ಗೊಂಡು ಭತ್ತದ ನಾಟಿ ಬಗ್ಗೆ ಅನುಭವ ಪಡೆದುಕೊಂಡರು.
Published on

ಸುಂಟಿಕೊಪ್ಪ: ಭತ್ತದ ಕೃಷಿ ನಶಿಸುತ್ತಿರುವ ಕಾಲಘಟ್ಟದಲ್ಲಿ ಬಾಲ್ಯದಲ್ಲಿ ಮಕ್ಕಳಿಗೆ ನಾಟಿ ಕೃಷಿಯ ಬಗ್ಗೆ ಹೋಮ್ಸ್ ಸಂಘಟಕರು ಅರಿವು ಮೂಡಿಸಿರುವುದು ಮೆಚ್ಚುಗೆಯ ಸಂಗತಿ ಎಂದು ಆನೆಕಾಡು ಅರಣ್ಯ ವಲಯ ಅಧಿಕಾರಿ ಮಧುಕುಮಾರ್ ಹೇಳಿದರು.

ಗದ್ದೆಹಳ್ಳದ ಹೋಮ್ಸ್ ಸಂಸ್ಥೆಯ ವತಿಯಿಂದ ಕೃತಿಕಾ, ಸದಾನಂದ ಕರುಂಬಯ್ಯ ಅವರ ಗದ್ದೆಯಲ್ಲಿ ಇತ್ತೀಚೆಗೆ ಆಯೋಹಿಸಿದ್ದ್ದ ಜಿಜಿಎ ನಾಟಿ ಉತ್ಸವದಲ್ಲಿ ಮಾತನಾಡಿ, ಪ್ರತಿಯೊಬ್ಬ ದಿನೇ ದಿನೆ ಭತ್ತ ಬೆಳೆಯುತ್ತಿರುವ ಪ್ರಮಾಣ ಕಡಿಮೆಯಾಗುತ್ತಿದೆ. ಹೀಗಾಗಿ ರೈತರು ಭತ್ತದ ಕೃಷಿಯ ಬಗ್ಗೆ ಕಾಳಜಿ ವಹಿಸಬೇಕಾಗಿದೆ ಎಂದರು.
ಮಡಿಕೇರಿ ಕೃಷಿ ವಿದ್ಯಾಲಯದ ವಿಸ್ತರಣಾ ಶಿಕ್ಷಣ ಘಟಕದ ಪ್ರಾಧ್ಯಾಪಕಿ ಡಾ.ಎಚ್.ಸಿ.ಲತಾ ಮಾತನಾಡಿದರು. ಲಯನ್ಸ್ ಸಂಸ್ಥೆ ಅಧ್ಯಕ್ಷ ಎಸ್.ಜಿ.ಶ್ರೀನಿವಾಸ್ ಚಾಲನೆ ನೀಡಿದರು. ವಿವಿಧ ಕ್ಷೇತ್ರದ ಸಾಧಕರಾದ ಕೆ.ಎಲ್.ಕುಶಾಲಿ, ಶಿಕ್ಷಕಿ ಶಾಂತಿ ದೇವರಾಜ್, ಅರ್ಪಿತಾ ಧರ್ಮಪ್ಪ, ಪ್ರೇಮಾ ಗಣೇಶ್ ಕಟ್ಟೆಮನೆ, ಭಯಾನಕ, ಭತ್ತದ ನಾಟಿ ಪ್ರವೀಣೆ ಕಮಲಾ ಅವರಿಗೆ ಜಿಜಿಎ ಶಕ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿವಿಧ ಶಾಲೆಗಳ 300ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡು ಭತ್ತದ ನಾಟಿ ಬಗ್ಗೆ ಅನುಭವ ಪಡೆದುಕೊಂಡರು.
ಉದ್ಯಮಿ ಪ್ರಸನ್ನ ಎಡಕೇರಿ, ಕುಶಾಲನಗರ ಗೌಡ ಸಮಾಜದ ಅಧ್ಯಕ್ಷ ಚಿಲ್ಲನ ಗಣಿ ಪ್ರಸಾದ್, ಮನೋರೋಗದ ವಿಶೇಷ ಶಿಕ್ಷಕಿ ಅನ್ನಮ್ ಜೀರಾ, ಮಡಿಕೇರಿ ಗೌಡ ಸಮಾಜದ ಅಧ್ಯಕ್ಷ ಪಿ.ಪಿ.ಜಯನಂದ, ಕೃತಿಕಾ ಸದಾನಂದ್, ಒಎಪಿಪಿಎ ಸಂಸ್ಥೆ ಮಾಲೀಕರಾದ ಗಂಗೂಬಾಯಿ, ಹೋಮ್ಸ್ ಸಂಸ್ಥೆಯ ಸಂಘಟಕರಾದ ಸನ್ಮಾನ್, ತೃಶಾಲ್ ಸನ್ಮಾನ್, ಗಾನ ಪಾರ್ಥ, ನಿಡುಮಲೆ ಮಾದವ, ಪಾರ್ಥ ಭೀಮಯ್ಯ, ಪವಿತ್ರಾ ಶೆಟ್ಟಿ, ಪ್ರದೀಶ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net