ಕರಾಟೆಯಲ್ಲಿ ವಿದ್ಯಾರ್ಥಿಗಳ ಸಾಧನೆ

 ಮೈಸೂರು ಟೆರೆಸ್ಸಿಯನ್ ಕಾಲೇಜಿನಲ್ಲಿ ನಡೆದ ಮೈಸೂರು ಓಪನ್ ಆಲ್ ಇಂಡಿಯಾ ಕರಾಟೆ ಪಂದ್ಯಾವಳಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳು. ಚೆಟ್ಟಿಯಾರಂಡ ದಿಲನ್ ತಿಮ್ಮಯ್ಯ, ಧೀರಜ್ ಕಾರ್ಯಪ್ಪ ಇತರರಿದ್ದರು.
ಮೈಸೂರು ಟೆರೆಸ್ಸಿಯನ್ ಕಾಲೇಜಿನಲ್ಲಿ ನಡೆದ ಮೈಸೂರು ಓಪನ್ ಆಲ್ ಇಂಡಿಯಾ ಕರಾಟೆ ಪಂದ್ಯಾವಳಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳು. ಚೆಟ್ಟಿಯಾರಂಡ ದಿಲನ್ ತಿಮ್ಮಯ್ಯ, ಧೀರಜ್ ಕಾರ್ಯಪ್ಪ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮೈಸೂರು ಓಪನ್ ಆಲ್ ಇಂಡಿಯಾ ಕರಾಟೆ ಪಂದ್ಯಾವಳಿ
ನಾಪೋಕ್ಲು: ಇತ್ತೀಚಿಗೆ ಮೈಸೂರು ಟೆರೆಸ್ಸಿಯನ್ ಕಾಲೇಜಿನಲ್ಲಿ ನಡೆದ ಮೈಸೂರು ಓಪನ್ ಆಲ್ ಇಂಡಿಯಾ ಕರಾಟೆ ಪಂದ್ಯಾವಳಿಯಲ್ಲಿ ನಾಪೋಕ್ಲು ಶ್ರೀ ರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಲಚನ್ ಪೊನ್ನಣ್ಣ ಹಾಗೂ ಲಿಯಾನ್ ಕರುಂಬಯ್ಯ ಭಾಗವಹಿಸಿ ಕಟಾ ವಿಭಾಗದಲ್ಲಿ ಕ್ರಮವಾಗಿ ದ್ವಿತೀಯ ಹಾಗು ತೃತೀಯ ಸ್ಥಾನವನ್ನು ಪಡೆದಿದ್ದಾರೆ.
ಜತೆಗೆ ನಾಪೋಕ್ಲು ಸೆಕ್ರೆಡ್ ಹಾರ್ಟ್ಸ್ ಶಾಲೆಯ ವಿದ್ಯಾರ್ಥಿ ದೈವಿಕ್ ಭಾಗವಹಿಸಿ ಕಟಾ ವಿಭಾಗದಲ್ಲಿ ದ್ವಿತೀಯ ಹಾಗು ಕುಮಿಟೆ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ಸಾಧನೆ ಮಾಡಿದ್ದಾರೆ.ಇವರು ಚೆಟ್ಟಿಯಾರಂಡ ದಿಲನ್ ತಿಮ್ಮಯ್ಯ ಹಾಗು ಧೀರಜ್ ಕಾರ್ಯಪ್ಪ ರವರಿಂದ ತರಬೇತು ಪಡೆಯುತಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net