ವಿದ್ಯಾರ್ಥಿ ನಾಯಕರ ಪದಗ್ರಹಣ ಸಮಾರಂಭ

ಕೊಡಗು ಸೈನಿಕ ಶಾಲೆಯಲ್ಲಿ ನೂತನ ವಿದ್ಯಾರ್ಥಿ ನಾಯಕರ ಪದಗ್ರಹಣ ಸ್ವೀಕಾರ ಸಮಾರಂಭ ನಡೆಯಿತು. ವಿಂಗ್ ಕಮಾಂಡರ್ ಮೊಹಮ್ಮದ್ ಶಾಜಿ, ವಿಬಿನ್ ಕುಮಾರ್ ಇದ್ದರು.
ಕೊಡಗು ಸೈನಿಕ ಶಾಲೆಯಲ್ಲಿ ನೂತನ ವಿದ್ಯಾರ್ಥಿ ನಾಯಕರ ಪದಗ್ರಹಣ ಸ್ವೀಕಾರ ಸಮಾರಂಭ ನಡೆಯಿತು. ವಿಂಗ್ ಕಮಾಂಡರ್ ಮೊಹಮ್ಮದ್ ಶಾಜಿ, ವಿಬಿನ್ ಕುಮಾರ್ ಇದ್ದರು.
Published on
ಕುಶಾಲನಗರ
ಕೂಡಿಗೆಯಲ್ಲಿ ಇರುವ ಕೊಡಗು ಸೈನಿಕ ಶಾಲೆಯಲ್ಲಿ ವಿದ್ಯಾರ್ಥಿ ನಾಯಕರ ಪದಗ್ರಹಣ ಸಮಾರಂಭ ಶಾಲೆಯ ಕುವೆಂಪು ವಿವಿದೊದ್ಧೇಶ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು. ನೂತನವಾಗಿ ಆಯ್ಕೆಯಾದ ವಿದ್ಯಾರ್ಥಿ ನಾಯಕರು ಸಮಾರಂಭದಲ್ಲಿ ಅಧಿಕೃತವಾಗಿ ತಮ್ಮ ಜವಾಬ್ದಾರಿಗಳನ್ನು ವಹಿಸಿಕೊಂಡರು.
ಕಾರ್ಯಕ್ರಮಕ್ಕೆ ಶಾಲೆಯ ಪ್ರಭಾರ ಪ್ರಾಂಶುಪಾಲ ವಿಂಗ್ ಕಮಾಂಡರ್ ಮಹಮದ್ ಶಾಜಿ ಮುಖ್ಯ ಅತಿಥಿಗಳಾಗಿ ಆಗಮಿಸಿ, ನೂತನವಾಗಿ ಆಯ್ಕೆಯಾದ ವಿದ್ಯಾರ್ಥಿ ನಾಯಕರುಗಳಿಗೆ ಬ್ಯಾಡ್ಜ್ಗಳನ್ನು ತೊಡಿಸುವ ಮೂಲಕ ಜವಾಬ್ದಾರಿಗಳನ್ನು ನೀಡಿದರು..
ಶಾಲೆಯ ಉಪನಾಯಕನಾಗಿ ಎಸ್.ಎಚ್. ಸಿದ್ಧಾಂತ್, ಶಾಲೆಯ ಶಿಸ್ತಿನ ಉಪನಾಯಕನಾಗಿ ಮಿತ್ರ, ಶೈಕ್ಷಣಿಕ ಉಪನಾಯಕನಾಗಿ ಹಿಮಾಂಕ್, ಭೋಜನಾಲಯದ ಉಪನಾಯಕನಾಗಿ ಹೆಚ್.ಎ. ಕೃಷ್ಣ, ಸಾಂಸ್ಕೃತಿಕ ವಿಭಾಗದ ಉಪನಾಯಕನಾಗಿ ಎ. ಕೆಡೆಟ್ ಅರ್ಜಾಕ್, ಕ್ರೀಡಾ ವಿಭಾಗದ ಉಪನಾಯಕಿಯಾಗಿ ದೀಪ್ತಿ ದೇವಿ, ಐ ಟಿ ವಿಭಾಗದ ಉಪನಾಯಕನಾಗಿ ಕಡೆಟ್ ರಿದಮ್ ಆಯ್ಕೆಯಾದರು.
ಇದೇ ಸಂದರ್ಭದಲ್ಲಿ ಶಾಲೆಯ ಎಲ್ಲಾ ನಿಲಯಗಳ ಉಪನಾಯಕರುಗಳಿಗೂ ನಿಲಯಗಳ ಬ್ಯಾಡ್ಜ್ಗಳನ್ನು ನೀಡಿ ಗೌರವಿಸಲಾಯಿತು. ನೂತನವಾಗಿ ಪದಗ್ರಹಣ ಮಾಡಿದ ವಿದ್ಯಾರ್ಥಿ ನಾಯಕರು ತಮ್ಮ ಕರ್ತವ್ಯಗಳನ್ನು ಪ್ರಾಮಾಣಿಕತೆ, ನಿಷ್ಠೆ ಮತ್ತು ಬದ್ಧತೆಯಿಂದ ನಿರ್ವಹಿಸುವುದಾಗಿ ಜಂಟಿಯಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಸಮಾರಂಭ ಉದ್ದೇಶಿಸಿ ಮಾತನಾಡಿದ ಪ್ರಭಾರ ಪ್ರಾಂಶುಪಾಲ ವಿಂಗ್ ಕಮಾಂಡರ್ ಮೊಹಮ್ಮದ್ ಶಾಜಿ ನೂತನವಾಗಿ ಆಯ್ಕೆಯಾದ ಉಪನಾಯಕರನ್ನು ಅಭಿನಂದಿಸಿದರು ಮತ್ತು ಶಾಲೆಯ ಮೌಲ್ಯಗಳು ಹಾಗೂ ಧ್ಯೇಯವಾಕ್ಯವನ್ನು ಎತ್ತಿಹಿಡಿಯುವಂತೆ ಕರೆ ನೀಡಿದರು. ತರಬೇತಿ ಮತ್ತು ದೈನಂದಿನ ಚಟುವಟಿಕೆಗಳ ಅವಧಿಯಲ್ಲಿ ಸಹವರ್ತಿ ವಿದ್ಯಾರ್ಥಿಗಳೊಂದಿಗೆ ವ್ಯವಹರಿಸುವಾಗ ಶಿಸ್ತು, ನಿಷ್ಪಕ್ಷಪಾತತೆ, ಪ್ರಾಮಾಣಿಕತೆ ಮತ್ತು ಆದರ್ಶ ನಾಯಕತ್ವದ ಗುಣಗಳನ್ನು ಪ್ರದರ್ಶಿಸುವುದು ಅತ್ಯಂತ ಮುಖ್ಯ ಎಂದು ಹೇಳಿದರು.
ಹಿರಿಯ ಶಿಕ್ಷಕ ವಿಬಿನ್ ಕುಮಾರ್, ಬೋಧಕ-ಬೋಧಕೇತರ ಸಿಬ್ಬಂದಿ, ಎನ್‌ಸಿಸಿ ಸಿಬ್ಬಂದಿ, ದೈಹಿಕ ಶಿಕ್ಷಕರು ಹಾಗೂ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net